
ವಾಷಿಂಗ್ಟನ್ : ಪುರುಷರೇ ಎಚ್ಚರ ನಿಮಗೂ ಇಂತಹ ಸಮಸ್ಯೆಗಳು ಕಾಡಬಹುದು. ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರವಾಗಿ ಯಾವ ಪುರುಷನಲ್ಲಿ ಸ್ಪರ್ಮ್ ಕಡಿಮೆ ಇರುತ್ತದೆಯೋ ಅಂತಹವರಲ್ಲಿ ಮಕ್ಕಳಾಗುವುದರ ಸಮಸ್ಯೆಯೊಂದಿಗೆ ಆರೋಗ್ಯ ಸಮಸ್ಯೆಯೂ ಹೆಚ್ಚು ಕಾಡುತ್ತದೆ ಎಂದು ಹೇಳಿದೆ.
ಅಲ್ಲದೇ ಅನಾರೋಗ್ಯ ಕಾಡುವ ಅಂಶ ಅವರಲ್ಲಿ ಶೇ.20ರಷ್ಟು ಹೆಚ್ಚು ಎಂದೂ ಕೂಡ ಹೇಳಲಾಗುತ್ತದೆ. ಇವರಿಗೆ ಪ್ರಮುಖವಾಗಿ ಕಾಡುವ ಸಮಸ್ಯೆಗಳೆಂದರೆ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಶೇಖರಣೆಯಾಗುತ್ತದೆ. ಹಾಗೂ ರಕ್ತದ ತ್ತಡ ಸಮಸ್ಯೆಯೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತದೆ ಎನ್ನಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚು ಕಾಡುತ್ತಿದ್ದು, ಆಧುನಿಕ ಜೀವನ ಶೈಲಿ ಹಾಗೂ ಆಹಾರಗಳೇ ಕಾರಣ ಎನ್ನಲಾಗುತ್ತದೆ. ಅಲ್ಲದೇ ಇವರಲ್ಲಿ ಡಯಾಬಿಟೀಸ್ ಕಾಡುವ ಸಾಧ್ಯತೆಯೂ ಕೂಡ ಹೆಚ್ಚಿದೆ.
ಹೃದಯದ ಸಮಸ್ಯೆಗಳೂ ಕೂಡ ಕಾಡಬಹುದು ಎಂದು ಸಂಶೋಧನೆಯೊಂದು ದೃಢಪಡಿಸಿದೆ. ಎಲುಬುಗಳ ಸಮಸ್ಯೆಯು ಕಾಡುವ ಸಾಧ್ಯತೆಯೂ ಕೂಡ ಹೆಚ್ಚಿಸುತ್ತದೆ ಎಂದು ಈ ಸಂಶೋಧನೆಯು ತಿಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.