ಕತ್ತುನೋವು ಕಾಣಿಸಿಕೊಂಡರೆ ಏನು ಮಾಡಬೇಕು?

By Suvarna Web DeskFirst Published Mar 17, 2018, 7:00 PM IST
Highlights

ಸದಾ ಕಂಪ್ಯೂಟರ್ ಮುಂದೆ ಕೂತೇ ಕೆಲಸ ಮಾಡುವ ಬಹುತೇಕರಲ್ಲಿ ಕತ್ತಿನ ಸಮಸ್ಯೆ ಇದೀಗ ಕಾಮನ್. ಇದಕ್ಕೆ ಪರಿಹಾರವೇನು, ಸಿಂಪಲ್ ಚಿಕಿತ್ಸೆ ಏನೆಂದು ಉತ್ತರಿಸಿದ್ದಾರೆ ತಜ್ಞ ವೈದ್ಯರು.

ಸದಾ ಕಂಪ್ಯೂಟರ್ ಮುಂದೆ ಕೂತೇ ಕೆಲಸ ಮಾಡುವ ಬಹುತೇಕರಲ್ಲಿ ಕತ್ತಿನ ಸಮಸ್ಯೆ ಇದೀಗ ಕಾಮನ್. ಇದಕ್ಕೆ ಪರಿಹಾರವೇನು, ಸಿಂಪಲ್ ಚಿಕಿತ್ಸೆ ಏನೆಂದು ಉತ್ತರಿಸಿದ್ದಾರೆ ತಜ್ಞ ವೈದ್ಯರು.

- ಡಾ. ಗೌತಮ್

ಕತ್ತುನೋವು ವಯಸ್ಸಾದವರಿಗಿಂತ ಚಿಕ್ಕವಯಸ್ಸಿನವರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ತಿದೆಯಲ್ಲಾ? 

ಇದಕ್ಕೆ ಪ್ರಧಾನ ಕಾರಣವೇ ಇತ್ತೀಚೆಗಿನ ಜೀವನಶೈಲಿಯಲ್ಲಿ ಉಂಟಾಗಿರುವ ಬದಲಾವಣೆ. ಕೆಲಸದ ಒತ್ತಡ, ತ್ರಾಸದಾಯಕ ಕೆಲಸ, ಸಮಯಬದ್ಧತೆ ಇಲ್ಲದ ಆಹಾರ ಸೇವನೆ, ವಿಶ್ರಾಂತಿ ಇಲ್ಲದ ಕೆಲಸ, ನಿದ್ರಾಹೀನತೆ, ಅತಿಯಾದ ಮೊಬೈಲ್ ಫೋನ್- ದ್ವಿಚಕ್ರ ವಾಹನ ಬಳಕೆ, ವ್ಯಾಯಾಮದ ಕೊರತೆ, ಎತ್ತರದ ತಲೆದಿಂಬು ಬಳಕೆ ಹಾಗೂ ಕುಳಿತುಕೊಳ್ಳುವ/ಮಲಗುವ ಪೋಸ್ಚರ್‌ನಲ್ಲಿ ವ್ಯತ್ಯಾಸ ಇತ್ಯಾದಿ.

ಕೆಲವೊಮ್ಮೆ ಬಗ್ಗಿ ಮೇಲೇಳುವಾಗ, ಬೆಳಗ್ಗೆ ಏಳುವಾಗ ಕತ್ತಿನಲ್ಲಿ ಉಳುಕು ಕಾಣಿಸಿಕೊಳ್ಳುವುದು ಯಾಕೆ?

ಕತ್ತಿಗೆ ತ್ರಾಸವಾದರೆ ಉಳುಕುವುದು ಸಹಜ. ಇದು  sudden jerky movementನಿಂದಲೂಆಗಬಹುದು. ದಿನನಿತ್ಯದ ಒತ್ತಡದಿಂದ ಮಾಂಸಖಂಡಗಳ ನಿಶಕ್ತಿಯಿಂದ ಕೂಡಾ ಆಗಬಹುದು. ಕೆಲವೊಮ್ಮೆ ಎತ್ತರದ ತಲೆದಿಂಬು ಬಳಸುವುದರಿಂದ  ಅಥವಾ ಮಲಗುವ ಪೋಸ್ಚರ್‌ನಲ್ಲಿ ವ್ಯತ್ಯಾಸ ಇದ್ದರೆ, ಥಂಡಿ ಹವೆ ಇತ್ಯಾದಿಯಿಂದ ಕೂಡಾ ಕತ್ತಿನಲ್ಲಿ ಉಳುಕು ಹಾಗೂ  ನೋವು ಕಂಡು ಬರುತ್ತದೆ. 

- ಬೊಜ್ಜಿನಿಂದ ಕತ್ತುನೋವು ಬರಬಹುದೇ? 
ಬೊಜ್ಜಿನಿಂದ ಕತ್ತು ನೋವು ಬರಲು ಸಾಧ್ಯತೆ ಕಡಿಮೆ. ಅದರೆ ಒಬೆಸಿಟಿಯಿಂದ ರಕ್ತ ಸಂಚಾರಕ್ಕೆ ತೊಂದರೆ ಆಗಬಹುದು. ಇದರಿಂದ muscle stiffness/spasm ಬರುವ ಸಾಧ್ಯತೆ ಇದೆ.

-  ಸ್ಪೈನಲ್ ಕಾರ್ಡ್‌ನ ನೋವಿಗೂ ಕತ್ತು ನೋವಿಗೂ ಸಂಬಂಧ ಇದೆಯಾ? 
ಬೆನ್ನೆಲುಬಿನ ಯಾವ ಹಂತದಲ್ಲಿ ತೊಂದರೆ ಇದೆಯೋ, ಅದಕ್ಕೆ ಅನುಗುಣವಾಗಿ ನೋವು ಕೂಡಾ ಕಾಣಿಸಿಕೊಳ್ಳುತ್ತದೆ. ಸರ್ವೈಕಲ್ ಸ್ಪೈನ್‌ನಲ್ಲಿ ಬರೋ ತೊಂದರೆ, ಉದಾಹರಣೆಗೆ ಸರ್ವೈಕಲ್ ಸ್ಪೊಂಡ್‌ಲಾಸಿಸ್ ಅಥವಾ ಪ್ಯಾರಾಸ್ಪೈನಲ್ ಮಸಲ್ ಸ್ಪ್ಯಾಸಮ್‌ನಿಂದ ಕತ್ತು ನೋವು ಬರಬಹುದು.

-  ಕತ್ತುನೋವು ಬಂದ ತಕ್ಷಣ ಏನು ಮಾಡಬೇಕು?
ಕತ್ತು ನೋವು ಬಂದಾಗ ಮೊದಲು ಕತ್ತಿಗೆ ತ್ರಾಸ ಮಾಡುವಂತಹ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡಬೇಕು ಹಾಗೂ ವಿಶ್ರಾಂತಿ ಪಡೆದುಕೊಳ್ಳಬೇಕು. ಬಿಸಿನೀರಿನ ಶಾಖ ಕೊಡುವುದರಿಂದ ಸ್ನಾಯುಗಳಿಗೆ ವಿಶ್ರಾಂತಿ, ಆರಾಮ ಸಿಗುತ್ತದೆ. ಜೊತೆಗೆ ನೋವು ನಿವಾರಣಾ ಜೆಲ್, ಸ್ಪ್ರೇ ಇತ್ಯಾದಿಬಳಸಿ. ನಂತರ ತಪ್ಪದೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. 

- ಕತ್ತು ನೋವು ಬರದಂತೆ ವ್ಯಾಯಾಮಗಳೇನಾದರೂ ಇವೆಯಾ?
ಕತ್ತಿನ ಸ್ನಾಯುಗಳ ಶಕ್ತಿ ಹೆಚ್ಚಿಸಲು ಹಾಗೂ ಅಲ್ಲಿನ ರಕ್ತ ಸಂಚಾರ ಹೆಚ್ಚಿಸಲು ಹಲವಾರು ರೀತಿಯ ಫಿಸಿಯೋಥೆರಪಿ ಎಕ್ಸರ್‌ಸೈಸ್‌ಗಳು, ಯೋಗಾಸನಗಳು ಇವೆ. ಸ್ವತಃ ಅಭ್ಯಾಸ ಮಾಡುವ ಮುನ್ನ ತಜ್ಞರನ್ನುಭೇಟಿ ಮಾಡಿ ಸೂಕ್ತವಾದ ಸಲಹೆ ಪಡೆಯುವುದು ಉತ್ತಮ.
 

click me!