ಕಂಬಳಿ ಹುಳದಂಥ ಹುಬ್ಬೇ ಗಂಡಿಗೆ ಆಕರ್ಷಕವಂತೆ!

Published : May 08, 2019, 12:43 PM IST
ಕಂಬಳಿ ಹುಳದಂಥ ಹುಬ್ಬೇ ಗಂಡಿಗೆ ಆಕರ್ಷಕವಂತೆ!

ಸಾರಾಂಶ

ಈಚಿನ ದಿನಗಳಲ್ಲಿ ತಲೆಯೊಂದನ್ನು ಬಿಟ್ಟು ದೇಹದ ಉಳಿದೆಲ್ಲ ಭಾಗ ವ್ಯಾಕ್ಸ್ ಮಾಡುವುದು ಯುವತಿಯರಿಗೆ ಚಟ ಆಗಿದೆ. ಆದರೆ, ಇನ್ನು ಮುಂದೆ ಆ ಹುಬ್ಬನ್ನು ಬಿಲ್ಲಿನಂತೆ ಬಾಗಿಸದೆ ಕಂಬಳಿ ಹುಳದಂತೆ ಬೆಳೆಸುವುದು ಬೆಟರ್. ಯಾಕೆ ಅಂತೀರಾ?

ದಪ್ಪಗೆ, ಕಾಡಿನಂತೆ  ಹಬ್ಬಿರುವ ಹುಬ್ಬುಗಳು ಯುವಕರನ್ನು ಆಕರ್ಷಿಸುವಷ್ಟು ತೆಳುವಾಗಿ ಶೇಪ್ ನೀಡಿದ  ಐಬ್ರೋಗಳು ಸೆಳೆಯುವುದಿಲ್ಲವಂತೆ! ಮಿಚಿಗನ್‌ನ ಓಕ್‌ಲ್ಯಾಂಡ್ ಯೂನಿವರ್ಸಿಟಿ ನಡೆಸಿದ ಅಧ್ಯಯನದಿಂದ ಈ ವಿಷಯ ಬೆಳಕಿಗೆ ಬಂದಿದೆ. 

ಸುಮಾರು ಸಾವಿರ ಯುವಕರು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದು, ಅವರಿಗೆ ಕಂಬಳಿ ಹುಳದಂತ ಹುಬ್ಬಿನ ಹಾಗೂ ತೆಳ್ಳನೆಯ ಹುಬ್ಬಿನ ಯುವತಿಯರ ಫೋಟೋಗಳನ್ನು ನೀಡಲಾಗಿತ್ತಂತೆ. ಬಹುತೇಕ ಯುವಕರು ದಪ್ಪ ಹುಬ್ಬಿನ ಹುಡುಗಿಯರು ಹೆಚ್ಚು ಆಕರ್ಷಕವೆನಿಸುತ್ತಾರೆ ಎಂದಿದ್ದಾರೆ. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಳನ್ನು ನೋಡಿದ ಬಳಿಕ ಕನ್ನಡದ ಕುಮಾರ ಕಂಠೀರವರೂ ಇದೇ ಮಾತನ್ನು ಹೇಳುತ್ತಾರೆ. 

ಮುಂಚೆ ದಪ್ಪನೆಯ ಐಬ್ರೋ ಇದ್ದರೆ ಪುರುಷರಂತೆ ಎಂದು ಭಾವಿಸಲಾಗುತ್ತಿತ್ತು. ಈಗ ಟ್ರೆಂಡ್ ಬದಲಾಗಿದೆ. ಈ ಆಯ್ಕೆಯು ಸಧ್ಯದ ಫ್ಯಾಷನ್ ಟ್ರೆಂಡ್‌ ಅನ್ನು ಪ್ರತಿಫಲಿಸುತ್ತಿದೆ, ಅಲ್ಲದೆ ಲಾಂಗ್ ಟರ್ಮ್ ರಿಲೇಶನ್‌ಶಿಪ್ ಬಯಸುವ ಯುವಕರು ದಪ್ಪ ಹುಬ್ಬಿನ ಯುವತಿಯರನ್ನು ಬಯಸುತ್ತಾರೆ ಎನ್ನುತ್ತಾರೆ ಸಂಶೋಧಕಿ ಡಾ. ಲೀಸಾ ವೆಲ್ಲಿಂಗ್. 

Fashionಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್ ಆ್ಯಂಡ್ ಬೋಲ್ಡ್ ಐಬ್ರೋಸ್‌ ಟ್ರೆಂಡ್ ಆಗುತ್ತಿದ್ದಂತೆಯೇ ಬ್ಯೂಟಿ ಇಂಡಸ್ಟ್ರಿ ಹೊಸ ಶ್ಯಾಡೋಗಳು, ದಪ್ಪನೆಯ ಪೆನ್ಸಿಲ್, ಜೆಲ್‌ಗಳ ತಯಾರಿಕೆಯಲ್ಲಿ ನಿರತವಾಗಿದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೆನ್‌‍‌ಝೀ ದುಡಿಯುವ ಶೇಕಡಾ 70ರಷ್ಟು ಹಣ ಖರ್ಚು ಮಾಡುತ್ತಿರುವುದು ಎಲ್ಲಿ? ಅಧ್ಯಯನ ವರದಿ
ಶಾಲೆ ಬಿಟ್ಟ ಹುಡುಗ ₹48,000 ಕೋಟಿ ಒಡೆಯ, 15 ಮಕ್ಕಳಲ್ಲಿ 11ನೇ ಮಗನ ಚಿನ್ನದ ಸಾಮ್ರಾಜ್ಯ