ಬಾಯಲ್ಲಿ ನೀರು ತರಿಸೋ ಅಪ್ಪೆ ಸಾರಿನ ರೆಸಿಪಿ

By Web Desk  |  First Published May 7, 2019, 6:24 PM IST

ಕೆಲವೆಡೆ ಕಾರ್ಯಕ್ರಮಗಳಲ್ಲಿ, ಅದೂ ಮಾವಿನ ಕಾಯಿ ಸೀಸನ್‌ನಲ್ಲಿ ಅಪ್ಪೆ ಸಾರು ಊಟದ ರುಚಿ ಹೆಚ್ಚಿಸುತ್ತದೆ. ಹೆಸರು ಕೇಳಿದರೆ ಬಾಯಲ್ಲಿ ನೀರು ಬರಿಸೋ ಈ ಸಾರು ಮಾಡುವ ರೆಸಿಪಿ ಇಲ್ಲಿದೆ.


ಮಾವಿನಕಾಯಿ ಮತ್ತು ಜೀರಿಗೆ ಮೆಣಸನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. 
ನಂತರ ನೀರು ಬೆರೆಸಿ ಸೋಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. 
ಕೊನೆಯಲ್ಲಿ ಕೊಬ್ಬರಿ ಎಣ್ಣೆಯೊಂದಿಗೆ ಮಾಮೂಲಿಗಿಂತ ತುಸು ಹೆಚ್ಚಿಗೆ ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಹಾಕಬೇಕು. 
ಆದರೆ, ಕೊಬ್ಬರಿ ಎಣ್ಣೆಯಲ್ಲಿಯೇ ಒಗ್ಗರಣೆ ಹಾಕಬೇಕು.
ಮಾವಿನಕಾಯಿ ಮಾತ್ರ ಪರಿಮಳದ ಅಪ್ಪೆಯೇ ಆಗಬೇಕು! 

ಆದರೆ, ಈ ಸಾರಿಗೆ ಇಂತಿಷ್ಟೇ ಪ್ರಮಾಣವೆಂದು ಹೇಳುವುದು ಅಸಾಧ್ಯ. ರುಚಿಗೆ ತಕ್ಕಷ್ಟು ಉಪ್ಪು, ಖಾರ ಹಾಕಬೇಕು.

Tap to resize

Latest Videos

undefined

ಸಾರಿನ ರುಚಿ ಹೆಚ್ಚಲು ಒಗ್ಗರಣೆ ಹಾಕಿದ ತಕ್ಷಣ ಒಂದು ಹತ್ತು ನಿಮಿಷ ಪಾತ್ರೆಯನ್ನು ಮುಚ್ಚಿಡಬೇಕು. ಆಗ ಸಾರಿನ ಪರಿಮಳ ಗಾಳಿಯಲ್ಲಿ ಸೇರಿ ಹೋಗುವುದಿಲ್ಲ.
 

- ರಶ್ಮಿ ಜಿ ರಾವ್, ಕಾರ್ಗಲ್

ರುಚಿ ರುಚಿ ಅಡುಗೆ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ

click me!