
ಮೊದಲ ಮೊದಲ ಡೇಟಿಂಗ್...
ಡೇಟಿಂಗ್‌ಗೆ ಹೋಗುವಾಗ ಯುವತಿಯರು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಉಡುಪು, ಮೇಕಪ್, ಹಾವ-ಭಾವಕ್ಕೆ ಹೆಚ್ಚಿನ ಗಮನ ನೀಡುತ್ತಾರೆ, ಯುವಕರು ಇವಕ್ಕೆಲ್ಲ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಹಾಗಂಥ ಶರ್ಟ್, ಪ್ಯಾಂಟ್, ಹೇರ್‌ಸ್ಟೈಲ್ ಎಂದು ತಲೆಯನ್ನು ಕೆಡಿಸಿಕೊಂಡಿರುತ್ತಾರೆ, ಹೆದರಿರುತ್ತಾರೆ. ಆ ಯುವತಿ ಇಷ್ಟವಾದರಂತೂ ಮುಗೀತು ಕಥೆ. ಹುಡುಗರು ರಾತ್ರಿ ಇಡೀ ನಿದ್ರೆನೇ ಮಾಡೋಲ್ಲ. ಹುಡುಗಿಯೊಂದಿಗೆ ಯಾವ ವಿಚಾರದ ಕುರಿತು ಮಾತನಾಡಬೇಕು? ಯಾವ ಸ್ಥಳಕ್ಕೆ ಆಕೆಯನ್ನು ಕರೆದೊಯ್ಯುವುದು? ಆಕೆಯ ಗಮನ ಸೆಳೆಯಲು ತಾನೇನು ಮಾಡಬೇಕು? ಮುಂತಾದ ವಿಚಾರಗಳೂ ಇದರಲ್ಲಿ ಸೇರಿರುತ್ತವೆ.
ಅದೇ ಹುಡುಗಿಯನ್ನು ಡೇಟಿಂಗ್‌ಗೆ ಅಹ್ವಾನಿಸಿದಾಗ....
ಯುವಕರಿಗೆ ಹೋಲಿಸಿದಾಗ ಯುವತಿಯರೇ ಹೆಚ್ಚು ಸೂಕ್ಷ್ಮ ಮನಸ್ಸಿನವರು ಎನ್ನಬಹುದು. ಆದರೆ ಹುಡುಗರೂ ಇದರಿಂದ ಹೊರತಾಗಿಲ್ಲ ಎನ್ನುವುದೂ ಸತ್ಯ. ಯಾಕೆಂದರೆ ತಾನು ಮೊದಲ ಬಾರಿ ಡೇಟಿಂಗ್ ಮಾಡಿದ ಯುವತಿಯನ್ನು ಎರಡನೇ ಬಾರಿ ಆಹ್ವಾನಿಸುವಾಗ ಅವರೆಷ್ಟು ಸೂಕ್ಷ್ಮ ಮನಸ್ಸಿನವರು ಎಂಬುವುದು ತಿಳಿದು ಬರುತ್ತದೆ. ಎರಡನೇ ಬಾರಿ ಆಹ್ವಾನಿಸುವಾಗ ಹುಡುಗಿ ತನ್ನನ್ನು ತಪ್ಪಾಗಿ ತಿಳಿದುಕೊಳ್ಳುವಳೇ? ಆಕೆ ನಿರಾಕರಿಸುವಳೇ? ಇವೆಲ್ಲದರ ಕುರಿತು ಯೋಚಿಸಿ ಚಳಿಯಲ್ಲಿಯೂ ಬೆವರುತ್ತಾನೆ.
ಹುಡುಗಿಯೊಂದಿಗೆ ಪಬ್‌ನಲ್ಲಿರುವಾಗ..
ಯುವಕನೊಬ್ಬ ಪಬ್‌ನಲ್ಲಿ ತನ್ನ ಗೆಳೆಯರೊಂದಿಗೆ ಅದೆಷ್ಟೇ ಮದ್ಯ ಸೇವಿಸಿ ಮಜಾ ಮಾಡಬಹುದು. ಆದರೆ ತಾನಿಷ್ಟಪಟ್ಟ ಹುಡುಗಿ ಪಬ್‌ನಲ್ಲಿ ತನ್ನೊಂದಿಗಿದ್ದರೆ ಆತ ಬಹಳ ಗಾಬರಿಪಟ್ಟುಕೊಳ್ಳುತ್ತಾನೆ. ತನ್ನೊಂದಿಗಿರುವ ಹುಡುಗಿಯ ಮನದಲ್ಲಿ ತನ್ನ ಕುರಿತಾಗಿ ಕೀಳು ಭಾವನೆ ಮೂಡಬಹುದು ಎಂಬ ಭಯ ಯುವಕರಿಗೆ.
ಯುವತಿಯ ವೈಯಕ್ತಿಕ ಜೀವನದ ಕೇಳುವಾಗ...
ಒಂದು ಹುಡುಗಿಯ ಹಿನ್ನೆಲೆ ಕೇಳುವಾಗ ಸಹಜವಾಗಿಯೇ ಹುಡುಗರು ಸಣ್ಣದಾಗಿ ಬೆವರುತ್ತಾರೆ. ನಮ್ಮ ಮುಂದಿರುವವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ? ಎಂಬುದನ್ನು ಯೋಚಿಸಿಯೇ ಗಾಬರಿಗೊಳ್ಳುತ್ತಾರೆ. ಹೀಗಾಗಿಯೇ ಯುವಕನೊಬ್ಬ, ಯುವತಿಯ ಬಳಿ ಆಕೆಯ ಮನೆ, ಕುಟುಂಬ, ರಿಲೇಷನ್‌ಶಿಪ್ ಮುಂತಾದ ವಿಚಾರಗಳನ್ನು ಕೇಳುವಾಗ ಹುಡುಗಿ ತನ್ನಿಂದ ದೂರ ಸರಿಯಬಹುದು ಎಂದು ಅತ್ಯಂತ ಹೆಚ್ಚು ಆತಂಕಪಟ್ಟುಕೊಳ್ಳುತ್ತಾನೆ.
ಹುಡುಗಿಗೆ ಪ್ರಪೋಸ್ ಮಾಡುವಾಗ...
ಹುಡುಗನೊಬ್ಬ ಹುಡುಗಿಗೆ ಪ್ರೊಪೋಸ್ ಮಾಡುವ ವೇಳೆ ಆ ಯುವತಿ ನರ್ವಸ್ ಆಗುವುದರಲ್ಲಿ ಅನುಮಾನವೇ ಇಲ್ಲ. ಅವಳಿಗಿಂತಲೂ ಅವನಿಗೇ ಹೆಚ್ಚು ಆತಂಕ. ಎಲ್ಲಿ ನಕರಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಾಳೋ ಎನ್ನುವ ಭಯ ಯುವಕರಿಗೆ. ಅಂತೂ ಇಂತೂ ಕಷ್ಟಪಟ್ಟು ಪ್ರಪೋಸ್ ಮಾಡುತ್ತಾರೆ. ಉತ್ತರ ಕೊಡುವುದು ಲೇಟ್ ಆಯಿತೋ, ಮುಗೀತು ಕಥೆ. ಮತ್ತಷ್ಟು ಆತನ ಆತಂಕ ಹೆಚ್ಚುವುದು ಸುಳ್ಳಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.