(ವಿಡಿಯೋ)ಯು ಟ್ಯೂಬ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ 106 ವರ್ಷದ ಈ ಅಜ್ಜಿ!

By Precilla DiasFirst Published May 1, 2017, 12:48 AM IST
Highlights

ವ್ಯಕ್ತಿಯೊಬ್ಬನಿಗೆ 60 ವರ್ಷ ತುಂಬುತ್ತಿದ್ದಂತೆಯೇ ಅವರು ವೃದ್ಧರಾಗುತ್ತಿದ್ದಾರೆ ಎಂದು ಜನರು ಮಾತನಾಡಲಾರಂಭಿಸುತ್ತಾರೆ. ಇನ್ನು ಇವರಿಗೆ ಯಾವುದಾದರೂ ಹೊಸ ಟೆಕ್ನಿಕ್ ಕಲಿಯಿರಿ ಎಡಂದರೆ 'ಇದನ್ನೆಲ್ಲಾ ಈಗ ಕಲಿತು ಏನು ಪ್ರಯೋಜನ? ಎಂದು ಕೇಳುತ್ತಾರೆ. ಇಂತಹ ಮನಸ್ಥಿತಿಯುಳ್ಳ ಪ್ರತಿಯೊಬ್ಬ ಹಿರಿಯ ವ್ಯಕ್ತಿಗೂ ಆಂಧ್ರಪ್ರದೇಶದ 106 ವರ್ಷದ ಈ ಅಜ್ಜಿಯೇ ರೋಲ್ ಮಾಡೆಲ್!. ತನ್ನ ವಿಡಿಯೋಗಳಿಂದ ಇದೀಗ ಈ ಅಜ್ಜಿ ಯೂ ಟ್ಯೂಬ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅಷ್ಟಕ್ಕೂ ಇವರು ಅಪ್ಲೋಡ್ ಮಾಡಿದ ಆ ವಿಡಿಯೋಗಳು ಯಾವುದು? ಅವುಗಳಲ್ಲಿ ಅಂತಹುದ್ದೇನಿದೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಹೈದರಾಬಾದ್(ಮೇ.01): ವ್ಯಕ್ತಿಯೊಬ್ಬನಿಗೆ 60 ವರ್ಷ ತುಂಬುತ್ತಿದ್ದಂತೆಯೇ ಅವರು ವೃದ್ಧರಾಗುತ್ತಿದ್ದಾರೆ ಎಂದು ಜನರು ಮಾತನಾಡಲಾರಂಭಿಸುತ್ತಾರೆ. ಇನ್ನು ಇವರಿಗೆ ಯಾವುದಾದರೂ ಹೊಸ ಟೆಕ್ನಿಕ್ ಕಲಿಯಿರಿ ಎಡಂದರೆ 'ಇದನ್ನೆಲ್ಲಾ ಈಗ ಕಲಿತು ಏನು ಪ್ರಯೋಜನ? ಎಂದು ಕೇಳುತ್ತಾರೆ. ಇಂತಹ ಮನಸ್ಥಿತಿಯುಳ್ಳ ಪ್ರತಿಯೊಬ್ಬ ಹಿರಿಯ ವ್ಯಕ್ತಿಗೂ ಆಂಧ್ರಪ್ರದೇಶದ 106 ವರ್ಷದ ಈ ಅಜ್ಜಿಯೇ ರೋಲ್ ಮಾಡೆಲ್!. ತನ್ನ ವಿಡಿಯೋಗಳಿಂದ ಇದೀಗ ಈ ಅಜ್ಜಿ ಯೂ ಟ್ಯೂಬ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅಷ್ಟಕ್ಕೂ ಇವರು ಅಪ್ಲೋಡ್ ಮಾಡಿದ ಆ ವಿಡಿಯೋಗಳು ಯಾವುದು? ಅವುಗಳಲ್ಲಿ ಅಂತಹುದ್ದೇನಿದೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಆಂಧ್ರ ಪ್ರದೇಶದ ಮಸ್ತನಮ್ಮಾ ಹೆಸರಿನ ಅಜ್ಜಿಗೆ ಈಗ 106 ವರ್ಷ. ಇವರು ತಮ್ಮ ವಿಡಿಯೋಗಳಿಂದಲೇ ಇದೀಗ ಜಗತ್ತಿನಾದ್ಯಂತ ಫೇಮಸ್ ಆಗಿದ್ದಾರೆ. ಅಮ್ಮ ಪಾರಂಪರಿಕವಾಗಿ ಅತ್ಯಂತ ಸ್ವಾದಿಷ್ಟಕರ ಆಹಾರ ತಯಾರಿಸುವ ವಿಧಾನವನ್ನು ವಿಡಿಯುಓ ಮೂಲಕ ಯೂ ಟ್ಯೂಬ್'ಗೆ ಅಪ್ಲೋಡ್ ಮಾಡಿ, ಜಗತ್ತಿಗೆ ತಮ್ಮಲ್ಲಿರುವ ಕಲೆಯನ್ನು ಪರಿಚಯಿಸುತ್ತಿದ್ದಾರೆ. ಇವರಲ್ಲಿರುವ ಆ ಕಲೆಯನ್ನು ಜನರು ಎಷ್ಟರ ಮಟ್ಟಿಗೆ ಇಷ್ಟ ಪಟ್ಟಿದ್ದಾರೆ ಎಂದು ತಿಳಿಯಲು ಇವರ ಯೂ ಟ್ಯೂಬ್ ಚಾನೆಲ್'ನ್ನು ಒಮ್ಮೆ ಗಮನಿಸಿದರೆ ತಿಳಿಯುತ್ತದೆ. ಯಾಕೆಂದರೆ Country Foods ಹೆಸರಿನ ಇವರ ಚಾನೆಲ್'ನ್ನು ಈಗಾಗಲೇ 25ಕ್ಕೂ ಅಧಿಕ ಮಂದಿ ಸಬ್ಸ್ರೈಬ್ ಮಾಡಿದ್ದಾರೆ.

ಮಸ್ತನಮ್ಮಾ ಯೂ ಟ್ಯೂಬ್'ನಲ್ಲಿ ಮಿಂಚುತ್ತಿರುವ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಗೆಗೂ ಪಾತ್ರರಾಗಿದ್ದಾರೆ. ಸದ್ಯ ಿವರ ಈ ಚಾನೆಲ್'ನ್ನು ಇವರ ಮೊಮ್ಮಗ ಲಕ್ಷ್ಮಣ್ ನೋಡಿಕೊಳ್ಳುತ್ತಿದ್ದಾರೆ. ಅಮ್ಮಾ ಅಪ್ಪಟ ದೇಸೀ ಶೈಲಿಯಲ್ಲಿ ಅಡುಗೆ ತಯಾರಿಸುತ್ತಾರೆ. ಸಸ್ಯಹಾರಿ ಹಾಗೂ ಮಾಂಸಹಾರಿ ಎರಡೂ ವಿಧದ ತಿಂಡಿ ಮಾಡುವ ಇವರು ಇದನ್ನು ತಯಾರಿಸುವ ರೀತಿ ನೋಡುವುದೇ ಖುಷಿ ನೀಡುತ್ತದೆ. ಮಸ್ತನಮ್ಮಾ ಹಾಗೂ ಅವರ ಮೊಮ್ಮಗನ ಈ ಪ್ರಯೋಗ ಭಾರತದ ಪಾರಂಪರಿಕವಾಗಿ ಅಡುಗೆ ತಯಾರಿಸುವ ಕಲೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುತ್ತಿದೆ.   

ಇವರು ಯೂ ಟ್ಯೂಬ್ ಸ್ಟಾರ್ ಮಾತ್ರವಲ್ಲದೇ, ಭಾರತದ ಪಾರಂಪರಿಕ ಪದ್ಧತಿಯನ್ನು ವಿಶ್ವಕ್ಕೇ ಪರಿಚಯಿಸುತ್ತಿರುವ, ಈ ಮಣ್ಣಿನ ಹೆಮ್ಮೆಯ ನಾರಿ ಎನ್ನಬಹುದು. ಇಷ್ಟೇ ಅಲ್ಲದೇ ತಮ್ಮಿಂದ ಇನ್ನೇನು ಸಾಧ್ಯವಿಲ್ಲ ಎಂದು ಜೀವನದಲ್ಲಿ ಹತಾಶರಾಗಿರುವ ಪ್ರತಿಯೊಬ್ಬರಿಗೂ ತಾವು ಸಾಧಿಸಬಲ್ಲೆವು ಎಂದು ವಿಶ್ವಾಸ ತುಂಬುವ ಸ್ಪೂರ್ತಿಯ ಸೆಲೆಯೂ ಹೌದು.

ಇವರ ಪೇಜ್'ನಲ್ಲಿರುವ ಪಾರಂಪರಿಕವಾಗಿ ಸ್ವಾದಿಷ್ಟ ಅಡುಗೆ ತಯಾರಿಸುವ ವಿಧಾನಗಳುಳ್ಳ ಕೆಲ ಆಯ್ದ ವಿಡಿಯೋಗಳನ್ನು ಈ ಕೆಳಗೆ ನೀಡಲಾಗಿದೆ.

 

 

 

 

 

 

 

 

click me!