(ವಿಡಿಯೋ)ಜೇಡ ಹಿಡಿಯಲು ಹೋದ ಯುವಕ: ಮುಂದೆ ನಡೆದ ಅಚಾತುರ್ಯ ಕಂಡು ಹೌಹಾರುತ್ತೀರಿ..

Published : Apr 26, 2017, 05:20 AM ISTUpdated : Apr 11, 2018, 01:04 PM IST
(ವಿಡಿಯೋ)ಜೇಡ ಹಿಡಿಯಲು ಹೋದ ಯುವಕ: ಮುಂದೆ ನಡೆದ ಅಚಾತುರ್ಯ ಕಂಡು ಹೌಹಾರುತ್ತೀರಿ..

ಸಾರಾಂಶ

ಕೋಣೆಯೊಳಗೆ ಜೇಡವೊಂದು ಕಂಡು ಬಂದರೆ ಆ ಕೂಡಲೇ ಅದನ್ನು ಹೊರ ಹಾಕುವ ಉಪಾಯಗಳನ್ನು ನಾವು ಹುಡುಕುತ್ತಿರುತ್ತೇವೆ. ಇಂತಹುದೇ ಒಂದು ಪ್ರಯತ್ನಕ್ಕೆ ಅಮೆರಿಕಾದ ಯುವಕನೊಬ್ಬ ಮುಂದಾಗಿದ್ದ, ಇದರಲ್ಲಿ ಬಾಗಶಃ ಸಫಲನಾಗಿದ್ದ. ಇನ್ನೇನಿದ್ದರೂ ಜೇಡವನ್ನು ಹೊರ ಹಾಕುವುದು ಎನ್ನುವಾಗಲೇ ಅಚಾತುರ್ಯವೊಂದು ನಡೆದು ಹೋಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಅಂತಹುದ್ದೇನಾಯಿತು ಅಂತೀರಾ? ಹಾಗಾದ್ರೆ ಇಲ್ಲಿದೆ ನೋಡಿ ಸಂಪೂರ್ಣ ವಿವರ

ವಿಡಿಯೋದಲ್ಲಿ ನೀಡಿರುವ ದೃಶ್ಯಾವಳಿಗಳನ್ನು ನೋಡಿದರೆ ಯುವಕ ಜೇಡವನ್ನು ಜೀವಂತವಾಗಿ ಹಿಡಿದು ಹೊರಹಾಕುವ ಯೋಚನೆಯಲ್ಲಿದ್ದಾನೆ ಎಂದು ತಿಳಿದು ಬರುತ್ತದೆ. ಬಹುಶಃ ಇದಕ್ಕಾಗೇ ಆತ ಪಾತ್ರೆಯೊಂದರ ಸಹಾಯದಿಂದ ಈ ಕೆಲಸಕ್ಕೆ ಮುಂದಾಗಿದ್ದ. ಏಣಿಯ ಸಹಾಯದಿಂದ ಛಾವಣಿಯಲ್ಲಿದ್ದ ಜೇಡವನ್ನು ಪಾತ್ರೆಯೊಳಕ್ಕೆ ಆತ ಹಾಕಿ ಕೆಳಗಿಳಿದ ಆತ, ಇನ್ನೇನು ಜೇಡವನ್ನು ಹೊರಹಾಕುವವನಿದ್ದ. ಅಷ್ಟರಲ್ಲಿ ಆ ಜೇಡವನ್ನು ನೋಡಬೇಕೆಂದು ಪಾತ್ರೆಯೊಳಗೆ ಕಣ್ಣಾಡಿಸುತ್ತಾನೆ ಆದರೆ ಅಚ್ಚರಿ ಎಂಬಂತೆ ಪಾತ್ರೆಗೆ ಬಿದ್ದಿದ್ದ ಆ ಜೇಡ ಮಾಯವಾಗಿರುತ್ತದೆ. ಹಾಗಾದ್ರೆ ಜೇಡ ಎಲ್ಲಿ ಹೋಯ್ತು?

ಯುವಕ ಗಾಬರಿ ಬೀಳುತ್ತಾನೆ. ಇತ್ತ ನೋಡುಗರು ಒಂದು ಬಾರಿ ಅಚ್ಚರಿಗೊಳಗಾಗುತ್ತಾರೆ. ಅಷ್ಟರಲ್ಲಿ ಆ ಜೇಡ ತನ್ನದೇ ಕೆನ್ನೆ ಮೇಲೆ ಹರಿದಾಡುವ ಅನುಭವವಾಗುತ್ತದೆ ಆ ಯುವಕನಿಗೆ, ಭಯ ಬಿದ್ದ ಆ ಯುವಕ ವಿಡಿಯೋ ಮಾಡುತ್ತಿದ್ದ ಗೆಳೆಯನ ಬಳಿ ಜೇಡವನ್ನು ತೆಗೆಯುವಂತೆ ಕೇಳಿಕೊಳ್ಳುತ್ತಾನೆ. ಮೈ ಜುಮ್ಮೆನಿಸುವ ಈ ವಿಡಿಯೋ ಕುರಿತಾಗಿ ಏನೇ ಬರೆದರೂ ಅದು ಕಡಿಮೆಯೇ... ವಿಡಿಯೋವನ್ನು ನೀವೇ ಒಂದು ಬಾರಿ ನೋಡಿ

ಜೇಡ ಯುವಕನ ಕೆನ್ನೆಯ ಮೇಲೆಯೇ ಕುಳಿತಿರುವ ದೇಶ್ಯ ನೋಡುವಾಗ ಇಂತಹವನ ಎದೆಯೂ ಒಂದು ಬಾರಿ ಸಣ್ಣಗೆ ನಡುಗುತ್ತದೆ. ಹೀಗಿರುವಾಗ ಆ ಯುವಕನ ಸ್ಥಿತಿ ಹೇಗಾಗಿರಬೇಡ...?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಣ್ಣನ್ನೇ ನೋಡದೆ 82 ವರ್ಷ ಬದುಕಿದ ಆ ವ್ಯಕ್ತಿಯ ರಹಸ್ಯ!
ಮಕ್ಕಳು ಮಲಗಿದ ನಂತ್ರ ಅದೇ ರೂಂನಲ್ಲಿ ಪೋಷಕರು ರೋಮ್ಯಾನ್ಸ್ ಮಾಡ್ತೀರಾ?, ಹಾಗಿದ್ರೆ ಈ ವಿಷ್ಯ ಗೊತ್ತಿರ್ಲಿ