ಖಾಸಗಿ ಮ್ಯಾಟ್ರಿಮೊನಿಯಲ್ಲಿ ಮದುವೆಯಾಗಿ ಗಂಡನೊಂದಿಗೆ ಜೀವನ ಮಾಡುತ್ತಿರುವ ಮಹಿಳೆಯ ಫೋಟೋವನ್ನು ಹಾಕಿ ಮದುವೆಯ ಪ್ರಪೋಸಲ್‌ಗೆ ಇಡಲಾಗಿದೆ. ಇದನ್ನು ನೋಡಿದ ಮಹಿಳೆ ಗಂಡನೊಂದಿಗೆ ವಿಡಿಯೋ ಮಾಡಿ ಮ್ಯಾಟ್ರಿಮೊನಿ ವೆಬ್‌ಸೈಟ್‌ಗೆ ಛೀಮಾರಿ ಹಾಕಿದ್ದಾರೆ.
ಮುಂಬೈ (ಅ.04): ಮ್ಯಾಟ್ರಿಮೊನಿಯಲ್ಲಿ ಕೆಲವೊಂದು ಬಾರಿ ಆಗುವ ಎಡವಟ್ಟುಗಳು ಕೆಲವು ಜನರ ಜೀವನವನ್ನೇ ನಾಶ ಮಾಡಿವೆ. ಯುವಕ, ಯುವತಿಯರಿಗೆ ವೈವಾಹಿಕ ಸಂಬಂಧ ಕಲ್ಪಿಸುವ ಈ ಆಪ್ ಮತ್ತು ವೆಬ್‌ಸೈಟ್‌ನಲ್ಲಿ ಕೆಲವರು ನಕಲಿ ಐಡಿಗಳನ್ನು, ಪೋಟೋಗಳನ್ನು ಹಾಕಿ ಮೋಸ ಮಾಡುವವರ ಸಂಖ್ಯೆಯೂ ಇದೆ. ಆದರೆ, ಇದೀಗ ಖಾಸಗಿ ಮ್ಯಾಟ್ರಿಮೊನಿಯಲ್ಲಿ ಮದುವೆಯಾಗಿ ಗಂಡನೊಂದಿಗೆ ಜೀವನ ಮಾಡುತ್ತಿರುವ ಮಹಿಳೆಯ ಫೋಟೋವನ್ನು ಹಾಕಿ ಮದುವೆಯ ಪ್ರಪೋಸಲ್‌ಗೆ ಇಡಲಾಗಿದೆ. ಇದನ್ನು ಸ್ವತಃ ತಾನೇ ನೋಡಿದ ಮಹಿಳೆ ತನಗೆ ಮದುವೆಯಾಗಿದೆ ಎಂದು ಗಂಡನೊಂದಿಗೆ ಇರುವ ವಿಡಿಯೋ ಮಾಡಿ ಮ್ಯಾಟ್ರಿಮೊನಿ ವೆಬ್‌ಸೈಟ್‌ಗೆ ಛೀಮಾರಿ ಹಾಕಿದ್ದಾರೆ.
ಖಾಸಗಿ ಮ್ಯಾಟ್ರೊಮೊನಿಯಲ್ಲಿ ಫೋಟೋ ಹಾಕಲಾಗಿರುವ ಮಹಿಳೆಯ ಹೆಸರು ಸ್ವಾತಿ ಮುಕುಂದ್. ಸೋಶಿಯಲ್ ಮೀಡಿಯಾ ಇನ್ಲ್ಫೂಯೆನ್ಸರ್ ಆಗಿರುವ ಸ್ವಾತಿ ಮುಕುಂದ್ ಅವರು ಇನ್‌ಸ್ಟಾಗ್ರಾಂ ಹಾಗೂ ಯೂಟೂಬ್‌ಗಳಲ್ಲಿ ವೈರಲ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇನ್ನು ಸ್ವತಃ ಸ್ವಾತಿ ಮಾಡಿರುವ ವಿಡಿಯೋಗಳೇ ಹೆಚ್ಚು ವೈರಲ್ ಕೂಡ ಆಗುತ್ತಿವೆ. ಇದೀಗ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು 'ಮದುವೆಯಾಗಿ ಗಂಡನೊಂದಿಗೆ ಜೀವನ ಮಾಡುತ್ತಿರುವ ನನ್ನ ಫೋಟೋವನ್ನು ಭಾರತದ ಹೆಸರಾಂತ ಹಾಗೂ ನಂಬಿಕೆಯ ಮ್ಯಾಟ್ರಿಮೊನಿ ವೆಬ್‌ಸೈಟ್ ಒಂದರಲ್ಲಿ ನನ್ನ ಫೋಟೋವನ್ನು ಹಾಕಿಕೊಳ್ಳಲಾಗಿದೆ. ಈ ಮೂಲಕ ಮದುವೆಯಾದ ನನಗೆ ಮ್ಯಾಟ್ರಿಮೊನಿಯಲ್ಲಿ ಫೋಟೋ ಹಾಕಿ ಮದುವೆ ಮಾಡಿಸಲು ಮುಂದಾಗಿದೆ' ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮ್ಯಾಟ್ರಿಮೊನಿಯಲ್ಲಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ, 250 ಮಹಿಳೆಯರಿಗೆ ವಂಚಿಸಿದ ಅಂಕಲ್!
ಮ್ಯಾಟ್ರಿಮೊನಿಯ ವಿಡಿಯೋ ಸ್ಕ್ರೀನ್ ಶಾಟ್ ಅನ್ನು ಹಿಡಿದುಕೊಂಡು ಗಂಡನ ಜೊತೆಗೆ ಬಂದು ವಿಡಿಯೋ ಮಾಡಿರುವ ಸ್ವಾತಿ ಮುಕುಂದ್ ಅವರು, ನನ್ನ ಗಂಡ ಪಕ್ಕದಲ್ಲಿಯೇ ಇದ್ದಾರೆ. ಅವರು ನನ್ನ ಫೋಟೋವನ್ನು ಬಳಸುವ ಅಗತ್ಯವಿಲ್ಲ, ನನ್ನೊಂದಿಗೇ ಇದ್ದಾರೆ ಎಂದು ತೋರಿಸಿದ್ದಾರೆ. ನಾವು ಈಗಾಗಲೇ ಮದುವೆ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಇನ್ನು ಈ ಮ್ಯಾಟ್ರಿಮೊನಿಯಲ್ಲಿ ಹೆಚ್ಚವರಿ ಹಣ ಪಾವತಿಸುವವರಿಗೆ ನಾವು ವಿಶ್ವಾಸಾರ್ಹ ಎಲೈಟ್ ಸೇವೆಯನ್ನು ನೀಡುತ್ತೇವೆ ಎಂದು ಹೇಳುತ್ತಾರೆ. ಇವರು ಯಾವುದೇ ಪ್ರೊಫೈಲ್ ಅನ್ನು ಪರಿಶೀಲನೆ ಮಾಡದೇ ಹೇಗೆ ಮ್ಯಾಚ್ ಮೇಕಿಂಗ್ ಮಾಡುತ್ತಾರೆ ಎಂದು ಮಹಿಳೆ ಪ್ರಶ್ನೆ ಮಾಡಿದ್ದಾರೆ.
ನೀವು ಮ್ಯಾಟ್ರಿಮೊನಿ ಬಳಕೆದಾರರಿಂದ ಸಾವಿರಾರು ರೂ. ಹಣವನ್ನು ಪಾವತಿಸಿಕೊಂಡಂತೆ ಅವರಿಗೆ ಸರಿಯಾದ ಹಾಗೂ ನಕಲಿಯಲ್ಲದ ಪ್ರೊಫೈಲ್‌ಗಳನ್ನು ಕೊಡಬೇಕು. ಈ ಮೂಲಕ ಈ ಮ್ಯಾಟ್ರಿಮೊನಿ ಬಳಸುವ ಗ್ರಾಹಕರಿಗೆ ಉತ್ತಮ ಮತ್ತು ಹೊಂದಾಣಿಕೆ ಆಗುವ ಸಂಗಾತಿಯನ್ನು ಒದಗಿಸಬೇಕು. ಇದು ಭೂಮಿಯ ಮೇಲೆ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬಂತೆ ಕಾಣಿಸುತ್ತದೆ. ಇನ್ನು ಎಲ್ಲ ಗ್ರಾಹಕರು ಈ ಮ್ಯಾಟ್ರಿಮೊನಿ ಆಪ್ ಸೇರಿದಂತೆ ಯಾವುದೇ ಅಪ್ಲಿಕೇಷನ್‌ಗಳನ್ನು ಬಳಸುವಾಗ ನೀವು ಎಚ್ಚರಿಕೆಯಿಂದ ಇರಬೇಕು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.