ಮುಂಬರುವ ದಿನಗಳಲ್ಲಿ ಮಾರುತಿಯಿಂದ 4 ಹೊಸ ಕಾರುಗಳು ಮಾರುಕಟ್ಟೆಗೆ

By Suvarna Web DeskFirst Published Jan 22, 2018, 3:50 PM IST
Highlights

ನೂತನ ಸ್ವಿಫ್ಟ್ ಕಾರು ಅಭಿವೃದ್ದಿಗೆ ಪ್ರಸ್ತುತ ಸುಜುಕಿ ಕಂಪನಿಯು ಸುಮಾರು 800 ಕೋಟಿ ರುಪಾಯಿ ವೆಚ್ಚ ಮಾಡುತ್ತಿದ್ದು, ಗುಜರಾತ್ ಘಟಕದಲ್ಲಿ ಹೊಸ ಸ್ವಿಫ್ಟ್ ಕಾರು ನಿರ್ಮಾಣವಾಗುತ್ತಿದೆ.  

ದೇಶದ ಅತಿದೊಡ್ಡ ಕಾರು ತಯಾರಿಕ ಸಂಸ್ಥೆ ಮಾರುತಿ ಸುಜುಕಿ ಮುಂದಿನ 12-18 ತಿಂಗಳೊಳಗಾಗಿ ಹೊಸ 4 ಕಾರುಗಳನ್ನು ಪರಿಚಯಿಸುವ ಯೋಜನೆ ಹಮ್ಮಿಕೊಂಡಿದೆ.

ಫೆಬ್ರವರಿ 9-14ರವರೆಗೆ ಜರುಗುವ ಆಟೋ-ಎಕ್ಸ್'ಫೋದಲ್ಲಿ ಹೊಸ ಮಾದರಿಯ ಸ್ವಿಪ್ಟ್ ಕಾರುಗಳನ್ನು ಸಂಸ್ಥೆ ಪರಿಚಯಿಸಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಸ್ವಿಫ್ಟ್ ಜತೆಗೆ ಮಧ್ಯಮ ಗಾತ್ರದ ಸೆಡನ್, ಸಿಯಾಜ್ ಹಾಗೂ ಬಹುಪಯೋಗಿ ವಾಹನ ಎರಟಿಗ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ.

ಈ ಎಲ್ಲಾ ಆವೃತ್ತಿಯ ವಾಹನಗಳ ಜತೆಗೆ ನೂತನ ಮಾದರಿಯ ವ್ಯಾಗನ್ 'ಆರ್' ನಿರ್ಮಾಣ ಹಂತದಲ್ಲಿದ್ದು, ತಾಂತ್ರಿಕ ಕಾರಣಗಳಿಂದ ಸ್ವಲ್ಪ ತಡವಾಗಿ ತೆರೆಕಾಣಲಿದೆ ಎನ್ನಲಾಗುತ್ತಿದೆ.

ಸತತ 5 ವರ್ಷಗಳಿಂದ ಎರಡಂಕಿಯ ಬೆಳವಣಿಗೆ ದರ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು, ಮುಂದಿನ ವರ್ಷವೂ ಅದೇ ಬೆಳವಣಿಕೆ ಸಾಧಿಸುವ ವಿಶ್ವಾಸವಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಎಸ್. ಕಲ್ಸಿ ತಿಳಿಸಿದ್ದಾರೆ. ಇದೇವೇಳೆ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡುವ ಸ್ವಿಫ್ಟ್ ಕಾರು ಇನ್ನೂ ಹಲವು ಅವತರಣಿಕೆಗಳಲ್ಲಿ ಸಂಚಲನ ಮೂಡಿಸುವ ವಿಶ್ವಾಸವಿದೆ ಎಂದು ಕಲ್ಸಿ ಹೇಳಿದ್ದಾರೆ.

ನೂತನ ಸ್ವಿಫ್ಟ್ ಕಾರು ಅಭಿವೃದ್ದಿಗೆ ಪ್ರಸ್ತುತ ಸುಜುಕಿ ಕಂಪನಿಯು ಸುಮಾರು 800 ಕೋಟಿ ರುಪಾಯಿ ವೆಚ್ಚ ಮಾಡುತ್ತಿದ್ದು, ಗುಜರಾತ್ ಘಟಕದಲ್ಲಿ ಹೊಸ ಸ್ವಿಫ್ಟ್ ಕಾರು ನಿರ್ಮಾಣವಾಗುತ್ತಿದೆ.  

click me!