
ವಾಂತಿ ಸಮಸ್ಯೆಗೆ ಕಾರಣಗಳು ಹಲವು. ಜೀರ್ಣವಾಗದಿದ್ದರೆ, ನೀರಿನಂಶ ಕಡಿಮೆಯಾದರೆ ಫುಡ್ ಪಾಯಿಸನ್'ನಂಥ ಸಮಸ್ಯೆಗಳಲ್ಲಿ ಹೊಟ್ಟೆ ತೊಳಸೋದು, ವಾಂತಿ ಸಾಮಾನ್ಯ. ಮನೆಯಲ್ಲೇ ಇದಕ್ಕೆ ಪರಿಹಾರವಿದೆ.
1. ಕಪ್ ನೀರಿಗೆ 10 ಹನಿ ನಿಂಬೆ ರಸ, 1/2 ಚಮಚ ಸಕ್ಕರೆ, 1/4 ಚಮಚ ಬೇಕಿಂಗ್ ಸೋಡ ಹಾಕಿ ಚೆನ್ನಾಗಿ ಕಲಕಿ ಕುಡಿದರೆ ಹೊಟ್ಟೆ ತೊಳಸೋದು ಸರಿಯಾಗುತ್ತೆ.
2. 2 ಏಲಕ್ಕಿ ಕಾಳನ್ನು ಬಾಯಲ್ಲಿ ಹಾಕಿ ನಿಧಾನಕ್ಕೆ ಜಗಿದು ತಿಂದರೆ ಈ ಸಮಸ್ಯೆ ಹತೋಟಿಗೆ ಬರುತ್ತದೆ.
ಶುಂಠಿ ರಸವನ್ನು ಒಂದು ಚಮಚ ಈರುಳ್ಳಿ ರಸದೊಂದಿಗೆ ಬೆರೆಸಿ ಕುಡಿದರೆ ಬೇಗ ವಾಸಿಯಾಗುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.