ಚಂದ್ರಯಾನಿಗಳಿಗಿಲ್ಲ ಟಾಯ್ಲೆಟ್ ಸಮಸ್ಯೆ: ಬಹುಕಾಲದ NASA ತಲೆನೋವಿಗೆ ಪರಿಹಾರ ಕೊಟ್ಟ ಪುಟ್ಟ ಬಾಲಕ

By Suvarna News  |  First Published Nov 4, 2020, 5:01 PM IST

NASA ಚಂದ್ರನಲ್ಲಿ ಟಾಯ್ಲೆಟ್ ಸಮಸ್ಯೆಗೆ ಪರಿಹಾರ ಕೊಟ್ಟ ಮಲೇಷ್ಯಾ ಬಾಲಕ | ಚಂದ್ರಯಾನಿಗಳಿಗಿಲ್ಲ ಟಾಯ್ಲೆಟ್ ಸಮಸ್ಯೆ | PPE ಕಿಟ್ ತೆಗೆಯದೆಯೇ ಮೂತ್ರ ವಿಸರ್ಜಿಸಬಹುದು ಕೊರೋನಾ ವೈದ್ಯರು


9 ವರ್ಷದ ಮಲೇಷ್ಯಾದ ಹುಡುಗ ಅಮೆರಿಕದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಎದುರಿಸುತ್ತಿರುವ ದೀರ್ಘಕಾಲದ ಸಂದಿಗ್ಧತೆಗೆ ಪರಿಹಾರ ಕಂಡುಹಿಡಿದಿದ್ದಾನೆ.

ಝೀಝನ್ ಕಂಗ್ ಝಿ ಸುನ್‌ ಕಂಡುಹಿಡಿದ ಸ್ಪೇಸ್‌ ಸೂಟ್ ಲೂನರ್ ಟಾಯ್ಲೆಟ್‌ನ್ನು ಸುಲಭವಾಗಿ ಗಗನಯಾತ್ರಿಯ ಸ್ಪೇಸ್‌ಸೂಟ್‌ಗೆ ಸುಲಭವಾಗಿ ಅಟ್ಯಾಚ್ ಮಾಡಬಹುದಾಗಿದೆ. ಇದು ದ್ರವಗಳನ್ನು ಹೀರಿಕೊಂಡು ನಿರ್ವಾತ ರಚಿಸುವ ಮೂಲಕ ಬಾಹ್ಯಾಕಾಶದಲ್ಲಿ ಮೈಕ್ರೊಗ್ರಾವಿಟಿಯ ಸುತ್ತ ಕೆಲಸ ಮಾಡುತ್ತದೆ.

Tap to resize

Latest Videos

undefined

#Fit ಆಗಿಸಿ ಮಸಲ್ ಬಿಲ್ಡಿಂಗ್ ಮಾಡುವ ಫುಡ್ಸ್ ಇಲ್ಲಿವೆ ನೋಡಿ

ಈ ಸಾಧನವನ್ನು ಗಗನಯಾತ್ರಿ ಬಾಹ್ಯಾಕಾಶದಲ್ಲಿರುವಾಗ ಬಹಳಸಲು ತನ್ನ ಕಾಲುಗಳನ್ನು ಸ್ವಲ್ಪ ಸರಿಸಿದರೆ ಸಾಕು. ಈ ಮೂಲಕ ಆರಾಮವಾಗಿ ಪ್ರಕೃತಿಯ ಕರೆಗೆ ಓಗೊಡಬಹುದು. ಈ ಮೂಲಕ ಟಾಯ್ಲೆಟ್ ಸಮಸ್ಯೆ ಉಂಟಾಗುವುದಿಲ್ಲ.

ಝೀಝನ್‌ನ ವಿನ್ಯಾಸ ಇತ್ತೀಚೆಗೆ ಪ್ರತಿಷ್ಠಿತ ನಾಸಾದ ಲೂನಾರ್ ಲೂ ಚಾಲೆಂಜ್ 2020 (ಜೂನಿಯರ್ ವಿಭಾಗ) ದಲ್ಲಿ ಬಹುಮಾನ ಗಳಿಸಿದ್ದು, 85 ದೇಶಗಳಿಂದ 897 ಜನರು ಭಾಗವಹಿದ್ದರು.

ಈ ಔಷಧೀಯ ಸಸ್ಯದಿಂದ ಚಳಿಗಾಲದ ಅನಾರೋಗ್ಯವನ್ನು ದೂರ ಮಾಡಿ

ಇಲ್ಲಿನ ಐ-ಡಿಸ್ಕವರಿ ವಿಶ್ವ ವಿಜ್ಞಾನ ಕೇಂದ್ರದಲ್ಲಿ ಝೀಜನ್‌ಗೆ ಚೊಂಗ್ ಸೂ ಶಿಯಾಂಗ್ (43), ತರಬೇತಿ ನೀಡುತ್ತಿದ್ದಾರೆ. ಝೀಝನ್ ಆವಿಷ್ಕಾರಗಳ ವಿಚಾರದಲ್ಲಿ ಜಾಣ. ಆತ ಅತ್ಯಂತ ಕುತೂಹಲದಿಂದ ಎಲ್ಲವನ್ನೂ ನೋಡುತ್ತಾನೆ. ವಿಜ್ಞಾನ ಅದರಲ್ಲೂ ವಿಶೇಷವಾಗಿ ಖಗೋಳಶಾಸ್ತ್ರದ ಬಗ್ಗೆ ಹೆಚ್ಚು ಕುತೂಹಲವಿದೆ. ಭವಿಷ್ಯದಲ್ಲಿ ತಳಿವಿಜ್ಞಾನಿ ಆಗಬೇಕೆಂಬ ಆಸೆ ಹೊಂದಿದ್ದಾನೆ ಎಂದಿದ್ದಾರೆ ಝೀಝನ್ ಶಿಕ್ಷಕ.

ಜೂನ್‌ನಲ್ಲಿ ಪ್ರಾಜೆಕ್ಟ್ ಮಾಡಿದ ಬಾಲಕ ಅಗಸ್ಟ್‌ನಲ್ಲಿ ಅದನ್ನು ನಾಸಾಗೆ ಸಲ್ಲಿಸಿದ್ದ. ಈ ಟಾಯ್ಲೆಟ್‌ಗೆ ಕರೆಂಟ್, ಬ್ಯಾಟರಿ ಏನೂ ಬೇಡ. ಕಾಲನ್ನು ಅಗಲಿಸಿದರೆ ಮೂತ್ರ ಗಗನಯಾತ್ರಿಯ ಕಾಲಿನ ಬೂಟ್ಸ್ ಕಂಟೈನರ್ ಸೇರಿಕೊಳ್ಳುತ್ತದೆ.

ಕ್ಷುದ್ರ ಗ್ರಹದ ಮೇಲೆ ಇಳಿದ ನಾಸಾ ನೌಕೆ, ಮಣ್ಣು ಸಂಗ್ರಹ!

ಈ ಮಾಡೆಲ್ ಎಮರ್ಜೆನ್ಸಿ ಶಸ್ತ್ರ ಚಿಕಿತ್ಸೆ ನಡೆಸುವ ವೈದ್ಯ, ದಾದಿಯರಿಗೂ ನೆರವಾಗಲಿದೆ. ಕೊರೋನಾ ಚಿಕಿತ್ಸೆ ನೀಡುವ ಪಿಪಿಇ ಕಿಟ್ ಧರಿಸಿರುವವರಿಗೂ ಇದು ಅತ್ಯಂತ ಸಹಕಾರಿಯಾಗಲಿದೆ. ಪಿಪಿಇ ಕಿಟ್ ತೆಗೆಯದೇ ಇವರು ಮೂತ್ರ ವಿಸರ್ಜಿಸಬಹುದಾಗಿದೆ.

click me!