ಯುವತಿಯರೇ ಮುಖಕ್ಕೆ ಬಳಿದ ಮೇಕಪ್ ತೆಗೆಯಲು ಪರದಾಡಬೇಕಿಲ್ಲ, ಇಲ್ಲಿದೆ ಸರಳ ಉಪಾಯಗಳು

Published : Apr 23, 2017, 06:15 AM ISTUpdated : Apr 11, 2018, 12:49 PM IST
ಯುವತಿಯರೇ ಮುಖಕ್ಕೆ ಬಳಿದ ಮೇಕಪ್ ತೆಗೆಯಲು ಪರದಾಡಬೇಕಿಲ್ಲ, ಇಲ್ಲಿದೆ ಸರಳ ಉಪಾಯಗಳು

ಸಾರಾಂಶ

ದಿನವಿಡೀ ತಮ್ಮ ಕಣ್ಣು ಹಾಗೂ ಮುಖವ ಸುಂದರವಾಗಿ ಕಾಣಲೆಂದು ಬಹುತೇಕ ಯುವತಿಯರು ಮಸ್ಕರಾ, ಕಾಜಲ್, ಐ ಲೈನರ್, ಲಿಪ್ ಲೈನರ್, ಕ್ರೀಂಗಳು ಹಾಗೂ ಪೌಡರ್'ಗಳನ್ನು ಬಳಸುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಆದರೆ ರಾತ್ರಿ ಹೊತ್ತು ಈ ಮೇಕಪ್ ತೆಗೆಯುವುದೇ ಅತ್ಯಂತ ಕಷ್ಟಕರವಾದ ಕೆಲಸ. ಮುಖಕ್ಕೆ ಹಾಕಿದ ಮೇಕಪ್ ತೆಗೆಯುವುದೇ ತಲೆನೋವಾಗಿ ಪರಿಣಮಿಸುತ್ತಿದೆ. ಹಾಗಾದರೆ ಈ ಮೇಕಪ್ ಸುಲಭವಾಗಿ ತೆಗೆಯುವುದು ಹೇಗೆ? ಇಲ್ಲಿದೆ ಕೆಲ ಟಿಪ್ಸ್

ದಿನವಿಡೀ ತಮ್ಮ ಕಣ್ಣು ಹಾಗೂ ಮುಖವ ಸುಂದರವಾಗಿ ಕಾಣಲೆಂದು ಬಹುತೇಕ ಯುವತಿಯರು ಮಸ್ಕರಾ, ಕಾಜಲ್, ಐ ಲೈನರ್, ಲಿಪ್ ಲೈನರ್, ಕ್ರೀಂಗಳು ಹಾಗೂ ಪೌಡರ್'ಗಳನ್ನು ಬಳಸುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಆದರೆ ರಾತ್ರಿ ಹೊತ್ತು ಈ ಮೇಕಪ್ ತೆಗೆಯುವುದೇ ಅತ್ಯಂತ ಕಷ್ಟಕರವಾದ ಕೆಲಸ. ಮುಖಕ್ಕೆ ಹಾಕಿದ ಮೇಕಪ್ ತೆಗೆಯುವುದೇ ತಲೆನೋವಾಗಿ ಪರಿಣಮಿಸುತ್ತಿದೆ. ಹಾಗಾದರೆ ಈ ಮೇಕಪ್ ಸುಲಭವಾಗಿ ತೆಗೆಯುವುದು ಹೇಗೆ? ಇಲ್ಲಿದೆ ಕೆಲ ಟಿಪ್ಸ್

'ಸೂಕ್ಷ್ಮತೆ ವಹಿಸಿ'

ಕಣ್ಣಿನ ಸುತ್ತ ಬಳಿದ ಮೇಕಪ್ ಕೇವಲ ಬಟ್ಟೆಯಿಂದ ಉಜ್ಜಿ ಅಥವಾ ಕೇವಲ ನೀರಿನಿಂದ ತೊಳೆದು ತೆಗೆಯಬೇಡಿ ಇದರಿಂದ ನಿಮ್ಮ ಸೌಂದರ್ಯ ಹಾಳಾಗುವ ಸಾಧ್ಯತೆಗಳಿವೆ. ಇದಕ್ಕಾಗಿ ಯಾವುದಾದರೂ ಉತ್ತಮ ಮೇಕಪ್ ರಿಮೂವರ್'ನ್ನು ಬಳಸಿ. ಮೇಕಪ್ ರಿಮೂವರ್ ಇಲ್ಲವೆಂದಾದಲ್ಲಿ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ನಿಮ್ಮ ಕಣ್ಣುಗಳ ಸೌಂದರ್ಯ ಹೆಚ್ಚಿಸಿಕೊಳ್ಳಿ. ಇನ್ನು ರಿಮೂವರ್ ತಂದರೂ ನಿಮ್ಮ ಕಣ್ಣುಗಳಿಗೆ ಯಾವುದೇ ಹಾನಿ ಮಾಡದ, ಸುರಕ್ಷಿತ ರಿಮೂವರ್'ನ್ನೇ ಬಳಸಿ.

ತುಂಬಾ ಹುಷಾರಾಗಿರಿ:

ಕೆಲ ರಿಮೂವರ್'ಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ರಸಾಯನಿಕಗಳಿರುತ್ತವೆ. ಇದರ ಬಳಕೆಯಿಂದ ಮುಖದಲ್ಲಿ ರಿಯಾಕ್ಷನ್ ಇಲ್ಲವೇ ಅಲರ್ಜಿಯಾಗುವ ಸಾಧ್ಯತೆಗಳಿವೆ. ಇನ್ನು ಕಣ್ಣುಗಳಿಗೆ ಕಾಂಟ್ಯಾಕ್ಟ್ ಲೆನ್ಸ್ ಹಾಕುತ್ತೀರೆಂದಾದರೆ ರಿಮೂವರ್ ಬಳಸುವಾಗ ಅತ್ಯಂತ ಸೂಕ್ಷ್ಮವಾಗಿರಬೇಕು. ಎಣ್ಣೆ ಅಂಶವುಳ್ಳ ರಿಮೂವರ್'ನ್ನು ಬಳಸದಿರುವುದೇ ಉತ್ತಮ.

ಎಣ್ಣೆಯನ್ನು ಬಳಸಿ

ಎಣ್ಣೆ ನೈಸರ್ಗಿಕ ಮೇಕಪ್ ರಿಮೂವರ್'ನಂತೆ ಕಾರ್ಯ ನಿರ್ವಹಿಸುತ್ತದೆ. ಮಿನರಲ್ ಆಯ್ಲ್ ನಿಮ್ಮ ಮುಖದ ಮೇಕಪ್ ತೆಗೆಯಲು ನೀವು ಬಳಸಬಹುದಾಗಿದೆ. ಇದು ಅತ್ಯಂತ ಸುರಕ್ಷಿತ ಹಾಗೂ ನಿಮ್ಮ ತ್ವಚೆಯ ಆರೋಗ್ಯಕ್ಕೂ ಇದು ಲಾಭದಾಯಕ. ಇದರೊಂದಿಗೆ ನೀವು ಬೇಬಿ ಆಯ್ಲ್ ಕೂಡಾ ಬಳಸಬಹುದು ಇದು ತ್ವಚೆಯನ್ನು ಕಾಂತಿಯುತವಾಗಿಸುತ್ತದೆ. ಇನ್ನು ಮೇಲೆ ಸೂಚಿಸಿದಂತೆ ನೀವು ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತೀರಾದರೆ ಎಣ್ಣೆಯನ್ನು ಉಪಯೋಗಿಸದಿರಿ.

ದೈನಿಕ ವಸ್ತುಗಳೂ ಉಪಯೋಗಕಾರಿ

ಮೇಕಪ್ ತೆಗೆಯಲು ನಿಮ್ಮ ಮನೆಯಲ್ಲಿ ಅಡುಗೆಗೆ ದಿನನಿತ್ಯ ಬಳಸುವ ವಸ್ತುಗಳು ಸಹಾಯಕ. ಇವುಗಳಲ್ಲಿ ನೆಲ್ಲಿಕಾಯಿ ಎಣ್ಣೆ ಹಾಗೂ ಬಾದಾಮಿ ಎಣ್ಣೆ ಉತ್ತಮ. ಇದರಿಂದ ತ್ವಚೆಯ ಮೇಲೂ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಇನ್ನು ಮುಖಕ್ಕೆ ಎಣ್ಣೆ ಹಚ್ಚುವಾಗ ಹತ್ತಿಯುಂಡೆಯ ಪ್ರಯೋಗ ಮಾಡಿ.

ಬೇಬಿ ಶ್ಯಾಂಪೂ:

ಟಿಯರ್ ಫ್ರೀ ಬೇಬಿ ಶ್ಯಾಂಪೂ ಕಣ್ಣಿಗೆ ಜಹಾಕಿದ ಲೈನರ್, ಶೇಡ್ ಹಾಗೂ ಮಸ್ಕರಾ ತೆಗೆಯಲು ಉಪಯೋಗ ಬೀಳುತ್ತದೆ. ನೀವು ಪ್ರತಿದಿನ ಕಣ್ಣಿಗೆ ಮೇಕಪ್ ಮಾಡುವವರಾದರೆ ರಿಮೂವರ್ ಖರೀದಿಸುವುದು ಅತ್ಯಂತ ದುಬಾರಿ, ಹೀಗಿರುವಾಗ ಯಾವುದೇ ಉರಿ ಇಲ್ಲದೇ ಬೇಬಿ ಶ್ಯಾಂಪೂ ನಿಮ್ಮ ಸುಲಭವಾಗಿ ಮೇಕಪ್ ತೆಗೆಯಲು ಸಹಾಯ ಮಾಡುತ್ತದೆ. ಶ್ಯಾಂಪೂ ಬಳಸುವಾಗ ತಣ್ಣೀರಿನ ಬದಲಾಗಿ ಉಗುರು ಬೆಚ್ಚಗಿನ ನೀರನ್ನು ಬಳಸಿ.

ಸೂಚನೆ: ಯಾವತ್ತೂ 'Non Tear Free Shampoo' ಬಳಸದಿರಿ. ಇದು ನಿಮ್ಮ ಕಣ್ಣುಗಳಿಗೆ ತೊಂದರೆಯುಂಟು ಮಾಡಬಹುದು. ಇನ್ನು ನಿಮ್ಮ ತ್ವಚೆ ಅತ್ಯಂತ ಸೂಕ್ಷ್ಮವೆಂದಾದರೆ ಪೆಟ್ರೋಲಿಯಂ ಜೆಲ್ಲಿ ಬಳಸುವ ಮೊದಲೂ ಸ್ವಲ್ಪ ಹುಷಾರಾಗಿರಿ. ಇದು ಅಲರ್ಜಿಯುಂಟು ಮಾಡುವ ಸಾಧ್ಯತೆಗಳಿವೆ.

ಬೇಬಿ ವೈಪ್ಸ್:

ನಿಮಗೆ ಬೇಬಿ ಶಾಂಪೂ ಬಳಸಲು ಸಾಧ್ಯವಾಗುತ್ತಿಲ್ಲವೆಂದಾದರೆ ನೀವು ಬೇಬಿ ವೈಪ್ಸ್ ಕೂಡಾ ಬಳಸಬಹುದು. ಇದರಲ್ಲೂ ನಿಮಗೆ ತೊಡಕುಂಟಾದರೆ ಪೆಟ್ರೋಲಿಯಂ ಜೆಲ್ಲಿ ಬಳಸಿ. ಇದು ಕೇವಲ ಕಣ್ಣಿನ ಮೇಕಪ್ ಮಾತ್ರವಲ್ಲದೇ, ಇಡೀ ಮುಖದ ಮೇಕಪ್ ಅತ್ಯಂತ ಸುಲಭವಾಗಿ ತೆಗೆಯಲು ಸಹಾಯಕವಾಗುತ್ತದೆ. ಇಷ್ಟೇ ಅಲ್ಲದೇ ಲೋಷನ್ ಬಳಸಿಯೂ ನೀವು ಮೇಕಪ್ ತೆಗೆಯಬಹುದಾಗಿದೆ.

ಈ ಮೇಲಿನ ಟಿಪ್ಸ್ ಬಳಸಿ ಅತ್ಯಂತ ಕಷ್ಟಕರವಾದ ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ