ಕೊಳೆಯಾಗಿರುವ ಬಿಳಿ ಸಾಕ್ಸ್ ತೊಳೆಯಲು ನೀರಿನ ಬಕೆಟ್‌ನಲ್ಲಿ ಈ ಒಂದೇ ಒಂದು ವಸ್ತುವನ್ನು ಹಾಕಿ ಸಾಕು...

Published : May 06, 2025, 03:15 PM ISTUpdated : May 06, 2025, 03:17 PM IST
ಕೊಳೆಯಾಗಿರುವ ಬಿಳಿ ಸಾಕ್ಸ್  ತೊಳೆಯಲು ನೀರಿನ ಬಕೆಟ್‌ನಲ್ಲಿ ಈ ಒಂದೇ ಒಂದು ವಸ್ತುವನ್ನು ಹಾಕಿ ಸಾಕು...

ಸಾರಾಂಶ

ಬಿಳಿ ಸಾಕ್ಸ್‌ಗಳ ಕಲೆಗಳನ್ನು ನಿವಾರಿಸಲು ಬೇಕಿಂಗ್ ಪೌಡರ್, ನಿಂಬೆರಸ, ವಿನೆಗರ್, ಬ್ಲೀಚ್ ಮತ್ತು ಡಿಶ್ ಸೋಪ್ ಬಳಸಬಹುದು. 

ಬಿಳಿ ಸಾಕ್ಸ್ ತೊಳೆಯುವುದೆಂದರೆ ಎಲ್ಲರಿಗೂ ಒಂದು ರೀತಿ ದೊಡ್ಡ ಟಾಸ್ಕ್. ಏಕೆಂದರೆ  ಸಾಕ್ಸ್ ಮೇಲಿನ ಹಠಮಾರಿ ಕಲೆಗಳು ಸುಲಭವಾಗಿ ಹೋಗುವುದಿಲ್ಲ. ಒಂದು ವೇಳೆ ನೀವು ಅವುಗಳನ್ನು ಉಜ್ಜಿದರೆ ಅಥವಾ ಬ್ರಷ್ ಬಳಸಿದರೆ ಸಾಕ್ಸ್‌ಗಳು ಹಾಳಗಾಗಬಹುದು. ಕೊನೆಗೆ ಜನರು ಬಿಳಿ ಸಾಕ್ಸ್‌ಗಳ ಮೇಲಿನ ಕಪ್ಪು ಗುರುತುಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗದೆ, ಸ್ವಲ್ಪ ಸಮಯದವರೆಗೆ ಬಳಸಿ ನಂತರ ಅವುಗಳನ್ನು ಎಸೆಯುತ್ತಾರೆ. ಆದರೆ ಈಗ ನೀವು ಅವುಗಳನ್ನು ಎಸೆಯುವ ಅಗತ್ಯವಿಲ್ಲ. ಏಕೆಂದರೆ ಇಂದಿನ ಲೇಖನದಲ್ಲಿ ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ನಿಮಗೆ ಸಹಾಯ ಮಾಡುವ ಕೆಲವು ಸುಲಭ ಪರಿಹಾರಗಳನ್ನು ತಿಳಿಸುತ್ತೇವೆ.

ಬೇಕಿಂಗ್ ಪೌಡರ್ 
ಬಿಳಿ ಸಾಕ್ಸ್‌ನ ಕೆಳಭಾಗದಲ್ಲಿರುವ ಕಪ್ಪು ಗುರುತುಗಳನ್ನು ಸ್ವಚ್ಛಗೊಳಿಸಲು ನೀವು ಬೇಕಿಂಗ್ ಪೌಡರ್ ಅನ್ನು ಬಳಸಬಹುದು. ಇದರ ಸಹಾಯದಿಂದ ಕಲೆಗಳು ಸುಲಭವಾಗಿ ಹೊರಬರುತ್ತವೆ. ಆದರೆ ಇದರಿಂದ ಸ್ವಚ್ಛಗೊಳಿಸುವ ಮೊದಲು ನೀವು ಕೊಳಕು ಸಾಕ್ಸ್‌ಗಳನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕಾಗುತ್ತದೆ. 

* ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮೊದಲು ಒಂದು ಪಾತ್ರೆಯಲ್ಲಿ ಎರಡು ಚಮಚ ಬೇಕಿಂಗ್ ಪೌಡರ್ ಮಿಶ್ರಣ ಮಾಡಿ. 
* ನಂತರ ಡಿಟರ್ಜೆಂಟ್ ಪೌಡರ್ ಅನ್ನು ನೀರಿನಲ್ಲಿ ಬೆರೆಸಿ ಮತ್ತು ಕೊಳಕು ಸಾಕ್ಸ್ ಅನ್ನು 2 ಗಂಟೆಗಳ ಕಾಲ ನೆನೆಸಿಡಿ. 
* ಇದಾದ ನಂತರ ನೀವು ಈ ಸಾಕ್ಸ್‌ಗಳನ್ನು ನಿಮ್ಮ ಕೈಯಿಂದ ಲಘುವಾಗಿ ಉಜ್ಜಿದಾಗ ಸಾಕ್ಸ್‌ನಿಂದ ಕಲೆ ಸುಲಭವಾಗಿ ಹೊರಬರಲು ಪ್ರಾರಂಭಿಸುವುದನ್ನು ನೀವು ನೋಡುತ್ತೀರಿ. 
* ಕಲೆ ಸಂಪೂರ್ಣವಾಗಿ ಹೋಗದಿದ್ದರೆ ನೀವು ಸಾಕ್ಸ್ ಅನ್ನು ವಿನೆಗರ್ ನೀರಿನಲ್ಲಿ ನೆನೆಸಬಹುದು. 
* ಇಷ್ಟೆಲ್ಲಾ ಮಾಡಿದ ನಂತರ ಕಲೆಗಳು ಸುಲಭವಾಗಿ ಮಾಯವಾಗುತ್ತವೆ. ಜೊತೆಗೆ ಸಾಕ್ಸ್ ಹೊಳೆಯುತ್ತವೆ ಮತ್ತು ಸಾಫ್ಟ್ ಆಗಿ ಕಾಣುತ್ತವೆ. 

ನಿಂಬೆ ರಸ 
* ಇದಕ್ಕಾಗಿ ಮೊದಲು ನೀವು ಒಂದು ಪಾತ್ರೆಯಲ್ಲಿ 2 ರಿಂದ 3 ಗ್ಲಾಸ್ ನೀರನ್ನು ಬಿಸಿ ಮಾಡಬೇಕು. 
* ಸಾಕ್ಸ್‌ಗಳನ್ನು ಸುಲಭವಾಗಿ ತೊಳೆಯಲು ಸಾಧ್ಯವಾಗುವಂತೆ ನೀವು ಸಾಕಷ್ಟು ನೀರನ್ನು ಬಿಸಿ ಮಾಡಬೇಕು. 
* ಈಗ 3 ನಿಂಬೆಹಣ್ಣುಗಳನ್ನು ಕತ್ತರಿಸಿ ಅವುಗಳ ರಸವನ್ನು ನೀರಿಗೆ ಸೇರಿಸಿ. ಇದರೊಂದಿಗೆ, ಅದಕ್ಕೆ 6 ರಿಂದ 7 ಹನಿ ಪಾತ್ರೆ ತೊಳೆಯುವ ಲಿಕ್ವಿಡ್ ಸೇರಿಸಿ. ಈಗ ಸಾಕ್ಸ್ ಗಳನ್ನು ಈ ಬಿಸಿನೀರಿನ ದ್ರಾವಣದಲ್ಲಿ 20 ನಿಮಿಷಗಳ ಕಾಲ ಬಿಡಿ. 
* ಇದರ ನಂತರ ಸಾಕ್ಸ್‌ಗಳನ್ನು ನೀರಿನಿಂದ ತೆಗೆದು ನಿಧಾನವಾಗಿ ಉಜ್ಜಿ. ಹೀಗೆ ಮಾಡುವುದರಿಂದ ಸಾಕ್ಸ್‌ನ ಅಡಿಭಾಗವು ಹೊಳೆಯಲು ಪ್ರಾರಂಭಿಸುವುದನ್ನು ನೀವು ನೋಡುತ್ತೀರಿ. 

ಬಿಳಿ ವಿನೆಗರ್ 
* ನಿಮ್ಮ ಮನೆಯಲ್ಲಿ ಬಿಳಿ ವಿನೆಗರ್ ಇದ್ದರೆ ಬಿಳಿ ಸಾಕ್ಸ್‌ನ ಕಪ್ಪು ಅಡಿಭಾಗವನ್ನು ಸ್ವಚ್ಛಗೊಳಿಸಲು ಸಹ ನೀವು ಅದನ್ನು ಬಳಸಬಹುದು.
* ಇದಕ್ಕಾಗಿ ನೀವು ಒಂದು ಪಾತ್ರೆಯಲ್ಲಿ 3 ಗ್ಲಾಸ್ ನೀರನ್ನು ಕುದಿಸಬೇಕು. ಇದರ ನಂತರ, ಅದಕ್ಕೆ ಒಂದು ಕಪ್ ಬಿಳಿ ವಿನೆಗರ್ ಸೇರಿಸಿ. ಈಗ ಕೊಳಕು ಸಾಕ್ಸ್‌ಗಳನ್ನು ನೀರಿನಲ್ಲಿ ನೆನೆಸಿ.
* ಅರ್ಧ ಗಂಟೆಯ ನಂತರ ನೀವು ಅದನ್ನು ಸ್ವಚ್ಛಗೊಳಿಸಿದಾಗ ಕಲೆಗಳು ಸುಲಭವಾಗಿ ಹೋಗುವುದನ್ನು ನೀವು ನೋಡುತ್ತೀರಿ.

ಬ್ಲೀಚ್ ಮತ್ತು ಡಿಶ್ ಸೋಪು 
* ಬ್ಲೀಚ್ ಮತ್ತು ಡಿಶ್ ಸೋಪಿನ ಸಹಾಯದಿಂದಲೂ ಸಾಕ್ಸ್ ಹೊಳೆಯುತ್ತದೆ. ನಿಮ್ಮ ಸಾಕ್ಸ್‌ಗಳನ್ನು ಮತ್ತೆ ಹೊಸದಾಗಿ ಕಾಣುವಂತೆ ಮಾಡಲು ನೀವು ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ನಾಲ್ಕು ಟೀ ಚಮಚ ಬ್ಲೀಚ್ ಮತ್ತು ಒಂದು ಟೀ ಚಮಚ ಡಿಶ್ ಸೋಪ್ ಅನ್ನು ಬೆರೆಸಬಹುದು. 
* ಈಗ ಸಾಕ್ಸ್ ಅನ್ನು ಅದರಲ್ಲಿ 20 ನಿಮಿಷಗಳ ಕಾಲ ನೆನೆಸಿಡಿ. ನಂತರ ಅದನ್ನು ಡಿಟರ್ಜೆಂಟ್ ಸಹಾಯದಿಂದ ಸ್ವಚ್ಛಗೊಳಿಸಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಯರ್ ಆಂಡ್ ಬ್ಯಾಕ್ ಟು ಬ್ಯಾಕ್ ಪಾರ್ಟಿ ಮೋಜಿನ ಜೊತೆ ಡಬಲ್ ನೋವು ನೀಡುತ್ತೆ
ದಿನಕ್ಕೆರಡೇ ಸಿಗರೇಟ್ ಸೇದೋದು ಮಗಾ, ಇಷ್ಟು ಧಮ್ಮೆಳೆದ್ರೆನಾಗುತ್ತೆ ಅನ್ನೋರಿಗೆ ಉತ್ತರ ಇಲ್ಲಿದೆ