
ಇಂದು ಸೋಮವಾರ ರಾತ್ರಿ ಖಗ್ರಾಸ ಚಂದ್ರಗ್ರಹಣ ಆಗುತ್ತಿದೆ. ಸೋಮವಾರ ರಾತ್ರಿ 10:50ರಿಂದ 12:45ರವರೆಗೆ ಗ್ರಹಣ ಇರಲಿದೆ. ಏಷ್ಯಾ, ಯೂರೋಪ್, ಯೂರೋಪ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಗ್ರಹಣ ಕಾಣಿಸಿಕೊಳ್ಳಲಿದೆ. ಇದು ಒಂದು ಪ್ರಕೃತಿ ವಿಸ್ಮಯವಷ್ಟೇ ಎನ್ನುತ್ತದೆ ವಿಜ್ಞಾನ. ಆದರೆ, ಈ ಗ್ರಹಣವು ಮಾನವರ ಮೇಲೆ ಪರಿಣಾಮ ಬೀರುತ್ತದೆ. ಚಂದ್ರಗ್ರಹಣದ ವೇಲೆ ನಡೆಯುವ ಕ್ರಿಯೆಗಳಿಂದ ಸಮಸ್ಯೆಯಾಗುತ್ತದೆ ಎಂಬುದು ಜ್ಯೋತಿಷಿಗಳ ಅಭಿಪ್ರಾಯ.
ವಿವಿಧ ರಾಶಿಗಳ ಮೇಲೆ ಗ್ರಹಣದ ಪರಿಣಾಮ:
ಮೇಷ:
* ಈ ಚಂದ್ರಗ್ರಹಣ ನಿಮ್ಮ ಮೇಲೆ ಹಾಗೂ ನಿಮ್ಮ ರಾಶಿ ಮೇಲೆ ಪ್ರಭಾವ ಬೀರುವುದು
* ಸಮಾಧಾನ ಇರುವುದು ಹಾಗೂ ವಿಷಯಗಳನ್ನು ಸುಲಭವಾಗಿ ತೆಗೆದುಕೊಳ್ಳುವುದು
* ಕುಟುಂಬ ಹಾಗೂ ಸ್ನೇಹಿತರ ಜೀವನದಲ್ಲಿ ಆಗುವ ಘಟನೆಗಳು ಪರಿಣಾಮ
* ಈವರೆಗೆ ಚೆನ್ನಾಗಿದ್ದವರು ನಿಮ್ಮ ಜತೆ ನಡವಳಿಕೆ ಬದಲಾಯಿಸುತ್ತಾರೆ
ವೃಷಭ:
* ಉದ್ಯೋಗ ಮತ್ತು ವ್ಯವಹಾರದ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ
* ನಿಮ್ಮ ಸ್ವಂತ ವ್ಯಾಪಾರ ಇದ್ದರೆ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯ ಸೃಷ್ಟಿ
* ದೊಡ್ಡ ಮಟ್ಟದ ಹೂಡಿಕೆ ಮಾಡದಿರುವುದು ಉತ್ತಮ
* ಮೊಬೈಲ್ ಫೋನ್, ಲ್ಯಾಪ್'ಟಾಪ್ ವಸ್ತುಗಳ ಬಗ್ಗೆ ಗಮನವಿರಲಿ
ಮಿಥುನ:
* ದಿಢೀರ್ ಖರ್ಚು ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ಒತ್ತಡ
* ಉದ್ಯೋಗ-ಹಣಕಾಸು ವಿಚಾರದಲ್ಲಿ ಎಚ್ಚರದಿಂದ ವರ್ತಿಸಿ
* ವಿದೇಶ ಪ್ರಯಾಣ-ದೂರಪ್ರಯಾಣಗಳು ಬೇಡ, ಸಮಸ್ಯೆಗಳು ಎದುರಾಗಬಹುದು
* ವಿದೇಶದಲ್ಲಿ ನೆಲೆಸಿರುವ ಸ್ನೇಹಿತರು, ಸಂಬಂಧಿಕರು ಚಿಂತೆಗೆ ಕಾರಣವಾಗಬಹುದು
ಕರ್ಕಾಟಕ:
* ಈ ರಾಶಿ ಯಾವಾಗಲೂ ಮುಖ್ಯ ಪರಿಣಾಮ ಬೀರುತ್ತದೆ
* ಈ ಹಿಂದಿನ ಗ್ರಹಣಗಳಿಗೆ ಹೋಲಿಸಿದರೆ ಇದು ಶುಭ ತರುವ ಸಾಧ್ಯತೆಯಿದೆ
* ಪ್ರೀತಿಪಾತ್ರರು ಅಥವಾ ಬಾಳಸಂಗಾತಿ ಮೇಲೆ ಗ್ರಹಣದ ಪ್ರಭಾವ ಹೆಚ್ಚಿರುತ್ತದೆ
* ಹಣಕಾಸು ವಿಚಾರಗಳಲ್ಲಿ ಬದಲಾವಣೆ, ಗ್ರಹಣದ ಪ್ರಭಾವದಿಂದ ಶಕ್ತಿ ವೃದ್ಧಿ
ಸಿಂಹ:
* ಈ ಸಮಯದಲ್ಲಿ ನೀವು ಕಂಡ ಕನಸಿನಿಂದಲೇ ಹಿಂಸೆಯಾಗುತ್ತದೆ
* ಸರಿಯಾಗಿ ನಿದ್ರೆ ಬರದೆ ಹಿಂಸೆಯಾಗುತ್ತದೆ. ಕೆಟ್ಟ ಕನಸುಗಳು ಬೀಳುತ್ತವೆ
* ಎಲ್ಲ ಕೆಟ್ಟ ಕನಸುಗಳು ನಿಜವಾಗುತ್ತವೆ ಎಂಬ ಆತಂಕ ಬೇಡ
* ಕಾನೂನು ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ತೊಂದರೆ ಎದುರಾಗುತ್ತದೆ
ಕನ್ಯಾ:
* ಒತ್ತಡ ಹೆಚ್ಚಾಗುವ ಸಾಧ್ಯತೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿ
* ಸಮಸ್ಯೆಗಳು ಮತ್ತೆ ಕಾಣಿಸಿಕೊಳ್ಳಬಹುದು, ಭಯ ಮತ್ತು ನಿರಾಶೆ ಕಾಣಿಸಿಕೊಳ್ಳುತ್ತದೆ
* ಗಂಭೀರವಾದ ಅಪಘಾತ ಸಾಧ್ಯತೆ, ಆರೋಗ್ಯದ ಬಗ್ಗೆ ವಿಪರೀತ ಎಚ್ಚರ ವಹಿಸಿ
* ನಿಮ್ಮ ಅಥವಾ ಬಾಳ ಸಂಗಾತಿಯ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ
ತುಲಾ:
* ಪ್ರಣಯ ಹಾಗೂ ಪ್ರೇಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ
* ಈಗಾಗಲೇ ಮದುವೆಯಾದವರು ಅಥವಾ ಪ್ರೇಮದಲ್ಲಿ ಇರುವವರಿಗೆ ಸಮಸ್ಯೆ
* ಸಂಬಂಧ ಇನ್ನೂ ಗಟ್ಟಿ ಆಗಿಲ್ಲ ಎಂದರೆ ಮುರಿದು ಬೀಳುವ ಸಾಧ್ಯತೆ ಇದೆ
* ನಿಶ್ಚಿತಾರ್ಥ ಆಗುವ ಅವಕಾಶಗಳು ಹೆಚ್ಚಿವೆ
ವೃಶ್ಚಿಕ:
* ಗ್ರಹಣದ ದಿನ ಯಾವುದೇ ಕೆಲಸವನ್ನು ಹಚ್ಚಿಕೊಳ್ಳಬೇಡಿ. ಮನೆಯಲ್ಲಿ ಇರಿ
* ಶ್ರಮ ಹಾಕಿದ ಕೆಲಸ ಅಂದುಕೊಂಡ ರೀತಿಯಲ್ಲಿ ಮುಗಿಯುವುದು ಅನುಮಾನ
* ಪೋಷಕರು-ಪೋಷಕ ಸಮಾನರಿಂದ ಒತ್ತಡ ಬೀಳಲಿದೆ
* ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪ್ರಭಾವ ಇದೆ. ಉದ್ಯೋಗದ ಮೇಲೆ ಪರಿಣಾಮ
ಧನಸ್ಸು:
* ಈ ರಾಶಿಯವರ ಮೇಲೆ ಪರೋಕ್ಷವಾಗಿ ಪರಿಣಾಮ ಆಗುತ್ತದೆ
* ಸೋದರ ಸಂಭಂಧಿ, ಬಾಳಸಂಗಾತಿ ನಿಮ್ಮ ಮೇಲೂ ಪರಿಣಾಮ
* ನಿಮಗೆ ಮಕ್ಕಳಿದ್ದಲ್ಲಿ ಅವರ ಬಗ್ಗೆ ಹೆಚ್ಚಿನ ಜಾಗ್ರತೆಯನ್ನು ವಹಿಸಿ
* ಹೊಸ ಒಪ್ಪಂದಗಳಿಗೆ ಸಹಿ ಹಾಕದಿದ್ದರೆ ಒಳ್ಳೆಯದು
ಮಕರ:
* ಆರ್ಥಿಕ ವಿಚಾರದ ಮೇಲೆ ಚಂದ್ರಗ್ರಹಣದ ಪರಿಣಾಮ ಇದೆ
* ಆರ್ಥಿಕ ವಿಚಾರಗಳನ್ನು ಚೆನ್ನಾಗಿ ಪ್ಲಾನ್ ಮಾಡಿ. ಅನುಕೂಲವೇ ಆಗುತ್ತೆ
* ಮನೆಯಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ತಕ್ಷಣ ಗಮನ ಹರಿಸಬೇಕಾಗುತ್ತದೆ
* ಪ್ರೀತಿಪಾತ್ರರು, ಬಾಳ ಸಂಗಾತಿ ಅಥವಾ ಮಕ್ಕಳಲ್ಲಿ ಭಾವನಾತ್ಮಕವಾಗಿ ಅಸ್ಥಿರತೆ ಕಾಡುತ್ತೆ
ಕುಂಭ:
* ಈ ಗ್ರಹಣದಿಂದ ಆರೋಗ್ಯ ಸಂಬಂಧಿ ವಿಚಾರಗಳ ಬಗ್ಗೆ ಆತಂಕ ಹೆಚ್ಚಾಗುತ್ತದೆ
* ಈ ಭಯಕ್ಕೆ ತುಂಬ ಕಾರಣಗಳೇನೂ ಇರುವುದಿಲ್ಲ, ಚಿಂತೆ ಮಾಡುವ ಅಗತ್ಯವಿಲ್ಲ
* ವಾಹನ ಚಲಾಯಿಸುವಾಗ ಮತ್ತು ರಸ್ತೆಯಲ್ಲಿ ಓಡಾಡುವಾಗ ಎಚ್ಚರದಿಂದ ಇರಬೇಕು
* ಯೌವನಾವಸ್ಥೆಯಲ್ಲಿ ಇರುವವರಲ್ಲಿ ನಾಟಕೀಯ ಬದಲಾವಣೆಗಳು ಗೋಚರಿಸುತ್ತವೆ
ಮೀನ:
* ಆಧ್ಯಾತ್ಮಿಕ ಜೀವನ ನಡೆಸುವವರಿಗೆ ಈ ಗ್ರಹಣ ಬಹಳ ಮುಖ್ಯವಾದುದು
* ಆಧ್ಯಾತ್ಮಿಕ ಗುರುಗಳ ಬದಲಾವಣೆ ಆಗಬಹುದು, ಉಪನ್ಯಾಸ ನಿಲ್ಲಿಸಬಹುದು
* ಅನಿರೀಕ್ಷಿತ ಖರ್ಚು ಅಥವಾ ಸಂಬಳದಲ್ಲಿ ಕಡಿತ ಆಗುವ ಸಂಭವ ಗೋಚರಿಸುತ್ತಿದೆ
* ಭವಿಷ್ಯದಲ್ಲಿ ಉತ್ತಮ ದಿನಗಳು ಬರಲಿವೆ. ಮಕ್ಕಳ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.