ಬೆಂಗ್ಳೂರು ಅಂದ್ರೆ ರೇಜಿಗೆ ಹುಟ್ತಿದೆ, ಎಲ್ಲಾ ಕಡೆ ಧೂಳು, ಕಸ, ವಾಸ್ನೆ, ಹೊಗೆ..! ಸಿಟಿಜನರ ಗೋಳು!

Published : Jul 19, 2025, 07:46 PM ISTUpdated : Jul 23, 2025, 04:25 PM IST
bangalore

ಸಾರಾಂಶ

ಈ ರೆಡ್ಡಿಟ್‌ ಬಳಕೆದಾರ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಷಯದ ಕುರಿತು ಜನರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಪೋಸ್ಟ್‌ ಸಿಕ್ಕಾಪಟ್ಟೆ ಲೈಕ್ಸ್‌ ಜೊತೆಗೆ ಕಾಮೆಂಟ್ಸ್‌ ಪಡೆದುಕೊಳ್ಳುತ್ತಿದೆ. 

ಈಚೆಗೆ ರೆಡ್ಡಿಟ್‌ನಲ್ಲಿ ಓರ್ವ ವ್ಯಕ್ತಿ ಬೆಂಗಳೂರಿಲ್ಲಿರುವ ಎಚ್‌ಎಸ್ಆರ್‌ಲೇಔಟ್ (HSR Layout)ನಲ್ಲಿ ತಾವು ವಾಸ ಮಾಡುತ್ತಿರುವುದಾಗಿಯೂ, ಅಲ್ಲಿ ದಿನನಿತ್ಯ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆಯೂ ಹಂಚಿಕೊಂಡಿದ್ದಾರೆ. ಈ ರೆಡ್ಡಿಟ್‌ ಬಳಕೆದಾರ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಷಯದ ಕುರಿತು ಜನರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಪೋಸ್ಟ್‌ ಸಿಕ್ಕಾಪಟ್ಟೆ ಲೈಕ್ಸ್‌ ಜೊತೆಗೆ ಕಾಮೆಂಟ್ಸ್‌ ಪಡೆದುಕೊಳ್ಳುತ್ತಿದೆ.

ಪೋಸ್ಟ್‌ನಲ್ಲಿ ಆತ "ನಾನು HSR ನಲ್ಲಿ ವಾಸಿಸುತ್ತಿದ್ದೇನೆ, ಇದು ಈಗ ತುಂಬಾ ದುಬಾರಿ. ಅದರ ಜೊತೆಗೆ, ಇಲ್ಲಿ ನಿರಂತರವಾಗಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಇಲ್ಲಿ ಅನೇಕ ಕೊಳೆಗೇರಿಗಳಿದ್ದು, ನಿರಂತರವಾಗಿ ಕಸ ಸುಡುವುದು ನಡೆಯುತ್ತಲೇ ಇರುತ್ತದೆ. ಒಟ್ಟಾರೆ ಇಡೀ ಪ್ರದೇಶವು ಅನೈರ್ಮಲ್ಯದಿಂದ ಕೂಡಿದೆ. ಹತ್ತಿರದ ಕಟ್ಟಡಗಳ ಜನರು ಹೇಳಿಕೊಳ್ಳುವುದಕ್ಕಷ್ಟೇ ವಿದ್ಯಾವಂತರು. ಇವರು ತಮ್ಮ ಕಿಟಕಿಗಳಿಂದ ಬೀದಿಗಳಲ್ಲಿ ಕಸವನ್ನು ಸುರಿಯುತ್ತಲೇ ಇರುವುದರಿಂದ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಜನರು ಅಥವಾ ಬಿಬಿಎಂಪಿ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ ಮತ್ತು ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ.

ನಾನು ನಿರಂತರವಾಗಿ ಹೊಗೆ, ಹಾನಿಕಾರಕ ಅನಿಲಗಳು, ಧೂಳು ಮತ್ತು ನಿರ್ಮಾಣ ಸಾಮಗ್ರಿಗಳನ್ನು ಉಸಿರಾಡುತ್ತಿದ್ದೇನೆ ಎಂದು ಅನಿಸುತ್ತದೆ. ನಿರ್ಮಾಣ ಶಬ್ದದ ಬಗ್ಗೆಯಂತೂ ಹೇಳಬೇಕಾಗಿಲ್ಲ. ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ಯಾರೂ ಕೇಳಲು ಹೋಗುವುದಿಲ್ಲ. ನಾವು ವಾಸಿಸುವ ರೀತಿ ನನಗೆ ಬೇಸರ ತರಿಸುತ್ತದೆ. ಭಾರತದ ಕೆಲವು ನಗರಗಳನ್ನು ಹೊರತುಪಡಿಸಿ, ನೀವು ಎಲ್ಲಿಗೆ ಹೋದರೂ ಎಲ್ಲವೂ ಇದೇ ರೀತಿ ಆಗಿರುತ್ತದೆ. ಯಾರೂ ಕಾಳಜಿ ವಹಿಸುವುದಿಲ್ಲ, ಅದು ಸರ್ಕಾರವಾಗಲಿ ಅಥವಾ ಜನರಾರಗಲಿ. ಹತ್ತಿರದ ರಸ್ತೆಯಲ್ಲಿ ದೊಡ್ಡ ಹೊಂಡಗಳಿವೆ. ಆದರೆ ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲ. ಯೋಗ್ಯ ತೆರಿಗೆ ಮತ್ತು ಮನೆ ಬಾಡಿಗೆಯನ್ನು ಪಾವತಿಸಿದ ನಂತರವೂ ಮೂಲಭೂತ ವಸ್ತುಗಳು ಕಾಣೆಯಾಗಿರುವುದು ತುಂಬಾ ದುಃಖಕರವಾಗಿದೆ. ನನಗೆ ಬೇಸರವಾಗಿದೆ" ಎಂದು ತಿಳಿಸಿದ್ದಾರೆ.

ಇಂತಹ ಪೋಸ್ಟ್‌ಗಳು ರೆಡ್ಡಿಟ್‌ನಲ್ಲಿ ಬಹಳಷ್ಟು ಸ್ಪಂದನೆ ಪಡೆದುಕೊಳ್ಳುತ್ತವೆ. ಸದ್ಯ ಇದಕ್ಕೂ ಜನರು ಪ್ರತಿಕ್ರಿಯಿಸಿದ್ದು, ಅವರ ಪ್ರತಿಕ್ರಿಯೆಗಳು ಇಂತಿವೆ..

"ಎಚ್‌ಎಸ್‌ಆರ್‌ನಲ್ಲಿ ಎಷ್ಟು ಏರಿಯಾಗಳಿವೆ ಎಂಬುದರ ಬಗ್ಗೆ ಜನರಿಗೆ ತಿಳಿದಿಲ್ಲ ಎಂದು ತೋರುತ್ತದೆ. ಅಭಿವೃದ್ಧಿಯಾಗದ ಹಲವು ಭಾಗಗಳಿವೆ. ವಿಶೇಷವಾಗಿ ಬಾರ್ಡರ್ ಕಡೆಗೆ. ನೀವು ವಿವಿಧ ವಲಯಗಳ ಒಳಾಂಗಣಕ್ಕೆ ಹೋದಾಗ, ಕಸದ ರಾಶಿಗಳು, ಕೊಳೆಗೇರಿಗಳಂತಹ ವಸತಿ ಸೌಕರ್ಯಗಳು ಇತ್ಯಾದಿಗಳನ್ನು ಗಮನಿಸಬಹುದು. 27ನೇ ಅಡ್ಡ ರಸ್ತೆಯು ಭಯಾನಕ ವಾತವರಣ ಹೊಂದಿರುವ ಒಂದು ಸ್ಥಳವಾಗಿದೆ, ವಿಶೇಷವಾಗಿ ಇಂದಿರಾ ಕ್ಯಾಂಟೀನ್ ಬಳಿ. 19ನೇ ಮುಖ್ಯ ರಸ್ತೆಯು ಜನರು ಬಹಿರಂಗವಾಗಿ ಮೂತ್ರ ವಿಸರ್ಜಿಸುವ ಮತ್ತು ಕಸ ಎಸೆಯುವ ಅನೇಕ ಸ್ಥಳಗಳನ್ನು ಹೊಂದಿದೆ. ಓಹ್, HSR ದುಬಾರಿ ಎಂದು ನನಗೆ ತಿಳಿದಿದೆ. ಆದರೆ ನೀವು HSR ನ ಸ್ವಲ್ಪ ಉತ್ತಮ ಭಾಗಕ್ಕೆ ಹೋಗಬಹುದೇ ಎಂದು ನೋಡಿ. ನಾನು 5 ವರ್ಷಗಳಿಂದ HSR ನಲ್ಲಿ 3 ಏರಿಯಾಗಳಲ್ಲಿ ವಾಸಿಸಿದ್ದೇನೆ. ಪರಿಸ್ಥಿತಿ ಉತ್ತಮವಾಗಿರುವ ಪ್ರದೇಶಗಳನ್ನು ಕಂಡುಹಿಡಿಯಲು ನಿಮಗೆ ನಾನು ಸಹಾಯ ಮಾಡಬಹುದು. ಸಾಧ್ಯವಾದರೆ, ಬೆಂಗಳೂರಿನ ಸ್ವಲ್ಪ ಹಳೆಯ ಭಾಗಕ್ಕೆ ಸ್ಥಳಾಂತರಗೊಂಡರೆ, ನೀವು ಮೆಟ್ರೋ ಸೌಲಭ್ಯದ ಜೊತೆಗೆ ಹೆಚ್ಚು ಶಾಂತಿಯುತ ಜೀವನವನ್ನು ಹೊಂದುವ ಸಾಧ್ಯತೆಯಿದೆ" ಎಂದು ಹಲವರು ಸೂಚಿಸಿದ್ದಾರೆ.

ಮತ್ತೆ ಕೆಲವರು "ಅದಕ್ಕಾಗಿಯೇ ನಾನು ದುಬಾರಿ ಸ್ಥಳಗಳಲ್ಲಿ ವಾಸಿಸುವುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹೊರವಲಯದಲ್ಲಿ ವಾಸಿಸುವುದು ಸರಿ. 1 bhk ಗೆ 7 ಸಾವಿರ ಬಾಡಿಗೆ. ಶಾಂತ ವಾತಾವರಣ, ಪ್ರತಿದಿನ ಸೂರ್ಯೋದಯಕ್ಕೆ ಎಚ್ಚರ.. ಶಾಂತಿಯಿಂದ ಇರಬಹುದು" ಎಂದಿದ್ದಾರೆ. ನೀವೇನಂತೀರಾ ನೋಡಿ…

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಗಳ ಸುರಕ್ಷತೆಗಾಗಿ ಅಮ್ಮನೇ ಅಪ್ಪನಾದ: ಗಂಡನ ಸಾವಿನ ನಂತರ ಗಂಡಿನಂತೆ ವೇಷ ಧರಿಸಿ ಬದುಕಿದ ತಾಯಿ
ಅಯ್ಯೋ ಚಪಾತಿ ಉಳಿತು ಅಂತ ಎಸಿಬೇಡಿ.. ಅದ್ರಿಂದಲೂ ಇಷ್ಟೆಲ್ಲಾ ಪ್ರಯೋಜನಗಳಿವೆ