ನಮ್ಮ ದೇಶದಲ್ಲಿ ಹೆಂಗಸರಿಗಿಂತ ಗಂಡಸರಿಗೆ ಹೆಚ್ಚು ರೋಗಗಳು ಬರುತ್ತವಂತೆ

By Suvarna Web DeskFirst Published Oct 29, 2017, 4:14 PM IST
Highlights

ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಶೇ.24ರಷ್ಟು ಹುಡುಗರಿಗೆ ಅಪೌಷ್ಟಿಕತೆಯಿದ್ದರೆ, ಹುಡುಗಿಯರಲ್ಲಿ ಶೇ.19 ಮಂದಿಯಲ್ಲಿ ಮಾತ್ರ ಅಪೌಷ್ಟಿಕತೆ ಇರುತ್ತದೆ.

ನಮ್ಮ ದೇಶದಲ್ಲಿ ಹೆಂಗಸರಿಗಿಂತ ಗಂಡಸರಿಗೇ ರೋಗಗಳು ಹೆಚ್ಚು. ಮಹಿಳೆಯರಿಗಿಂತ ಪುರುಷರು ಗಟ್ಟಿ ಎನ್ನುತ್ತಾರೆ. ಆದರೆ, ಇದು ಸುಳ್ಳು ಎನ್ನುತ್ತಿದೆ ಇಲ್ಲೊಂದು ಸಮೀಕ್ಷೆ.

ಇದರ ಪ್ರಕಾರ ನಮ್ಮ ದೇಶದಲ್ಲಿ ಮಹಿಳೆಯರಿಗಿಂತ ಪುರುಷರಿಗೇ ರೋಗಗಳು ಬರುವುದು ಹೆಚ್ಚು. ಡಯಾ ಬಿಟೀಸ್, ಅಪೌಷ್ಟಿಕತೆ, ಖಿನ್ನತೆ, ಒತ್ತಡ ಹೀಗೆ ಬಹುತೇಕ ಎಲ್ಲ ರೋಗಗಳೂ ಪುರುಷರಲ್ಲೇ ಕಾಣಿಸಿಕೊಳ್ಳುವುದು ಅಧಿಕ ಎನ್ನುತ್ತದೆ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ನಡೆಸಿದ ಸಮೀಕ್ಷೆ. ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಶೇ.24ರಷ್ಟು ಹುಡುಗರಿಗೆ ಅಪೌಷ್ಟಿಕತೆಯಿದ್ದರೆ, ಹುಡುಗಿಯರಲ್ಲಿ ಶೇ.19 ಮಂದಿಯಲ್ಲಿ ಮಾತ್ರ ಅಪೌಷ್ಟಿಕತೆ ಇರುತ್ತದೆ. ವಯಸ್ಸು ಹೆಚ್ಚಾದಂತೆ ಈ ಅಂತರ ಇನ್ನಷ್ಟು ಹೆಚ್ಚುತ್ತಾ ಹೋಗುತ್ತದೆ. ಇನ್ನು, ಅಧಿಕ ರಕ್ತದೊತ್ತಡ ಶೇ.38.5ರಷ್ಟು ಪುರುಷರಲ್ಲಿ ಕಾಣಿಸಿಕೊಂಡರೆ, ಶೇ.29ರಷ್ಟು ಮಹಿಳೆಯರು ಮಾತ್ರ ಇದರಿಂದ ಬಳಲುತ್ತಾರೆ. ಮಧುಮೇಹ ಶೇ.28ರಷ್ಟು ಪುರುಷರಿಗೆ ಬಂದರೆ ಮಹಿಳೆಯರಲ್ಲಿ ಇದು ಕಾಣಿಸಿಕೊಳ್ಳುವ ಸಾಧ್ಯತೆ ಶೇ.23 ಮಾತ್ರ.

ಇದಕ್ಕೆ ಕಾರಣ ಏನೆಂಬುದನ್ನು ಮಾತ್ರ ಸಮೀಕ್ಷೆ ಹೇಳಿಲ್ಲ. ಮೇಲೆ ಹೇಳಿದ ರೋಗಗಳಿಗೆಲ್ಲ ಒತ್ತಡವೂ ಒಂದು ಪ್ರಮುಖ ಕಾರಣವಾಗಿರುವುದರಿಂದ ಕಾರಣವನ್ನು ಯಾರು ಬೇಕಾದರೂ ಊಹಿಸಬಹುದು! ಒಟ್ಟಿನಲ್ಲಿ ಇನ್ಮುಂದೆ ಪುರುಷರು ನಾವೇ ನಿಮಗಿಂತ ಬಲಶಾಲಿಗಳು ಎಂದು ಮಹಿಳೆಯರೆದುರು ಹೇಳಿಕೊಳ್ಳು ವಂತಿಲ್ಲ. ನೋಡಲು ಬಲಿಷ್ಠವಾಗಿದ್ದರೆ ಏನು ಬಂತು...

click me!