ಗ್ಯಾಸ್ಟ್ರಿಕ್‘ನಿಂದ ಬಳಲುತ್ತಿರುವವರು ಈ ಆಹಾರ ಕ್ರಮಗಳನ್ನ ಅನುಸರಿಸಿದರೆ ಸಮಸ್ಯೆಯಿಂದ ದೂರವಿರಬಹುದು
ಬೆಂಗಳೂರು(ಸೆ.29): ಗ್ಯಾಸ್ಟ್ರಿಕ್.. ಇತ್ತೀಚಿನ ದಿನಗಳಲ್ಲಿ ಜನರನ್ನ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ.. ಹೊತ್ತಿಗೆ ಸರಿಯಾಗಿ ತಿನ್ನದಿರುವುದು.. ಕರಿದ ತಿಂಡಿಗಳು, ಖಾರದ ತಿಂಡಿಗಳ ಸೇವನೆ ಮುಂತಾದ ಕಾರಣಗಳನ್ನ ಗ್ಯಾಸ್ಟ್ರಿಕ್ ಬರಿಸಿಕೊಂಡು ಒದ್ದಾಡುತ್ತಿರುತ್ತಾರೆ. ಎಷ್ಟೇ ಔಷಧ ಪಡೆದರೂ ಹತೋಟಿಗೆ ಬರಲ್ಲ. ಗ್ಯಾಸ್ಟ್ರಿಕ್ ಹತೋಟಿಗೆ ಇರುವ ಏಕೈಕ ದಾರಿ ಎಂದರೆ ತಿನ್ನುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು. ಹೊಟ್ಟೆಗೆ ಕಷ್ಟ ಕೊಡುವ ಆಹಾರಗಳಿಂದ ದೂರವಿರುವುದು.
ಗ್ಯಾಸ್ಟ್ರಿಕ್‘ನಿಂದ ಬಳಲುತ್ತಿರುವವರು ಈ ಆಹಾರ ಕ್ರಮಗಳನ್ನ ಅನುಸರಿಸಿದರೆ ಸಮಸ್ಯೆಯಿಂದ ದೂರವಿರಬಹುದು
undefined
- ಹೆಚ್ಚು ಕರಿದ ತಿಂಡಿ, ಕೊಬ್ಬಿನಾಂಶವುಳ್ಳ ಆಹಾರವನ್ನ ತ್ಯಜಿಸಿ
- ಉಪ್ಪಿನಕಾಯಿ ತಿನ್ನುವುದನ್ನ ನಿಲ್ಲಿಸಿ, ಮೆಣಸು ಸೇರಿದಂತೆ ಮಸಾಲೆ ಪದಾರ್ಥಗಳ ಸೇವನೆ ನಿಲ್ಲಿಸಿ
- ವಿನೇಗರ್ ಮತ್ತು ವಿನೇಗರ್ ಬಳಸಿ ತಯಾರಿಸಿದ ಆಹಾರ ಸೇವಿಸಬೇಡಿ.
- ಕೆಫಿನ್, ಆಲ್ಕೋಹಾಲ್, ಸಿಟ್ರಿಕ್ ಆಸಿಡ್ ಇರುವ ಪಾನೀಯಗಳ ಸೇವನೆಗೆ ಫುಲ್ ಸ್ಟಾಪ್ ಇಡಿ. ಸಾಫ್ಟ್ ಡ್ರಿಂಕ್ಸ್‘ಗಳು ಆಸಿಡಿಟಿ ಹೆಚ್ಚಿಸುತ್ತವೆ.
- ಫ್ಲೇವನಾಯ್ಡ್‘ಭರಿತ ಆಪಲ್, ಕ್ಯಾನ್‘ಬೆರಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನ ಆಹಾರದಲ್ಲಿ ಸೇವಿಸಿ, ಇವುಗಳು ಗ್ಯಾಸ್ಟ್ರಿಕ್ ಉಂಟುಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನ ನಿಯಂತ್ರಿಸುತ್ತದೆ.
- ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರ ಪದಾರ್ಥಗಳ ಸೇವನೆಯನ್ನ ಕಡಿಮೆ ಮಾಡಿ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಈ ಫ್ಯಾಟಿ ಫುಡ್‘ಗಳನ್ನ ಜೀರ್ಣಿಸಿಕೊಳ್ಳುವುದು ಕಠಿಣ.
- ಬೀಫ್, ಕರಿದ ಮೀನು, ಹಂದಿಮಾಂಸದ ಸೇವನೆ ನಿಲ್ಲಿಸಿ.
- ಮಿಲ್ಕ್ ಶೇಕ್, ಚೀಸ್, ಐಸ್ ಕ್ರೀಮ್ ಸೇವನೆಯೂ ಆಸಿಡಿಟಿ ಹೆಚ್ಚಿಸುತ್ತದೆ.
- ಚಾಕೋಲೇಟ್‘ಗಳ ಸೇವನೆ, ಬಟರ್ ಬಿಸ್ಕೆಟ್, ಕೇಕ್ ಸೇರಿದಂತೆ ಕಂದುಬಣ್ಣದ ಆಹಾರಗಳ ಸೇವನೆ ಬೇಡ
- ಎಲ್ಲಕ್ಕಿಂತ ಮುಖ್ಯವಾಗಿ ಆಸಿಡಿಟಿ ಇರುವವರು ಹೊಟ್ಟೆ ತುಂಬಾ ತಿನ್ನಲೇಬಾರದು. ಹೆಚ್ಚು ತಿಂದರೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಮಿತವಾಗಿ ತಿನ್ನಿ, ಆಹಾರದಲ್ಲಿ ತರಕಾರಿ, ಹಣ್ಣುಗಳು ಹೆಚ್ಚಾಗಿರಲಿ.