ಅಂಬಾನಿ ಮಗನ ಮದುವೆಗೆ 1.5ಲಕ್ಷ ರು. ಆಮಂತ್ರಣ ಪತ್ರಿಕೆ!

Published : Dec 19, 2017, 01:07 PM ISTUpdated : Apr 11, 2018, 12:35 PM IST
ಅಂಬಾನಿ ಮಗನ ಮದುವೆಗೆ 1.5ಲಕ್ಷ  ರು. ಆಮಂತ್ರಣ ಪತ್ರಿಕೆ!

ಸಾರಾಂಶ

ಆದರೆ ನಿಜಕ್ಕೂ ಮುಖೇಶ್ ಅಂಬಾನಿ ಮಗನ ಮದುವೆಗೆ ಇಷ್ಟೊಂದು ಬೆಲೆಬಾಳುವ ಆಮಂತ್ರಣ ಪತ್ರಕೆಯನ್ನು ಮಾಡಿಸಿದ್ದರೇ ಎಂದು ಎಂದು ಪರಿಶೀಲಿಸಿದಾಗ ಬಯಲಾದ ಸತ್ಯವೇ ಬೇರೆ

ರಿಲೆಯನ್ಸ್ ಕಂಪನಿ ಲಿಮಿಟೆಡ್‌ನ ಮುಖ್ಯಸ್ಥ ಮತ್ತು ಭಾರತದ ಅಗರ್ಭ ಶ್ರೀಮಂತರಾದ ಮುಖೇಶ್ ಅಂಬಾನಿಯವರ ಮಗ ಆಕಾಶ್ ಅಂಬಾನಿ ವಿವಾಹವಾಗುತ್ತಿದ್ದು, ಮದುವೆಯ ಕರೆಯೋಲೆಯು ಲಕ್ಷ ಲಕ್ಷ ಬೆಲೆಬಾಳುತ್ತಿದೆ ಎಂದು ಹೇಳುವಂತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೋದಲ್ಲಿ ಈ ಅದ್ದೂರಿ ವಿವಾಹ ಮಹೋತ್ಸಕ್ಕೆ ಆತ್ಮೀಯರನ್ನು ಆಮಂತ್ರಣ ಮಾಡಲು 1.5ಲಕ್ಷ ರು. ಬೆಲೆಯ ಇನ್ವಿಟೇಶನ್ ಕಾರ್ಡ್ ಮಾಡಿಸಲಾಗಿದೆ ಎಂದಿದೆ. ಆದರೆ ನಿಜಕ್ಕೂ ಮುಖೇಶ್ ಅಂಬಾನಿ ಮಗನ ಮದುವೆಗೆ ಇಷ್ಟೊಂದು ಬೆಲೆಬಾಳುವ ಆಮಂತ್ರಣ ಪತ್ರಕೆಯನ್ನು ಮಾಡಿಸಿದ್ದರೇ ಎಂದು ಎಂದು ಪರಿಶೀಲಿಸಿದಾಗ ಬಯಲಾದ ಸತ್ಯವೇ ಬೇರೆ. ಈ

ಅದ್ದೂರಿ ವಿವಾಹ ಆಮಂತ್ರಣಕ್ಕೂ ಆಕಾಶ್ ಅಂಬಾನಿಗೂ ಸಂಬಂಧವೇ ಇಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಡಿಸೆಂಬರ್ 11ರಂದು ಇಟಲಿಯಲ್ಲಿ ನಡೆದ ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮಾ ವಿವಾಹ ಮಹೋತ್ಸವದ ಸಂದರ್ಭದಲ್ಲಿ ಈ ರೀತಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ. ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ವಿವಾಹವು ಸುಳ್ಳು ಸುದ್ದಿ.

ಒಂದು ವೇಳೆ ಆಕಾಶ್ ಅಂಬಾನಿಯ ವಿವಾಹವು ನಿಶ್ಚಯವಾದಲ್ಲಿ ತಾವೇ ತಿಳಿಸುವುದಾಗಿ ರಿಲೆಯನ್ಸ್ ಸಂಸ್ಥೆ ಸ್ಪಷ್ಟಪಡಿಸಿದೆ. ಹೀಗಾಗಿ ಮುಖೇಶ್ ಅಂಬಾನಿ ಮಗನ ಮದುವೆಗೆ ಅದ್ದೂರಿ ಆಮಂತ್ರಣ ಪತ್ರಿಕೆಯನ್ನು ಮಾಡಿಸಲಾಗಿದೆ ಎಂಬಂತಹ ಸುದ್ದಿ ಸುಳ್ಳು ಎಂಬಂತಾಯಿತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪುರುಷರಿಗಿಲ್ಲದ ಕಟ್ಟುಪಾಡು ನಮಗೇಕೆ?: ಮಲೈಕಾ
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?