ಮಗನಿಗೇಕೆ ಹೆಣ್ಣಿನ ಸ್ವರ?

Published : Oct 23, 2016, 01:12 PM ISTUpdated : Apr 11, 2018, 01:07 PM IST
ಮಗನಿಗೇಕೆ ಹೆಣ್ಣಿನ ಸ್ವರ?

ಸಾರಾಂಶ

‘ಭಾವನಾತ್ಮಕವಾಗಿ ಗಂಡಸರಾಗಿ ಬೆಳವಣಿಗೆ ಹೊಂದದ ಕಾರಣಕ್ಕೆ ಹೀಗಾಗುತ್ತದೆ’ ಎಂದು ಮನಃಶ್ಶಾಸದ ಅಧ್ಯಯನಗಳು ಹೇಳುತ್ತವೆ. ಆದರೆ, ಇದಕ್ಕೂ ಆಧಾರವಿಲ್ಲ

ಮಗನಿಗೇಕೆ ಹೆಣ್ಣಿನ ಸ್ವರ?

ನನಗೆ 19 ವರ್ಷದ ಮಗನಿದ್ದಾನೆ. ಅವನ ಧ್ವನಿ ಸಂಪೂರ್ಣವಾಗಿ ಹೆಣ್ಣು ದನಿಯಂತೆಯೇ ಇದೆ. ಕಾಲೇಜಿನಲ್ಲಿ ಅವನಿಗೆ ಹಂಗಿಸುವವರ ಸಂಖ್ಯೆಯೂ ಜಾಸ್ತಿ ಆಗುತ್ತಿದೆ. ಮಗನ ದನಿಯನ್ನು ಗಡಸು ಮಾಡುವುದು ಹೇಗೆ? ಇದಕ್ಕೇನಾದರೂ ಚಿಕಿತ್ಸೆಗಳಿವೆಯೇ?

- ಕೆಆರ್ ಶರತ್ ಶರ್ಮಾ, ನೆಲಮಂಗಲ

ನಿಮ್ಮ ಮಗನ ಈ ಸ್ಥಿತಿಗೆ ‘ಪ್ಯೂಬರ್‌ನಿಯಾ’ ಎನ್ನುವರು. ಇದು ತೀರಾ ಸಾಮಾನ್ಯ ತೊಂದರೆ. ಯಾವ ದೈಹಿಕ ಲೋಪದಿಂದ ಹೀಗಾಗುತ್ತೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಿಲ್ಲ. ಆದರೆ, ಇದರ ಹಿಂದೆ ಒಂದಿಷ್ಟು ಸೈಕಲಾಜಿಕಲ್ ಕಾರಣಗಳಂತೂ ಇವೆ. ‘ಭಾವನಾತ್ಮಕವಾಗಿ ಗಂಡಸರಾಗಿ ಬೆಳವಣಿಗೆ ಹೊಂದದ ಕಾರಣಕ್ಕೆ ಹೀಗಾಗುತ್ತದೆ’ ಎಂದು ಮನಃಶ್ಶಾಸದ ಅಧ್ಯಯನಗಳು ಹೇಳುತ್ತವೆ. ಆದರೆ, ಇದಕ್ಕೂ ಆಧಾರವಿಲ್ಲ. ಬೇರೆಲ್ಲ ಪುರುಷತ್ವ ಗುಣಗಳಿದ್ದವರೂ, ಹೆಣ್ಣಿನ ಸ್ವರವನ್ನು ಹೊಂದಿದ ಸಾಕಷ್ಟು ಪ್ರಕರಣಗಳಿವೆ. ಮಾನಸಿಕವಾಗಿ ದುರ್ಬಲವಾಗಿದ್ದವರಲ್ಲಿ ಇಂಥ ತೊಂದರೆಗಳು ಸಹಜ. ಇಂಥವರನ್ನು ಗಂಡಸರೇ ಅಲ್ಲ ಅಂತ ಮೂದಲಿಸುವವರೂ ಇದ್ದಾರೆ. ಆದರೆ, ಇದು ತಪ್ಪು. ಸಮಾಜದ ಇಂಥ ಧೋರಣೆಯಿಂದ ವ್ಯಕ್ತಿ ಖಿನ್ನತೆಗೆ ಜಾರುತ್ತಾನೆ. ಸಮಾಜದಲ್ಲಿ ಸಿಗಬೇಕಾದ ಸ್ಥಾನಮಾನಗಳು ಸಿಗುವುದಿಲ್ಲ. ಉದಾಃ ನನ್ನ ಸ್ನೇಹಿತನೊಬ್ಬ ಈ ತೊಂದರೆಯ ಕಾರಣದಿಂದ ಬೇರೆ ಹುದ್ದೆ ಸೇರುವ ಅರ್ಹತೆಯಿದ್ದರೂ, ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದಾನೆ. ‘ಪ್ಯೂಬರ್‌ೆನಿಯಾ’ಕ್ಕೆ ಚಿಕಿತ್ಸೆಯೂ ಬಹಳ ಸುಲಭ. ಸಾವಿರಕ್ಕೆ ಒಂದು ಪ್ರಕರಣಗಳಲ್ಲಿ ಆಪರೇಶನ್ ಅಗತ್ಯವಿರುತ್ತದಷ್ಟೇ. ಉಳಿದಂತೆ 30 ನಿಮಿಷದ ಎರಡು ತರಬೇತಿಯಿಂದ ಇದನ್ನು ಸರಪಡಿಸಬಹುದು. ಇದಕ್ಕೆ ‘ಶಬ್ದ ತರಬೇತಿ ಚಿಕಿತ್ಸೆ’ ಎನ್ನುತ್ತಾರೆ. ತಪ್ಪುಸ್ವರವನ್ನು ಇಲ್ಲಿ ತಿದ್ದಿ, ಶಬ್ದಕ್ಕೆ ಸ್ಪಷ್ಟ ಆಕಾರ ನೀಡಲಾಗುತ್ತದೆ.

(ಸುಖೀ ಹಾಸ್ಪಿಟಲ್ -ಡಾ. ಗೌತಮ್, ಇಎನ್‌ಟಿ ತಜ್ಞ, ಕನ್ನಡ ಪ್ರಭ)

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

40 ದಿನಗಳಲ್ಲಿ 150 ಮದುವೆ ಕ್ಯಾನ್ಸಲ್, ಸೋಶಿಯಲ್ ಮೀಡಿಯಾ ವಿಲನ್
ನೀವು ಸಾಯುವ ಮೊದಲು ಈ 4 ವಸ್ತುಗಳನ್ನು ಹೊಂದಿದ್ದರೆ, ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರಂತೆ