ಪ್ರೀತಿಸುವಾಗ ಸಂಗಾತಿಗಳಿಬ್ಬರು ಯಾವುದು ಸರಿ, ಯಾವುದು ತಪ್ಪೆಂಬುದನ್ನು ನಿರ್ಧರಿಸಬೇಕು. ಬದಲಾಗಿ ಮೂರನೇಯವರಿಗೆ ಈ ಇಬ್ಬರ ನಡುವೆ ನಡೆಯುವ ಪ್ರೇಮದಾಟ ಅರ್ಥವೇ ಆಗುವುದಿಲ್ಲ. ಅದಕ್ಕೆ ಏನೇ ಭಿನ್ನಾಭಿಪ್ರಾಯಗಳು ವ್ಯಕ್ತವಾದರೂ ಇಬ್ಬರೇ ಕೂತು, ಮಾತನಾಡಿ ವ್ಯವಹರಿಸಿಕೊಳ್ಳುವುದು ಒಳಿತು.

ಇಂಥ ಪ್ರೀತಿಯಲ್ಲಿ ಮುತ್ತಿಡುವುದು ತಪ್ಪೋ, ಸರಿಯೋ? ಒಬ್ಬರಿಗೆ ಸರಿ ಎಂದೆನಿಸಿದ್ದು, ಮತ್ತೊಬ್ಬರಿಗೂ ಸರಿಯಾಗಿಯೇ ಕಾಣಬೇಕೆಂಬ ಕಾನೂನು ಏನಿಲ್ಲ. ಈ ವಿಚಾರವಾಗಿಯೇ BBC Radio 5 live ಸಮೀಕ್ಷೆಯೊಂದನ್ನು ನಡೆಸಿದೆ. ಇದರ ಪ್ರಕಾರ ಶೇ.73 ಮಹಿಳೆಯರು ಕಿಸ್ ಮಾಡುವುದನ್ನು ಮೋಸವೆಂದೇ ಪರಿಗಣಿಸುತ್ತಾರಂತೆ! ಹಾಗಂಥ ಗಂಡಸರೇನೂ ಇದರಲ್ಲಿ ತಪ್ಪೇ ಇಲ್ಲವೆಂದು ಭಾವಿಸುವುದಿಲ್ಲ. ಬದಲಾಗಿ ಶೇ.50ರಷ್ಟು ಪುರುಷರೂ ಮುತ್ತಿಡುವುದನ್ನು ನಂಬಿಕೆ ದ್ರೋಹವೆಂದೇ ಪರಿಗಣಿಸುತ್ತಾರಂತೆ!

ಬ್ಯುಟಿ ವಿಥ್ ಬ್ರೈನಿ ಹೆಣ್ಣಿನ ಮಿ.ರೈಟ್ ಹೇಗಿರಬೇಕು?

ಅಷ್ಟಕ್ಕೂ ಇದರಲ್ಲಿ ಮೋಸ ಯಾವುದು?

ಗುರುತು ಪರಿಚಯವಿಲ್ಲದವರೊಂದಿಗೆ ಹಾಸಿಗೆ ಹಂಚುಕೊಳ್ಳುವುದನ್ನು ಸುಮಾರು ಶೇ.91 ಮಂದಿ ಮೋಸವೆನ್ನುತ್ತಾರೆ. ಆದರೆ, ಮುತ್ತು ಕೊಡುವುದನ್ನಲ್ಲ. ಇನ್ನೂ ಆಳವಾಗಿ ನಡೆಸಿದ ಸಮೀಕ್ಷೆಯಲ್ಲಿ ಶೇ. 75 ಮಂದಿ ಸೈಬರ್ ಸೆಕ್ಸ್ ಅನ್ನು ಮೋಸವೆನ್ನುತ್ತಾರೆ. ಜನರಲ್ ಆಗಿ ನೋಡಿದರೆ ಶೇ.40ರಷ್ಟು ಮಂದಿ ಡೇಟಿಂಪ್ ಆ್ಯಪ್ ಬಳಸುವುದನ್ನು ಮೋಸ ಮಾಡಲು ಮತ್ತೊಂದು ದಾರಿ ಎನ್ನುತ್ತಾರೆ. 

ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಲೈಂಗಿಕ ಶಿಕ್ಷಣದ ಅಗತ್ಯತೆ ಬಗ್ಗೆ ಜನರನ್ನು ಕೇಳಿದಾಗ, ಶೇ.47 ಮಂದಿ ಇದರಿಂದ ಏನೂ ಉಪಯೋಗವಿಲ್ಲವೆಂದರಂತೆ.  ಲೈಂಗಿಕತೆ ಎನ್ನುವುದು ಸಮಾನ ಮನಸ್ಕರು ಮಾತನಾಡೋ ವಿಷಯವೆಂದುಕೊಳ್ಳುತ್ತಾರಂತೆ ಜನರು.

ಸುಖಕ್ಕಾಗಿ ಹಾತೊರೆಯುವ ಮುನ್ನ ಇರಲಿ ಅರಿವು...