International Tea Day: ಮಳೆಯಲಿ, ಜೊತೆಯಲ್ಲೊಂದು ಕಪ್ ಆಪ್ ಟೀ

Published : May 21, 2025, 02:24 PM IST
International Tea Day: ಮಳೆಯಲಿ, ಜೊತೆಯಲ್ಲೊಂದು ಕಪ್ ಆಪ್ ಟೀ

ಸಾರಾಂಶ

ಚಹಾ ಕುಡಿಯುವುದು ಕೇವಲ ಪಾನೀಯವಲ್ಲ, ಅದು ಒಂದು ಸಂಸ್ಕೃತಿ, ಒಂದು ಭಾವನೆ. ಈ ಲೇಖನವು ಚಹಾದ ತಯಾರಿಕೆಯ ಕಲೆ, ಅದರ ಸಾಮಾಜಿಕ ಮಹತ್ವ ಮತ್ತು ಅಂತರರಾಷ್ಟ್ರೀಯ ಚಹಾ ದಿನದಂದು ಚಹಾ ಪ್ರೀತಿಯನ್ನು ಆಚರಿಸುವ ಬಗ್ಗೆ ಒಳನೋಟಗಳನ್ನು ನೀಡುತ್ತದೆ.

ವಿನಯ್ ಶಿವಮೊಗ್ಗ

'Life is a cup of Tea …..it’s all in how you make it'
 
ಎಲ್ಲರೊಳಗೊಂದಾಗು ಮಂಕುತಿಮ್ಮ … ಎಲ್ಲರೊಳಗೆ  ಒಂದಾಗೋದು ಅನ್ನುವ  ಈ ಭಾವಕ್ಕೆ ಒಂದು perfect example ಅಂದ್ರೆ ನಮ್ಮ 'ಚಾಯ್' (Tea) 
 
ಏಲಕ್ಕಿ , ಶುಂಠಿ, ಚೆಕ್ಕೆ, ಲವಂಗ , ಜಾಕಾಯಿ, ಮೆಣಸಿನ ಕಾಳು , ಪುದೀನಾ, ಇನ್ನೂ ಏನೇನೋ  ಹಸಿರು ಟೀ, herbal tea, jasmine tea, lemongrass tea ಕೊನೆಗೆ ಲಿಂಬೆಹಣ್ಣಿನ ಜೊತೆಗೂ ಹದವಾಗಿ ಬೆರೆಯುವ ಗುಣವಿರುವುದು ಈ ಟೀಗೆ ಮಾತ್ರ. ಸಕ್ಕರೆನೋ, ಬೆಲ್ಲನೋ ಒಟ್ಟಿನಲ್ಲಿ  ಹೊತ್ತಲ್ಲದ ಹೊತ್ನಲ್ಲೂ ಜೊತೆಯಾಗಬಲ್ಲ ಸಂಗಾತಿ ಅಂದ್ರೆ ಅದು 'ಟೀ' ಅಲ್ವಾ?! 
 
ಅದ್ಯಾವುದೋ ರಸ್ತೆ ಬದಿಯ ಗೂಡಂಗಡಿಯಾಗಲಿ ಅಥವಾ ಪಂಚತಾರ ಹೋಟೆಲ್ಲೇ ಆಗಲಿ, ಆರಾಮಾಗಿ ಕೂತು ಟೀ ಹೀರುವ ಸುಖ ಮಾತ್ರ ಬಲ್ಲವನೇ ಬಲ್ಲ.  
ಈ ಟೀ ಕುದಿಸೋದೂ ಒಂದು ಕಲೆ ಕಂಡ್ರೀ! ಬರೀ ಹಾಲು, ಸಕ್ಕರೆ ಟೀ ಪುಡಿ ಸೇರ್ಸಿದ್ರೆ ಟೀ ಆಗಲ್ಲ. ಮೊದಲು ಕೊಂಚ ನೀರಿನೊಡನೆ ಟೀ ಪುಡಿಯನ್ನು ಮಂದ ಬೆಂಕಿಯ ಉರಿಯಲ್ಲಿ ಹದವಾಗಿ ಕುದಿಸಬೇಕು. ಹಾಗೆ ಕುದಿಯುವಾಗ ಟೀ ಪುಡಿಯ ಸುಗಂಧವನ್ನು ಅನುಭವಿಸಬೇಕು! ಆನಂತರ  ನಿಮ್ಮ ರುಚಿಗೆ ಅನುಸಾರ ಹಾಲು -ಸಕ್ಕರೆ ಹಾಗೂ ಒಂದಿಷ್ಟು ಪ್ರೀತಿ ಸೇರಿಸಿ ಅದನ್ನು ಮತ್ತೆ ಕೊಂಚ ಕುದಿಸಿ, ಸೋಸಿ ಎರಡು ಅಂಗೈಗಳ ಮಧ್ಯೆ ಲೋಟವನ್ನು ಇಟ್ಟು ಆ ಬೆಚ್ಚನೆಯ ಶಾಖವನ್ನು ಅನುಭವಿಸುತ್ತಾ ಒಂದೊಂದೇ ಗುಟುಕನ್ನು ಸವಾಕಾಶವಾಗಿ ಹೀರಬೇಕು. ನನ್ನ ಪ್ರಕಾರ ಇದೂ ಒಂದು ಧ್ಯಾನವೇ ಸರಿ. 
 
ಟೀ ಕುಡಿಯುವ ನೆಪದಲ್ಲಿ ಈ ಸಮಾಜದಲ್ಲಿ ಒಂದಿಷ್ಟು ಮುಗಿಯದ ಸಂಭ್ರಮವಿದೆ ! ಗೆಳೆತನದ ಮಧುರತೆ ಇದೆ, ಲೋಕಾಭಿರಾಮದ ಮಾತುಕತೆ ಇದೆ. ಬೆಳ್ಳಂ ಬೆಳಗ್ಗೆಯಾಗಲಿ ಅಥವಾ ನಡುರಾತ್ರಿಯಾಗಲಿ ಪ್ರಪಂಚದ ಯಾವುದೇ ಮೂಲೆಯಲ್ಲಿ ಜೊತೆಯಾಗಿ ಕೈ ಹಿಡಿಯಬಲ್ಲ ಏಕೈಕ ಸಂಗಾತಿ ಎಂದರೆ ಅದು ಟೀ ಮಾತ್ರ! ಅದು ದೊಡ್ಡಗುಂಪಿನ ಮೋಜಿರಬಹುದು ಅಥವಾ ಏಕಾಂತದ ಕ್ಷಣಗಳಿರಬಹುದು.   
 
ಅಂದ ಹಾಗೆ ಈ ಟೀಯನ್ನು ಸರಿಯಾಗಿ ತಯಾರಿಸಬಲ್ಲವರು ದೇಶವನ್ನೇ ಸರಿಯಾಗಿ ನಡೆಸಬಲ್ಲರು ಎನ್ನುವ ಸತ್ಯ ಈಗ ಜಗಜ್ಜಾಹೀರವಾಗಿಗಿದೆ ಅಲ್ವಾ? 

ಇವತ್ತು  International Tea day ಅಂತೆ! ಮಳೆಯೂ ಜೋರಾಗೇ ಸುರಿತಿದೆ. ಒಂದು ಬೆಚ್ಚಗಿನ ಟೀ ಕುಡಿದು ಈ ಟೀ ಕೊಟ್ಟ ಜೀವನ ಪ್ರೀತಿಗೆ ಒಂದು Thanks ಹೇಳಿ ಬಿಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವ್ಯಕ್ತಿಯ ಸ್ವಭಾವ ಅರ್ಥ ಮಾಡಿಕೊಳ್ಳಲು ಸುಲಭ ಮಾರ್ಗ ಹೇಳಿಕೊಟ್ಟ ಚಾಣಕ್ಯರು
ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಮದುವೆ ಮುರಿದ ಯುವತಿ