
ಬೇಕಾಗುವ ಸಾಮಾಗ್ರಿಗಳು
- ಮುಕ್ಕಾಲು ಕಪ್ ಓಟ್ಸ್
- ಅರ್ಧ ಕಪ್ ಅಕ್ಕಿ ಇಟ್ಟು
- ಕಾಲು ಕಪ್ ರವೆ
- ಅರ್ಧ ಕಪ್ ಮೊಸರು
-1 ಚಮಚ ಸಣ್ಣದಾಗಿ ತುರಿದ ಶುಂಠಿ
- ಸಣ್ಣದಾಗಿ ಹೆಚ್ಚಿರುವ ಕೊತ್ತಂಬರಿ ಸೊಪ್ಪು
- ಅರ್ಧ ಚಮಚ ಮೆಣಸಿನ ಪುಡಿ
- ಸಣ್ಣಗೆ ಹೆಚ್ಚಿರುವ ಮೆಣಸಿನ ಕಾಯಿ
- ಅರ್ಧ ಈರುಳ್ಳಿ
- 1 ಚಮಚ ಉಪ್ಪು
- 3 ಕಪ್ ನೀರು
ಮಾಡುವ ವಿಧಾನ:
ಮುಕ್ಕಾಲು ಕಪ್ ಓಟ್ಸ್ ಅನ್ನು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ. ಅದಕ್ಕೆ ಅಕ್ಕಿ ಇಟ್ಟು, ರವೆ, ಮೊಸರು, ಶುಂಠಿ, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಈರುಳ್ಳಿ, ಉಪ್ಪು ಮತ್ತು 3 ಕಪ್ ನೀರು ಸೇರಿ. 20 ನಿಮಿಷ ನೆನೆಯಲು ಬಿಡಿ. ನಂತರ ಕಾದ ಕಾವಲಿಗೆ ಹಾಕಿ. ರುಚಿ ರುಚಿಯಾದ ಓಟ್ಸ್ ದೋಸೆ ರೆಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.