ನಿಂಬೆ ಹಣ್ಣಿನಂಥ ಹೆಣ್ಣೂ ಚೆಂದ, ಸಾರೂ ರುಚಿ

By Web DeskFirst Published Aug 23, 2018, 9:45 AM IST
Highlights

ತ್ವಚೆಗೆ, ಕೂದಲಿಗೆ ನಿಂಬೆ ಹಣ್ಣು ಬೆಸ್ಟ್ ಮದ್ದು. ಇದನ್ನು ಅಡುಗೆಗೆ ಸಾಕಷ್ಟು ಬಳಸುವುದರಿಂದ ಆರೋಗ್ಯಕ್ಕೆ ಒಳಿತು. ಅಡುಗೆಯ ರುಚಿ ಹೆಚ್ಚುವುದಲ್ಲದೇ, ಬಾಯಿ ರುಚಿಗೂ ನಿಂಬೆ ಬೆಸ್ಟ್. ನಿಂಬೆ ಹಣ್ಣಿನಿಂದ ಸಾರು ಮಾಡೋದು ಹೇಗೆ? ಇಲ್ಲಿದೆ ರೆಸಿಪಿ...

ಬೇಕಾಗುವ ಸಾಮಾಗ್ರಿ:

  • ಒಂದು ಚಮಚ ತೊಗರಿಬೇಳೆ 
  • 1 ದೊಡ್ಡ ಗಾತ್ರದ ನಿಂಬೆ ಹಣ್ಣು
  • ತೆಂಗಿನ ತುರಿ
  • ಸಾಂಬರ್ ಪುಡಿ
  • ಎಣ್ಣೆ 
  • ಸಾಸಿವೆ
  • ಇಂಗು
  • ಬೆಲ್ಲ
  • ಕೊತ್ತಂಬರಿ ಸೊಪ್ಪು
  • ಕರಿಬೇವು
  • ಉಪ್ಪು

ಮಾಡುವ ವಿಧಾನ: 

ಬೇಳೆಯನ್ನು ಬೇಯಿಸಿಕೊಂಡು, ನಿಂಬೆ ರಸ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ. ನಂತರ ಬೆಲ್ಲ, ತೆಂಗಿನ ತುರಿ, ಸಾರಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿ ಸಾರನ್ನು ಕುದಿಸಿ. ನಂತರ ಸಾಸಿವೆ, ಇಂಗು ಒಗ್ಗರಣೆ ಹಾಕಿ ಕುದಿಸಿ, ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿ ರುಚಿಯಾದ ಸಾರು ರೆಡಿ.

click me!