ಭಾರತದಲ್ಲಿದ್ದರೂ ಈ ತಾಣಕ್ಕೆ ಭಾರತಿಯರಿಗೆ ಪ್ರವೇಶ ನಿಷೇಧ!

By Web Desk  |  First Published Jul 4, 2019, 3:02 PM IST

ಭಾರತದ ಸಂವಿಧಾನದಲ್ಲಿ ದೇಶದ ಪ್ರಜೆ ಎಲ್ಲಿಗೆ ಬೇಕಾದರೂ, ಹೋಗಿ-ಬರುವ, ನೆಲೆಸುವ, ಆಸ್ತಿ ಕೊಳ್ಳುವ ಸ್ವಾತಂತ್ರ್ಯವಿದೆ. ಅಫ್‌ಕೋರ್ಸ್ ಜಮ್ಮು ಕಾಶ್ಮೀರಕ್ಕೆ ತುಸು ಭಿನ್ನವಾದ ಕಾನೂನಿದೆ. ಆದರೆ, ನಮ್ಮ ದೇಶದಲ್ಲಿಯೇ ಇರೋ ಈ ಪ್ರದೇಶಗಳಿಗೆ ನಾವೇ ಪ್ರವೇಶಿಸೋ ಹಾಗಿಲ್ಲ...


ಟ್ರಾವೆಲ್ ಮಾಡಲು ಹೇಳಿ ಮಾಡಿಸಿದ ಸಾವಿರಾರು ಸುಂದರ ತಾಣಗಳು ಭಾರತದಲ್ಲಿವೆ. ವಿದೇಶಿಗರಿಗೂ ಇಲ್ಲಿ ಸ್ವಾಗತ ಸುಸ್ವಾಗತ. ಅಂಥ ಸ್ಥಳಗಳಿಗೆ ಭೇಟಿ ನೀಡೋ ಮುನ್ನ ಆ ಪ್ರದೇಶದ ಮಾಹಿತಿ ನಿಮ್ಮೊಂದಿಗೆ ಇದ್ದರೊಳಿತು. ಕೆಲವು ತಾಣಗಳಲ್ಲಿ ವಿದೇಶಿಯರಿಗೆ ಮಾತ್ರ ಪ್ರವೇಶಾವಕಾಶ. ಭಾರತೀಯರಿಗಿಲ್ಲ! 

ಉನೋ ಇನ್ ಹೋಟೆಲ್ ಬೆಂಗಳೂರು 

ಈ ಹೋಟೆಲ್ ಬೆಂಗಳೂರಿನಲ್ಲಿ 2012ರಲ್ಲಿ ಜಪಾನೀಯರಿಗಾಗಿಯೇ ತೆರೆಯಲಾಯಿತು. ಜಪಾನ್ ಪ್ರಜೆಗಳಿಗಷ್ಟೇ ಈ ಹೊಟೇಲ್‌ನಲ್ಲಿ ಪ್ರವೇಶ ಅವಕಾಶವಿತ್ತು. ಆದರೆ, ಇಲ್ಲಿ ಜನಾಂಗೀಯ ತಾರತಮ್ಯ ಮಾಡಲಾಗುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೊಟೇಲನ್ನು ಬಿಬಿಎಂಪಿ ಬಂದ್ ಮಾಡಿತು. 

Tap to resize

Latest Videos

undefined

ಅಮಾವಾಸ್ಯೆಯಂದು ಈ ಕೋಟೆಯಿಂದ ಕೇಳಿ ಬರುತ್ತೆ ವಿಚಿತ್ರ ಕೂಗು!

ಫ್ರೀ ಕಸೋಲ್ ಕೆಫೆ, ಕಸೋಲ್ 

ಹಿಮಾಚಲ್ ಪ್ರದೇಶದಲ್ಲಿ 2015ರಲ್ಲಿ ನಿರ್ಮಾಣವಾದ ಕೆಫೆ. ಮೊದಲು ಇಲ್ಲಿ ಭಾರತೀಯ ಮಹಿಳೆಯರಿಗೆ ಪ್ರವೇಶ ನಿಷೇದಿಸಲಾಗಿತ್ತು. ಆಮೇಲೆ ಕೇವಲ ಇಸ್ರೇಲಿ ಪ್ರಜೆಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಯಿತು. 

ಫಾರಿನರ್ ಓನ್ಲಿ  ಬೀಚ್, ಗೋವಾ 

ಗೋವಾದಲ್ಲಿ ಹಲವು ಬೀಚ್, ರೆಸ್ಟೋರೆಂಟ್ ಹಾಗೂ ಉಪಹಾರ ಗೃಹಗಳು ಕೇವಲ ಫಾರಿನರ್ಸ್‌ಗೆ ಮೀಸಲಿಡಲಾಗಿದೆ.

ಚೆನ್ನೈನಲ್ಲಿರುವ ಲಾಡ್ಜ್ 

ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರಿಗೆ ಮಾತ್ರ ಚೆನ್ನೈನಲ್ಲಿರುವ ಲಾಡ್ಜ್‌ವೊಂದರಲ್ಲಿ ಉಳಿಯಲು ಅವಕಾಶವಿದೆ.

ಈ ಊರಿನ ಮನೆ, ಅಂಗಡಿಗೆ ಇಲ್ಲ ಬೀಗ!

ರಷ್ಯನ್ ಕಾಲೋನಿ, ಕುಂಡಂಕುಳಂ

ಕುಂಡಂಕುಳಂ ನ್ಯೂಕ್ಲಿಯರ್ ಪವರ್ ಪ್ರಾಜೆಕ್ಟ್‌ನಲ್ಲಿ ಒಂದು ರಷ್ಯನ್ ಕಾಲೋನಿ ಇದೆ. ಇಲ್ಲಿ ಭಾರತೀಯರಿಗೆ ಪ್ರವೇಶ ನಿಷಿದ್ಧ. ಇಲ್ಲಿನ ಪವರ್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ರಷ್ಯನ್ಸ್ ತಮಗಾಗಿಯೇ ಮನೆ, ಹೊಟೇಲ್, ಕ್ಲಬ್ ಹೌಸ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. 

ಫಾರಿನರ್ ಓನ್ಲಿ ಬೀಚ್, ಪಾಂಡಿಚೇರಿ

ಗೋವಾದಲ್ಲಿ ಇದ್ದಂತೆ ಪಾಂಡಿಚೇರಿಯಲ್ಲೂ ಕೆಲವು ಪ್ರೈವೇಟ್ ರೆಸ್ಟೋರೆಂಟ್ ಮತ್ತು ಹೊಟೇಲ್‌ಗಳಿವೆ. ಅವು ಕೇವಲ ವಿದೇಶಿ ಪ್ರವಾಸಿಗರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.
 

click me!