ಮಿಲ್ಕಿ ಬ್ಯೂಟಿಗಾಗಿ ಹಾಲು, ಕೇಸರಿ ಪೇಸ್ಟ್!

By Web Desk  |  First Published Jul 4, 2019, 2:01 PM IST

ಹಾಲಿನಂತ ತ್ವಚೆ ಪಡೆಯಬೇಕು ಅನ್ನೋದು ನಿಮ್ಮ ಆಸೆಯಾಗಿದ್ದರೆ. ಹಾಲು ಮತ್ತು ಕೇಸರಿಯ ಈ ಸೀಕ್ರೆಟ್ ಟಿಪ್ಸ್ ತಿಳ್ಕೊಳಿ... 

 


ಸುಂದರವಾಗಿ ಕಾಣಲು ಏನೇನೋ ಟ್ರಿಕ್ಸ್ ಬಳಸೋರಿಗೆ ಇಲ್ಲಿವೆ ಸಿಂಪಲ್ ಟಿಪ್ಸ್. ಇದನ್ನ ನೀವೂ ಟ್ರೈ ಮಾಡಿದ್ರೆ ತ್ವಚೆ ಸುಂದರವಾಗೋದು ಗ್ಯಾರಂಟಿ. ಅದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ...

ಮುಖಕ್ಕೆ ಹಚ್ಚಿಕೊಳ್ಳುವ ಪೇಸ್ಟ್ ತಯಾರಿಸಲು ಹಾಲು, ಕೇಸರಿ ಬೇಕು. ನಂತರ ಅದನ್ನು ಮುಖ ಹಾಗೂ ದೇಹಕ್ಕೆ ಹಚ್ಚಿ. 15 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಗ್ಲಾಸ್ ರೀತಿ ಸ್ಕಿನ್ ಬೇಕು ಅಂದ್ರೆ ಇಲ್ಲಿದೆ ಟಿಪ್ಸ್....

ಎಫೆಕ್ಟ್ ಹೇಗಿರುತ್ತೆ?

Tap to resize

Latest Videos

- ಮುಖದ ಕಾಂತಿ ಹೆಚ್ಚುತ್ತದೆ. ಜೊತೆಗೆ ಯಂಗ್‌ ಲುಕ್‌ ಪಡೆಯಲು ಸಹಾಯವಾಗುತ್ತದೆ.

- ಒಣ ಚರ್ಮ ಇರುವವರಿಗೆ ಇದು ಮಾಯಿಶ್ಚರೈಸರ್‌ ರೀತಿ ಸಹಾಯ ಮಾಡುತ್ತದೆ. ಹಾಗೂ ಚರ್ಮವನ್ನು ಸಾಫ್ಟ್ ಆಗಿಸುತ್ತದೆ. 

- ಸೂರ್ಯನ ಸೂಕ್ಷ್ಮ ಕಿರಣಗಳಿಂದ ಉಂಟಾದ ಸನ್‌ ಟ್ಯಾನ್‌ ಹಾಗೂ ಸನ್‌ ಬರ್ನ್‌ ಸಮಸ್ಯೆಗಿದು. ಕಪ್ಪಾದ ಚರ್ಮದ ಮೇಲೆ ಪರಿಣಾಮ ಬೀರಿ ಕಾಂತಿಯುಕ್ತವನ್ನಾಗಿಸುತ್ತದೆ..

ಸ್ಟಾರ್ ನಟಿಯರ ಸೌಂದರ್ಯದ ಗುಟ್ಟು ಹಕ್ಕಿ ಪಿಕ್ಕೆ...

- ಮುಖ ಹಾಗೂ ಶರೀರದ ಮೇಲಿನ ಕಲೆ ತೊಲಗಿಸಿ ಚರ್ಮ ಹೊಳೆಯುವಂತೆ ಮಾಡುತ್ತದೆ.

- ಈ ಪೇಸ್‌ಪ್ಯಾಕಿನಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣವಿದೆ. ಮೊಡವೆಗಳು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಇದು ತೊಡೆದುಹಾಕುತ್ತದೆ. ಇದರಿಂದ ಮೊಡವೆಗಳು ಮೂಡುವುದಿಲ್ಲ.

click me!