ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಮಂಗಳವಾರ, ಒಂದು ರಜೆ ಹಾಕಿದ್ರೆ ಲಾಂಗ್ ವೀಕೆಂಡ್!

By Suvarna NewsFirst Published Aug 11, 2023, 12:22 PM IST
Highlights

ನಾಲ್ಕು ದಿನ ಒಟ್ಟಿಗೆ ರಜೆ ಪಡೆದವನೇ ಪುಣ್ಯವಂತ ಗುರು.. ನಮಗೆ ಆ ಪುಣ್ಯ ಇಲ್ಲ. ಬರೋದ್ ಬಂತು ಸೋಮವಾರ ಆಗಸ್ಟ್ 15 ಬಂದಿದ್ರೆ ಏನಾಗ್ತಿತ್ತು? ಅಟ್ಲೀಸ್ಟ್ 3 ದಿನ ಆದ್ರೂ ಒಟ್ಟಿಗೆ ರಜೆ ಸಿಗ್ತಿತ್ತಲ್ವಾ? ಟ್ವಿಟರ್ ನಲ್ಲಿ ರಜೆಗೆ ನಡೆಯುತ್ತಿದೆ ಸಿಕ್ ಪ್ಲಾನ್ಸ್.  
 

ಕೆಲಸದ ಮಧ್ಯೆ ರಜೆ ಸಿಕ್ಕಿದ್ರೆ ಅದರ ಖುಷಿಯೇ ಬೇರೆ. ರಜೆಯಲ್ಲಿ ಪ್ರವಾಸಕ್ಕೆ ಹೋಗಿ ಇಲ್ಲ ಮನೆಯಲ್ಲೇ ಇರಿ, ಕಚೇರಿಗೆ ಹೋಗೋದಿಲ್ಲ ಅಂದ್ರೆ ಅದೊಂದು ರೀತಿ ನೆಮ್ಮದಿ. ವಾರಪೂರ್ತಿ ದುಡಿದ ಜನರಿಗೆ ವಾರಾಂತ್ಯದಲ್ಲಿ ಎರಡು ದಿನ ರಜೆ ಸಿಕ್ಕಿದ್ರೂ ನೆಮ್ಮದಿ ಅನ್ನಿಸೋದಿಲ್ಲ. ಅದೇ ವಾರದ ಮಧ್ಯೆ ಒಂದು ರಜೆ ಬಂದ್ರೂ ಎಲ್ಲಿಲ್ಲದ ಖುಷಿ. ಆ ವಾರ ಕಳೆದಿದ್ದೇ ತಿಳಿಲಿಲ್ಲ ಎನ್ನುತ್ತಾರೆ. ಹೀಗಿರುವಾಗ ಒಟ್ಟಿಗೆ ನಾಲ್ಕು – ಐದು ದಿನ ರಜೆ ಸಿಕ್ಕಿದ್ರೆ ಅದ್ರ ಆನಂದವೇ ಬೇರೆ. 

ಬಹುತೇಕ ಜನರು ಶುಕ್ರವಾರ (Friday) ಕಳೆಯೋದನ್ನು ಕಾಯುತ್ತಿದ್ದಾರೆ. ಯಾಕೆಂದ್ರೆ ಇವತ್ತೊಂದು ದಿನ ಕಳೆದ್ರೆ ವೀಕೆಂಡ್ (Weekend). ಶನಿವಾರ, ಭಾನುವಾರ ರಜೆ. ಮಧ್ಯ ಸೋಮವಾರ ಒಂದು ವಿಲನ್ ಆಗಿದ್ದು ಬಿಟ್ಟರೆ ಮತ್ತೆ ಮಂಗಳವಾರ ರಜೆ. ಇನ್ನು ಕೆಲವರಿಗೆ ಬುಧವಾರವೂ ರಜೆ ಇದೆ.  ಸೋಮವಾರವನ್ನೂ ಹಿಡಿದ್ರೆ ಸಂಪೂರ್ಣ ನಾಲ್ಕು ದಿನ / ಐದು ದಿನ ಜನರು ರಜೆ ಎಂಜಾಯ್ ಮಾಡ್ಬಹುದು. ಈಗಾಗಲೇ ಅನೇಕರು ಲಾಂಗ್ ರಜೆಯ ಮಜಾ ಸವಿಯಲು ಸಿದ್ಧವಾಗಿದ್ದಾರೆ. ಇಂದಿನಿಂದಲೇ ಅನೇಕರು ರಜೆ ಹಾಕಿ ಪ್ರವಾಸಕ್ಕೆ ತೆರಳಿದ್ದಾರೆ. ಮತ್ತೆ ಕೆಲವರು ನಾಳೆ ಪ್ರವಾಸಕ್ಕೆ ಹೋಗುವ ಪ್ಲಾನ್ ನಲ್ಲಿದ್ದಾರೆ.  
ಆಗಸ್ಟ್ ಆರಂಭದ ಮೊದಲೇ ಸೋಮವಾರ ರಜೆಗೆ ಅಪ್ಲೈ ಮಾಡಿದವರನ್ನು ಹಿಡಿಯೋಕೆ ಸಾಧ್ಯವಿಲ್ಲ.  ಆದ್ರೆ ಸೋಮವಾರ ರಜೆ ಇಲ್ಲದವರು ಏನ್ ಮಾಡ್ಬೇಕು? ಮಂಗಳವಾರ ರಜೆ ಇರೋ ಕಾರಣ ಸೋಮವಾರ ಕಚೇರಿ, ಶಾಲೆಗೆ ಹೋಗೋಕೆ ಬೇಸರ. ಹಾಗಿದ್ದಾಗ ಒಂದೊಂದು ಕಥೆ ಕಟ್ಟಿ ರಜೆ ತೆಗೆದುಕೊಳ್ಳುವ ಯೋಜನೆ ನಡೆಯುತ್ತಿದೆ. ಕೆಲವರಿಗೆ ಈಗ್ಲೇ ಜ್ವರ ಬಂದ್ರೆ ಮತ್ತೆ ಕೆಲವರಿಗೆ ಸೋಮವಾರ ಜ್ವರ ಬರುವ ಸೂಚನೆ ಸಿಕ್ಕಿದೆ.  ಸಾಮಾಜಿಕ ಜಾಲತಾಣಗಳಲ್ಲೂ ನೀವಿದರ ಪರಿಣಾಮ ನೋಡ್ಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಮೀಮ್‌ಗಳು ಹರಿದಾಡುತ್ತಿವೆ. ಅನೇಕರು ಸೋಮವಾರದ ಬಗ್ಗೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಜೆ ಸಿಕ್ಕವರು ಆನಂದ ಹಂಚಿಕೊಂಡ್ರೆ ರಜೆ ಸಿಗದೆ ಇದ್ದವರು ಹೊಟ್ಟೆಕಿಚ್ಚು ಪಡ್ತಿದ್ದಾರೆ. 

Latest Videos

ಅಬ್ಬಬ್ಬಾ..ಪ್ರಿಯಕರನ ಮದ್ವೆಯಾಗೋಕೆ 2484 ಕೋಟಿ ಮೌಲ್ಯದ ಆಸ್ತಿ ಬಿಟ್ಟು ಬಂದ ಗೆಳತಿ!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ ಇಂಥ ಮೀಮ್ : 

ಸೋಮವಾರ ಅನಾರೋಗ್ಯ ಕಾಡುತ್ತೆ : ಸೋಮವಾರ ಅನೇಕರಿಗೆ ಜ್ವರ, ನೆಗಡಿ, ತಲೆ ನೋವು ಬರೋದು ಗ್ಯಾರಂಟಿ. ಬಹುತೇಕ ಕೆಲಸಗಾರರು ಅನಾರೋಗ್ಯದ ನಾಟಕವಾಡಿ ರಜೆ ಪಡೆಯುತ್ತಾರೆ. ರಾಜ್ ಕರ್ ಎಂಬ ವ್ಯಕ್ತಿ ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಅವರು ರಿಲ್ಯಾಕ್ಸ್ ಬಾಲ್ ಮೇಲೆ ಮಲಗಿದ್ದಲ್ಲದೆ, ನಾನು 14ನೇ ತಾರೀಕು, ಸಿಕ್ ಲಿವ್ ಪಡೆಯುತ್ತೇನೆ ಎಂದು ಬರೆದಿದ್ದಾರೆ. 
ಸಾಗರ್ ಎಂಬುವವರು, ಅಂಗಡಿ ಫೋಟೋ ಒಂದನ್ನು ಅಪ್ಲೋಡ್ ಮಾಡಿ, ಅಣ್ಣ ಒಂದು ಗುಡ್ ಡೇ ಬಿಸ್ಕತ್ ನೀಡಿ, ಆಗಸ್ಟ್ 14ರಂದು ರಜೆ ಅಪ್ರೂ ಆಗಿದೆ ಎಂದು ಶೀರ್ಷಿಕೆ ಹಾಕಿದ್ದಾರೆ. 

ಬದುಕಿಗೆ ಸ್ಫೂರ್ತಿ ನೀಡುವ ಸುಧಾಮೂರ್ತಿ ಜೀವನ ಪಾಠಗಳು

ಮನುಷ್ಯನ ದೇಹ ಹಾಗೂ ನಾಯಿ ಮುಖದ ಫೋಟೋ ಅಪ್ಲೋಡ್ ಮಾಡಿರುವ ವ್ಯಕ್ತಿಯೊಬ್ಬರು ಆಗಸ್ಟ್ 14ರಂದು ರಜೆ ನೀಡಲು ಬಾಸ್ ಒಪ್ಪಿಗೆ ನೀಡಿಲ್ಲ ಎಂಬ ಶೀರ್ಷಿಕೆ ಹಾಕಿದ್ದಾರೆ. 
ಆಗಸ್ಟ್ 14ರಂದು ನ್ಯಾಷನಲ್ ಹಾಲಿಡೆ ಅನೌನ್ಸ್ ಮಾಡಿ, ಯಾಕೆಂದ್ರೆ ಎಲ್ಲರು ರಜೆ ತೆಗೆದುಕೊಳ್ತಿದ್ದಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ರಜೆ ಸಿಗದ ಅನೇಕರು ನಾಲ್ಕು ದಿನ ಒಟ್ಟಿಗೆ ರಜೆ ಅನುಭವಿಸುವ ಸುಖ ಎಲ್ಲರಿಗೂ ಸಿಗೋದಿಲ್ಲವೆಂದು ದುಃಖ ತೋಡಿಕೊಂಡಿದ್ದಾರೆ. ರಜೆ ಕೊಡದ ಬಾಸ್ ಮೇಲೆ ಕೆಂಡ ಕಾರ್ತಿದ್ದಾರೆ. ಎಲ್ಲರೂ ರಜೆ ಮೇಲೆ ಹೋದ್ರೆ ನಾವೇನು ಮಾಡೋದು ಅಂತಾ ಬಾಸ್ ಗೊಣಗ್ತಿದ್ದಾರೆ. ಅಷ್ಟಕ್ಕೂ ನಿಮಗೆ ರಜೆ ಸಿಕ್ಕಿದ್ಯಾ? 
 

click me!