How To Find Snakes: ನಿಮ್ಮ ಮನೆ ಬಳಿ ಹಾವು ಓಡಾಡುತ್ತಿದೆ ಅಂತ ಗುರುತಿಸೋದು ಹೇಗೆ? ಇಲ್ಲಿದೆ ನೋಡಿ 6 ಮುನ್ಸೂಚನೆಗಳು!

Published : Aug 08, 2026, 05:40 PM IST
Snake Near Home

ಸಾರಾಂಶ

ನಿಮ್ಮ ಮನೆಯ ಬಳಿ ಹಾವುಗಳು ಓಡಾಡುತ್ತಿದ್ದರೆ ಈ ಲಕ್ಷಣಗಳು ಕಂಡು ಬರುತ್ತದೆ. ಈ ಆರು ಲಕ್ಷಣಗಳಲ್ಲಿ ಒಂದು ಸಿಗ್ನಲ್ ನಿಮ್ಮ ಗಮನಕ್ಕೆ ಬಂದರೂ ನೀವು ಎಚ್ಚರಿಕೆಯಿಂದ ಇರೋದು ಉತ್ತಮ ಅಂತ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ತೀವ್ರವಾದ ವಾತಾವರಣದಿಂದ ತಪ್ಪಿಸಿಕೊಡು ಸುರಕ್ಷಿತವಾಗಿರಲು ಹಾವುಗಳು ಮನುಷ್ಯರು ವಾಸಿಸುವ ಪ್ರದೇಶಗಳತ್ತಾ ಮುಖ ಮಾಡುತ್ತವೆ. ಹಾವುಗಳಿಗೆ ತಣ್ಣನೆಯ ಹಾಗೂ ಬೆಚ್ಚಗಿನ, ಕತ್ತಲಿನ ಹಾಗೂ ಪ್ರಶಾಂತ ವಾತಾವರಣಗಳು ಸುರಕ್ಷಿತ ಎನಿಸುತ್ತವೆ. ಈ ಕಾರಣದಿಂದಲೇ ಮನೆಯ ಬೆಸ್ಮೆಂಟ್, ಗ್ಯಾರೇಜ್, ಗಾರ್ಡನ್ ಅಥವಾ ಸ್ಟೋರ್ ರೂಮ್ ಗಳಲ್ಲಿ ಬಂದು ಸೇರಿಕೊಳ್ಳುತ್ತದೆ. ಆದರೆ ನಿಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾವುಗಳ ಸಂಚಾರ ಇದೆಯಾ ಅಂತ ತಿಳಿದುಕೊಳ್ಳುವುದು ಬಹಳಮುಖ್ಯವಾಗುತ್ತದೆ. ಕೆಲವು ಸ್ಪಷ್ಟ ಸೂಚನೆಗಳ ಮೂಲಕ ನೀವು ಹಾವುಗಳ ಇದೆಯಾ ಅಂತ ಕಂಡುಕೊಳ್ಳಬಹುದಾಗಿದೆ.

ಹಾವಿನ ಪೊರೆ:

ಹಾವುಗಳ ವಯಸ್ಸು ಹೆಚ್ಚಾಗುವ ಸಂದರ್ಭದಲ್ಲಿ ಅವು ಪೊರೆಯನ್ನು ಕಳಚುತ್ತವೆ. ನಿಮ್ಮ ಮನೆಯ ಸಮೀಪ ಇಂತಹ ಪೊರೆ ಕಂಡು ಬಂದರೆ ಹಾವು ಆ ಪ್ರದೇಶದಲ್ಲಿ ಸಂಚಾರ ಮಾಡುತ್ತಿದೆ ಎಂದು ತಿಳಿದುಕೊಳ್ಳಬಹುದು. ಹಾವಿನ ಪೊರೆ ಬಹುತೇಕ ಸಂದರ್ಭದಲ್ಲಿ ತೆಳ್ಳಗಿನ ಹಾಳೆಯಂತೆ ಇರುತ್ತದೆ. ಸಾಮಾನ್ಯವಾಗಿ ಹಾವುಗಳು ಪೊರೆ ಬಿಟ್ಟ ಪ್ರದೇಶಗಳ ಸುತ್ತಮುತ್ತ ವಾಸಿಸುತ್ತವೆ.

ಸಾಕು ಪ್ರಾಣಿಗಳ ವರ್ತನೆ:

ನಾಯಿಗಳು, ಬೆಕ್ಕುಗಳಿಗೆ ಸೂಕ್ಷ್ಮಗ್ರಹಣ ಸಾಮರ್ಥ್ಯ ಹೆಚ್ಚು. ಬೀದಿನಾಯಿ ಆಗಲಿ ಮನೆಯ ಸಾಕುನಾಯಿ ಆಗಲಿ, ಕತ್ತಲು ಪ್ರದೇಶ, ಬೀಲಗಳು, ಕಲ್ಲಿನ ನಡುವಿನ ಖಾಲಿ ಸ್ಥಳಗಳ ಕಡೆ ನೋಡುತ್ತಾ ಅವರು ಶಬ್ದ ಮಾಡಿದರೆ ನೀವು ಕಂಡಿತ ಅದನ್ನು ಗಮನಿಸಬೇಕು. ಏಕೆಂದರೆ ಅವು ನಮಗಿಂತ ವೇಗವಾಗಿ ಹಾವುಗಳ ಚಲನವಲನವನ್ನು ಗುರುತಿಸುತ್ತವೆ.

ಇಲಿ, ಕಪ್ಪೆಗಳು ನಾಪತ್ತೆ:

ಮನೆಯ ಬಳಿ ಅಥವಾ ಗಾರ್ಡನ್ ಪ್ರದೇಶಗಳಲ್ಲಿ ಇಲಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಏಕಾಏಕಿ ಇವು ನಾಪತ್ತೆ ಆಗಿರೋದು ನಿಮ್ಮ ಗಮನಕ್ಕೆ ಬಂದರೆ ಮನೆಯ ಬಳಿ ಹಾವು ಓಡಾಡುತ್ತಿದೆ ಅಂತ ಆರ್ಥ. ಏಕೆಂದರೆ ಸುಲಭವಾಗಿ ಆಹಾರ ಹುಡುಕಿಕೊಂಡು ಹಾವುಗಳು ಇಲಿ ಮತ್ತು ಕಪ್ಪೆಗಳನ್ನು ಸೇವಿಸುತ್ತದೆ.

S ರೀತಿಯ ಚಲನೆಯ ಗುರುತು:

ದೂಳು ಅಥವಾ ಮರಳು, ಮಣ್ಣಿನ ಮೇಲೆ ಎಸ್ ಆಕಾರದಲ್ಲಿ ಗುರುತುಗಳು ಕಂಡು ಬಂದರೆ ಗಮನಿಸಬೇಕಾಗುತ್ತದೆ. ಏಕೆಂದರೆ ಇಲಿ ಸೇರಿದಂತೆ ಬೇರೆ ಯಾವುದೇ ಪ್ರಾಣಿ ಸಂಚಾರ ಮಾಡಿದರು ಈ ರೀತಿ ಗುರುತುಗಳು ಕಾಣಿಸಿಕೊಳ್ಳುವುದಿಲ್ಲ. ಅದರಲ್ಲೂ ಪೊದೆಗಳ ಪಕ್ಕ, ಕತ್ತಲ ಕೋಣೆಗಳ ಬಳಿ ಇಂತಹ ಗುರುತು ಬಂದರೆ ಎಚ್ಚರಿಕೆ ವಹಿಸಿ.

ಪಕ್ಷಿಗಳ ಶಬ್ದ, ರಾತ್ರಿ ವೇಳೆ ಸದ್ದು:

ಸಣ್ಣ ಜಾತಿಯ ಪಕ್ಷಿಗಳು ಹಾವುಗಳನ್ನು ನೋಡಿದ ಕೂಡಲೇ ತಮ್ಮ ರಕ್ಷಣೆಗಾಗಿ ಗುಂಪು ಕಟ್ಟಿಕೊಂಡು ಶಬ್ದ ಮಾಡಲು ಪ್ರಾರಂಭ ಮಾಡುತ್ತವೆ. ಇಂತಹ ಶಬ್ದಗಳು ನಿಮ್ಮ ಮನೆಯ ಬಳಿ ಕೇಳಿದರೆ ಆ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿ. ರಾತ್ರಿ ವೇಳೆ ಗೋಡೆ, ಫ್ಲೋರ್ ಬೋರ್ಡ್ ಗಳ ಬಳಿ ಶಬ್ದ ಕೇಳಿದರೆ ಹಾವಿನ ಸಂಚಾರ ಇದೆಯೇ ಅಂತ ಖಚಿತಪಡಿಸಿಕೊಳ್ಳಬೇಕು.

ಹಾವು ಮನೆಗೆ ಬಂದರೆ ಏನು ಮಾಡಬೇಕು?

ನಿಮ್ಮ ಮನೆಯ ಬಳಿ ಹಾವು ಇರುವ ಸಂದೇಹ ಎದುರಾದರೆ, ಕೂಡಲೇ ಅದನ್ನು ರಕ್ಷಣೆ ಮಾಡಿ ಸೂಕ್ತ ಸ್ಥಳದಲ್ಲಿ ಬಿಡುಗಡೆಗೆ ಮಾಡುವ ಕ್ರಮಕೈಗೊಳ್ಳಬೇಕು. ಹಾವುಗಳ ಸೆರೆ ವಿಶೇಷ ಸ್ನೇಕ್ ಟ್ರಾಪ್ಸ್ ಬಳಕೆ ಮಾಡಬಹುದು. ಹಾವು ಈ ಟ್ರಾಪ್ ಗಳಿಗೆ ಸಿಕ್ಕಿಬಿದ್ದರೆ ಕೂಡಲೇ ಅವುಗಳನ್ನು ಕಾಡು ಪ್ರದೇಶಗಳಲ್ಲಿ ಬಿಡುವ ಕೆಲಸ ಮಾಡಬೇಕು.

ಹಾವುಗಳು ಕಂಡರೆ ಬಹುತೇಕ ಮಂದಿಗೆ ಭಯ ಇರುವುದಿರಂದ ಅವುಗಳ ರಕ್ಷಣೆಗೆ ರಕ್ಷಣ್ಯ ಇಲಾಖೆ ಸಿಬ್ಬಂದಿ ಅಥವಾ ಹಾವುಗಳ ರಕ್ಷಣೆಯನ್ನು ಮಾಡುವ ಸ್ವಯಃ ಸೇವಕರ ನೆರವು ಪಡೆದುಕೊಳ್ಳಬಹುದು. ಮನೆಯ ಬಳಿ ಯಾವುದೇ ರೀತಿ ಬೀಲ ಹಾಗೂ ಸಣ್ಣ ಕತ್ತಲಿನ ಪ್ರದೇಶಗಳು ಇರದಂತೆ ಎಚ್ಚರಿಕೆ ವಹಿಸಬೇಕು. ಮನೆಯ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಮನೆಯ ಬಳಿ ಕಪ್ಪೆ ಅಥವಾ ಇಲಿ ಇದರಂತೆ ನೋಡಿಕೊಂಡರೆ, ಅವುಗಳನ್ನು ಹಿಡಿದು ತಿನ್ನಲು ಹಾವುಗಳು ಬರುವುದನ್ನು ತಪ್ಪಿಸಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಳೆಗಾಲದಲ್ಲಿ ಕಿಟಕಿ ಬಳಿ ಸ್ಪೂನ್ ಇಡೋದ್ರಿಂದ ಏನಾಗುತ್ತೇ? 90% ಜನರಿಗೆ ಈ ಸೀಕ್ರೆಟ್ ಟ್ರಿಕ್ ಗೊತ್ತೇ ಇಲ್ಲ
Gold Necklace: 10 ಗ್ರಾಂ ಚಿನ್ನದಲ್ಲಿ ಸಿಗುವ ಟ್ರೆಂಡಿ ನೆಕ್ಲೇಸ್ ಡಿಸೈನ್ ನೋಡಿ