ವಿಪರೀತ ನೋವು ತರುವ ಸ್ನಾಯು ಗಂಟಿಗೇನು ಕಾರಣ?

Suvarna News   | Asianet News
Published : Oct 03, 2020, 06:39 PM IST
ವಿಪರೀತ ನೋವು ತರುವ ಸ್ನಾಯು ಗಂಟಿಗೇನು ಕಾರಣ?

ಸಾರಾಂಶ

ಸಣ್ಣದಾಗಿ ಹಂಪ್ ರೀತಿಯಲ್ಲಿದ್ದು, ಮುಟ್ಟಿದರೆ ನೋವಾಗುವ ಗಂಟುಗಳಿಗೆ ಸ್ನಾಯು ಗಂಟೆನ್ನುತ್ತಾರೆ. ಮೈಫೋಸ್ಕಿಯಲ್ ಟ್ರಿಗ್ಗರ್ಪಾಯಿಂಟ್ಸ್ (myofascial trigger points)ಎನ್ನುವುದು ಇದರ ವೈದ್ಯಕೀಯ ಪರಿಭಾಷೆ. ಇವುಗಳ ಸೂಚನೆ ಹಾಗೂ ಗುಣ ಮಾಡಿಕೊಳ್ಳುವ ಬಗ್ಗೆ ಇಲ್ಲಿದೆ ಮಾಹಿತಿ? 

ಮಾಂಸಖಂಡಗಳಲ್ಲಿ ಸ್ನಾಯುಗಂಟು ಕಾಣಿಸಿಕೊಳ್ಳುವುದು ಹೆಚ್ಚುತ್ತಿದೆ. ಚರ್ಮ ಬಿಗಿದುಕೊಂಡರೆ, ಗಂಟಿರುವಂತೆಯೇ ಭಾಸವಾಗುತ್ತದೆ. ಇದರ ಮೇಲೆ ಹೆಚ್ಚು ಫೋರ್ಸ್ ಹಾಕಿದರೆ, ಅಕ್ಕ-ಪಕ್ಕದ ಚರ್ಮಕ್ಕೂ ನೋವು ಪಾಸ್ ಆಗುತ್ತದೆ. 

ಎಲ್ಲಿ ಕಾಣಿಸುತ್ತೆ ಈ ಸಮಸ್ಯೆ?

  • ಕೈ ಗಂಟು
  • ಸೊಂಟ
  • ಕುತ್ತಿಗೆ
  • ಕಾಲು
  • ಬುಜ
  •  

ಸೂಚನೆಗಳು:

  1. ದವಡೆ ನೋವು
  2. ಬೆನ್ನು ನೋವು
  3. ಕಿವಿ ನೋವು
  4. ತಲೆ ನೋವು
  5. ನೋವು ಬರಲು ಕಾರಣ?
  6. ಒತ್ತಡ ಮತ್ತು ಆತಂಕ
  7. ಹೆಚ್ಚಾಗಿ ಶ್ರಮ ಬಳಸಿ ವಸ್ತುಗಳನ್ನು ಎತ್ತುವುದು
  8.  ಸೂಕ್ತ ಭಂಗಿಯಲ್ಲಿ ಕೂರದಿರುವುದು 
  9. ಮೈ ಬಿಗಿಯಾಗಿಟ್ಟಿಕೊಂಡೇ ಇರುವುದು. 
  10. ಹೆಚ್ಚಾಗಿ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವರಲ್ಲಿ ಇಂಥ ಸಮಸ್ಯೆಗಳು ಹೆಚ್ಚು. 


ಪರಿಹಾರವೇನು?

* ನೋವಿನ ಪೂರ್ಣ ಇತಿಹಾಸ ಅರಿಯಬೇಕು.

* ಯಾವಾಗ, ಎಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.

* ಕೆಲಸ ಮಾಡೋ ಸ್ಥಳ ಹಾಗೂ ಇತರೆ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಬೇಕು.

* ಮಲಗೋ ಭಂಗಿಯನ್ನು ಸುಧಾರಿಸಿಕೊಳ್ಳಬೇಕು.
 

ನಿಂತು ಕೆಲಸ ಮಾಡೋರು ಅನುಭವಿಸುವ ನೋವಿದು

* ರಕ್ತ ಪರೀಕ್ಷಿಸಿಕೊಂಡು, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಪೂರೈಕೆಯಾಗುತ್ತಿದೆಯೋ, ಇಲ್ಲವೋ ಬಗ್ಗೆ ಗಮನಿಸಬೇಕು.

* ಆಗಾಗ ಅಗತ್ಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ.  

* ಯೋಗ, ವ್ಯಾಯಾಮವನ್ನು ಮಿಸ್ ಮಾಡಿಕೊಳ್ಳಬೇಡಿ. ಅಗತ್ಯ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ.

* ನಮ್ಮ ನೋವಿಗೆ ನಾವೇ ಚಿಕಿತ್ಸೆ ಕೊಡುವುದನ್ನು ಕಲಿತುಕೊಳ್ಳಬೇಕು. ಅಲ್ಲದೇ ನೋವು ಜಾಸ್ತಿಯಾದಾಗ ನಿಯಂತ್ರಿಸಿಕೊಳ್ಳಲು ನೆರವಾಗುವಂತೆ ಮನೆಯವರಿಗೂ ಹೇಳಿ ಕೊಟ್ಟಿರಬೇಕು. 

* ಸಾಧ್ಯವಾದಷ್ಟು ನಿಮ್ಮ ಆರೋಗ್ಯದ ಬಗ್ಗೆ ನೀವು ಕೇರ್ ತೆಗೆದುಕೊಳ್ಳುವುದು ಮುಖ್ಯ. 

ಮೈ ಕೈ ನೋವು ಹೋಗಲಾಡಿಸಲು ಸರಳ ಯೋಗ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!