ಮಾನ್ಸೂನ್ ಶುರುವಾಗ್ತಿದೆ , ಆರೋಗ್ಯ ಹೇಗ್ ನೋಡ್ಕೊಬೇಕು?

By Web Desk  |  First Published Jun 11, 2019, 12:41 PM IST

ಮಳೆಗಾಲ ಎಂದರೆ ಒಂಥರಾ ಖುಷಿ, ಜೊತೆಗೆ ಅರೋಗ್ಯ ಸಮಸ್ಯೆಗಳೂ ಸಾಲು ಸಾಲಾಗಿ ಬರುವ ಭಯವೂ ಇರುತ್ತೆ. ಮಳೆಗಾಲದಲ್ಲಿ ಇಮ್ಯೂನ್ ಸಿಸ್ಟಮ್ ಸ್ಟ್ರಾಂಗ್ ಆಗಿರಲು ನೀವು ತಪ್ಪದೇ ಈ ಆಹಾರ ಸೇವಿಸಿ.... 


ಮಳೆಗಾಲದಲ್ಲಿ ವೈರಲ್ ಸಮಸ್ಯೆಗಳು ಸಹಜವಾಗಿಯೇ ಕಾಣಿಸಿಕೊಳ್ಳುತ್ತವೆ. ನೆಗಡಿ, ಕೆಮ್ಮು, ಜ್ವರ... ಇತ್ಯಾದಿ. ವೈರಲ್‌ ಸಮಸ್ಯೆಯಿಂದ ದೂರ ಇರಬೇಕು ಎಂದಾದರೆ ನೀವು ಈ ಸೂಪರ್‌ ಫುಡ್‌ ಸೇವಿಸಬೇಕು. ಆ ಏಳು  ಆಹಾರಗಳು ವೈರಲ್ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. 

ಬೆಳ್ಳುಳ್ಳಿ 

Tap to resize

Latest Videos

ಇದರಲ್ಲಿ ಆ್ಯಂಟಿಮೈಕ್ರೋಬಿಯಲ್‌ ಮತ್ತು ಆ್ಯಂಟಿಬ್ಯಾಕ್ಟೀರಿಯಾ ಅಂಶಗಳಿವೆ. ಇದರಿಂದ ನಿಮ್ಮ ಇಮ್ಯೂನಿಟಿ ಬೂಸ್ಟ್‌ ಆಗುತ್ತದೆ. ಅಲ್ಲದೇ ದೇಹ ಆ್ಯಕ್ಟಿವ್ ಆಗಿರಲು ಸಹಕರಿಸುತ್ತದೆ. ಆದುದರಿಂದ ಪ್ರತಿದಿನ ಬೆಳ್ಳುಳ್ಳಿ ಸೇವಿಸಲು ಮರೆಯಬೇಡಿ. 

ಬೊಜ್ಜಿರೋ ಹೊಟ್ಟೆ ಯಾರಿಗೇ ಬೇಕೇಳಿ? ಹೀಗ್ ಹೋಗಲಾಡಿಸಿಕೊಳ್ಳಿ...

ಸೂಪ್ 

ಮಳೆಗಾಲದಲ್ಲಿ ಬಿಸಿ ಬಿಸಿ ಆಹಾರಗಳು ದೇಹಕ್ಕೆ ಹಿತ. ಈ ಸಮಯದಲ್ಲಿ ನೀರಿನ ಅಂಶವಿರೋ ಆಹಾರವನ್ನು ಹೆಚ್ಚು ಸೇವಿಸಬೇಕು. ಮಾನ್ಸೂನ್‌‌ನಲ್ಲಿ ಸೇವಿಸಲು ಸೂಪ್ ಬೆಸ್ಟ್‌. ಕರಿಮೆಣಸಿನ ಪುಡಿ, ಬೆಳ್ಳುಳ್ಳಿ, ಶುಂಠಿ ಹಾಕಿ ಮಾಡಿದ ಸೂಪಿನಿಂದ ಶೀತ, ಜ್ವರ ದೇಹದಲ್ಲಿ ನೋವು ಕಾಣಿಸುವುದು ಕಡಿಮೆಯಾಗುತ್ತದೆ.

ಹಾಗಲಕಾಯಿ ಬೇಡ ಅನ್ನಬೇಡಿ 

ಮಳೆಗಾಲದಲ್ಲಿ ಕೆಲವೊಂದು ಕಹಿ ಆಹಾರಗಳು ದೇಹಕ್ಕೆ ಹಿತ ನೀಡುತ್ತದೆ. ಹಾಗಲಕಾಯಿ ಅಥವಾ ಕಹಿಬೇವು, ಮೆಂತೆ ಬೀಜ, ತುಳಸಿ, ಅಲೋವೆರಾ, ಬ್ರೊಕೋಲಿ, ವೀಟ್‌ಗ್ರಾಸ್‌ ಸೇವಿಸಿದರೆ ಸೋಂಕಿನ ವಿರುದ್ಧ ಹೋರಾಡುತ್ತೆ. 

ಅರಿಶಿನ 

ಅರಿಶಿನ ಒಂದು ಪವರ್ ಫುಲ್ ಆಯುರ್ವೇದಿಕ್ ಔಷಧ. ಇದನ್ನು ಅನಾದಿ ಕಾಲದಿಂದಲೂ ವಿವಿಧ ರೂಪಗಳಲ್ಲಿ ಬಳಸಲಾಗುತ್ತದೆ. ಪ್ರತಿದಿನ ಹಾಲಿಗೆ ಒಂದು ಚಿಟಿಕೆ ಅರಿಶಿನ ಹಾಕಿ ಸೇವಿಸಿ, ಇದರಿಂದ ಗಂಟಲು ನೋವು, ಕೆಮ್ಮು, ಜ್ವರ ನಿವಾರಣೆಯಾಗುತ್ತದೆ.

ಸಿಟ್ರಿಕ್ ಹಣ್ಣುಗಳನ್ನು ಸೇವಿಸಿ 

ಹಣ್ಣುಗಳ ಸೇವನೆಯಿಂದ ದೇಹಕ್ಕೆ ಎನರ್ಜಿ ದೊರೆಯುತ್ತದೆ. ವಿಟಮಿನ್‌ ಸಿ ಹೆಚ್ಚಾಗಿರುವ ಕಿತ್ತಳೆ, ಮೂಸಂಬಿ, ಆ್ಯಪಲ್‌, ದಾಳಿಂಬೆ, ಅನಾನಸು, ನಿಂಬೆ ಹಾಗೂ ನೆಲ್ಲಿಕಾಯಿ ಹೆಚ್ಚು ಸೇವಿಸಿ. ಇವು ಇನ್‌ಫೆಕ್ಷನ್‌ ವಿರುದ್ಧವೂ ಹೋರಾಡಿ, ಶಕ್ತಿ ಹೆಚ್ಚಿಸುತ್ತದೆ. 

ಧಾನ್ಯಗಳು

ಊಟದ ಜೊತೆ ನೀರು, ಪಿಜ್ಜಾದೊಂದಿಗೆ ಕೋಕ್ ಕುಡಿದ್ರೆ ತಪ್ಪಾ?

ಓಟ್ಸ್‌, ಬ್ರೌನ್‌ ರೈಸ್‌ ಮತ್ತು ಗೋಧಿ ಮೊದಲಾದ ಧಾನ್ಯಗಳನ್ನು ಪ್ರತಿದಿನ ಸೇವಿಸಿ. ಇವು ಇನ್‌ಫೆಕ್ಷನ್‌ ವಿರುದ್ಧ ಹೋರಾಡುತ್ತದೆ. 

ಶುಂಠಿ

ಹೌದು, ಇದು ಮಳೆಗಾಲದಲ್ಲಿ ನಿಮ್ಮ ಸಹಾಯಕ್ಕೆ ಬರುವ ಒಂದು ಮುಖ್ಯವಾದ ಔಷಧ. ಕೆಮ್ಮು, ಗಂಟಲು ಕೆರೆತ, ಗಂಟಲು ನೋವು, ಹೀಗೆ ಎಲ್ಲಾ ಸಮಸ್ಯೆಗೂ ನಿವಾರಿಸಲು ಶುಂಠಿ ಸಹಕರಿಸುತ್ತದೆ.

click me!