
ಭಾರತೀಯ ಮಸಾಲೆ ಪದಾರ್ಥಗಳಿಗೆ ವಿಶಿಷ್ಠ ಪರಿಮಳ, ಸ್ವಾದವಿದೆ. ಬ್ರಿಟಿಷರನ್ನು ಭಾರತಕ್ಕೆ ಎಳೆತಂದ ಆಕರ್ಷಣೆಯೇ ಮಸಾಲೆ ಪದಾರ್ಥಗಳೆಂದರೆ ಅವುಗಳ ವೈಶಿಷ್ಠ್ಯತೆ ಎಷ್ಟೆಂದು ನಾವೇ ಯೋಚಿಸಬೇಕು. ಅವುಗಳ ಅರೋಮಾದಿಂದಾಗಿ ಭಾರತೀಯ ಅಡುಗೆಗಳು ಜಗತ್ತಿನಾದ್ಯಂತ ಜನರು ನಾಲಿಗೆ ಚಪ್ಪರಿಸುವಂತಾಗಿದೆ. ಈ ಮಸಾಲೆಗಳು ಒಂದೊಂದು ಆಹಾರಕ್ಕೆ ಒಂದೊಂದು ರುಚಿ ನೀಡುವ ಮ್ಯಾಜಿಕ್ ಲಾಜಿಕ್‌ಗೆ ಮೀರಿದ್ದು. ಕೆಲವೊಂದು ಮಸಾಲೆ ಸಂಸ್ಕೃತಿಯ ಸೀಕ್ರೆಟ್‌ಗಲು ಕುಟುಂಬದೊಳಗೆ ಮಾತ್ರ ಹರಿದಾಡುತ್ತಾ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುತ್ತಿರುವುದು ವಿಶೇಷ. ಭಾರತದ ಪ್ರತಿ ರಾಜ್ಯದ ಪ್ರತೀ ಮನೆಗಳ ಅಡುಗೆ ಕೋಣೆ ಹೊಕ್ಕರೆ ಅಲ್ಲಿ ಮಸಾಲೆ ಪದಾರ್ಥಗಳು ಆಕರ್ಷಕ ಡಬ್ಬಿಗಳಲ್ಲಿ ಕುಳಿತು ಕಣ್ಸೆಳೆಯದೆ ಇರಲಾರವು. ಸಾಮಾನ್ಯವಾಗಿ ಅವು ಸುಲಭವಾಗಿ ಕೆಡಲಾರವಾದರೂ, ಮಳೆಗಾಲ ಅವಕ್ಕೆ ಸ್ವಲ್ಪ ಸವಾಲೇ ಸರಿ. ಹೊರಗಡೆ ವಾತಾವರಣ ಮಂಕಾದಾಗ, ಮನೆಯೊಳಗೆ ಕುಳಿತ ಈ ಮಸಾಲೆಗಳು ಮುದ್ದೆಯಾಗತೊಡಗುತ್ತವೆ, ಅರೋಮಾ ಕಳೆದುಕೊಳ್ಳುತ್ತವೆ, ಕಳೆಗುಂದುತ್ತವೆ. ಹಾಗಾಗಿ, ಮಳೆಗಾಲದಲ್ಲಿ ಮಸಾಲೆ ಪದಾರ್ಥಗಳನ್ನು ಕಾಪಾಡಿಕೊಳ್ಳಲು ಹೆಚ್ಚಿನ ಕಾಳಜಿ ಅಗತ್ಯ. ಹಾಗಾದರೆ, ಇವುಗಳನ್ನು ಕಾಪಾಡಲು ಏನು ಮಾಡಬೇಕು?
1. ಏರ್‌ಟೈಟ್ ಕಂಟೇನರ್‌ನಲ್ಲಿಡಿ
ಮಳೆಗಾಲ ಆರಂಭವಾಗುವ ಮುನ್ನವೇ ಅಡುಗೆಕೋಣೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಎಲ್ಲ ಪದಾರ್ಥಗಳನ್ನು ಏರ್‌ಟೈಟ್ ಕಂಟೇನರ್‌ನಲ್ಲಿಡಿ. ಹಾಗೆ ಮಾಡುವುದರಿಂದ ಮಸಾಲೆಗಳಿಗೆ ಫಂಗಸ್ ತಗುಲದಂತೆ ನೋಡಿಕೊಳ್ಳಬಹುದಲ್ಲದೆ, ಅವು ಹೆಚ್ಚು ಕಾಲ ಫ್ರೆಶ್ ಆಗಿರುತ್ತವೆ.
2. ಬಿಸಿಯಿಂದ ದೂರವಿಡಿ
ಸಾಮಾನ್ಯವಾಗಿ ಮಸಾಲೆ ಪದಾರ್ಥಗಳನ್ನು ಗ್ಯಾಸ್ ಸ್ಟೌವ್ ಬಳಿಯೇ ಇಟ್ಟುಕೊಳ್ಳುವ ಅಭ್ಯಾಸ ಹಲವರಿಗೆ. ಇದರಿಂದ ಮಸಾಲೆ ಪದಾರ್ಥಗಳು ಬಿಸಿ ಹಾಗೂ ಆರ್ದ್ರತೆ ತಗುಲಿ ಅವು ಬೇಗ ಕೆಡುವಂತೆ ಮಾಡುತ್ತವೆ. ಮಸಾಲೆ ಪದಾರ್ಥಗಳಲ್ಲಿ ಇರುವ ಎಸ್ಸೆನ್ಶಿಯಲ್ ಆಯಿಲ್ ಹಾಗೂ ಆರೋಮಾ ಆರಿ ಹೋಗುತ್ತದೆ. ಯಾವಾಗಲೂ ಮಸಾಲೆಯನ್ನು ಸೂರ್ಯನ ಬಿಸಿಲು ಹಾಗೂ ಸ್ಟೌ ಬಿಸಿ ತಾಕದಂತೆ ಕಬೋರ್ಡ್‌ನೊಳಗೇ ಇಡಿ. ಇಲ್ಲದಿದ್ದಲ್ಲಿ ಕಪ್ಪು ಬಣ್ಣದ ಜಾರ್‌ನಲ್ಲಿ ಇಟ್ಟರೆ ಬೆಳಕು ಅದರೊಳಗೆ ಸುಲಭವಾಗಿ ಹೋಗುವುದಿಲ್ಲ.
3. ಫ್ರಿಡ್ಜ್‌ನಲ್ಲಿಡಬೇಡಿ
ಫ್ರಿಡ್ಜ್ ಮಸಾಲೆಯ ನೈಸರ್ಗಿಕ ಅರೋಮಾ ಹಾಗೂ ಫ್ಲೇವರನ್ನು ಬದಲಾಯಿಸುತ್ತದೆ. ಫ್ರಿಡ್ಜ್‌ನಲ್ಲಿಟ್ಟಾಗ ಜಾರ್ ಅಥವಾ ಪ್ಯಾಕೇಜಿಂಗ್‌ನ ಬುಡದಲ್ಲಿ ಮಸಾಲೆ ಹೋಗಿ ಕುಳಿತುಕೊಳ್ಳುವುದನ್ನು ನೀವು ಗುರುತಿಸಿರಬಹುದು. ಇದು ಫ್ರಿಡ್ಜ್‌ನಲ್ಲಿರುವ ಮಾಯಿಶ್ಚರೈಸರ್‌ನಿಂದಾಗಿರುತ್ತದೆ.
ಹೀಗೆಲ್ಲಾ ದಾಲ್ ಮಾಡಬಹುದು ನೋಡಿ...
4. ಮೇಲ್ಮುಖವಾಗಿಡಿ
ಸ್ಮಾರ್ಟ್ ಕಿಚನ್‌ನ ಬೇಸಿಕ್ ನಿಯಮಗಳೆಂದರೆ ಎಲ್ಲವನ್ನೂ ಮೇಲ್ಮುಖವಾಗಿಡುವುದು. ನೋಡಲೂ ಚೆನ್ನಾಗಿ ಕಾಣುತ್ತದೆ, ಬಳಸಲೂ ಸುಲಭ ಜೊತೆಗೆ ಇದು ವಸ್ತುಗಳ ಆಯಸ್ಸನ್ನು ಹೆಚ್ಚಿಸುತ್ತದೆ.
5. ಒಣಪ್ರದೇಶದಲ್ಲಿಡಿ
ಯಾವುದೇ ರೀತಿಯ ಮಾಯಿಶ್ಚರ್ ಮಸಾಲೆಯ ಬಣ್ಣ, ಪರಿಮಳ ಹಾಗೂ ಫ್ಲೇವರ್ ಕೆಡಿಸುತ್ತದೆ. ಹಾಗಾಗಿ, ಮಳೆಗಾಲದಲ್ಲಿ ನಿಮ್ಮ ಹರ್ಬ್ಸ್ ಹಾಗೂ ಸ್ಪೈಸ್‌ಗಳನ್ನು ಹೇಗೆ ಬಳಸುತ್ತೀರೆಂಬ ಬಗ್ಗೆ ಗಮನವಿರಲಿ. ನಿಮ್ಮ ಕೈಬೆರಳನ್ನು ಹಾಕುವುದು, ಒದ್ದೆ ಚಮಚ ಹಾಕುವುದು ಮುಂತಾದ ಕಾರಣಗಳಿಂದ ಫಂಗಸ್ ಆಗಬಹುದು. ಹಾಗಾಗಿ ಯಾವಾಗಲೂ ಮಸಾಲೆ ಪದಾರ್ಥಗಳನ್ನು ಒಣಗಿದ, ಕಪ್ಪಾದ, ನೀರಿಲ್ಲದ ಜಾಗದಲ್ಲಿಟ್ಟು, ಒಣಚಮಚ ಬಳಸಿ ಉಪಯೋಗಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.