ಬೂಸ್ಟ್ ಬಂದಿದೆ ಅಂತ ಹಾಳಾದ ಕೊಬ್ಬರಿ ಎಸೆಯುತ್ತಿದ್ದೀರಾ? ಈ ಟ್ರಿಕ್ ಗೊತ್ತಾದ್ರೆ ಇನ್ಮೇಲೆ ಎತ್ತಿಡೋದು ಗ್ಯಾರಂಟಿ

Published : Nov 07, 2026, 01:28 PM IST
Spoiled Coconut Hacks

ಸಾರಾಂಶ

Homemade Coconut Oil: ಬೂಸ್ಟ್ ಹಿಡಿದು, ವಾಸನೆ ಬರುತ್ತಿರುವ ಕೊಬ್ಬರಿಯಿಂದ ಇಷ್ಟೊಂದು ಅದ್ಭುತವಾದದ್ದನ್ನು ಮಾಡಬಹುದಾ ಅಂತ ಯಾರೂ ಊಹಿಸಿರಲು ಕೂಡ ಸಾಧ್ಯವಿಲ್ಲ! ಅಡುಗೆಗೂ ಬೇಡ ಅಂತ ನೀವು ಕಸಕ್ಕೆ ಎಸೆಯುತ್ತಿದ್ದ ಆ ಕೊಬ್ಬರಿಯ ಅಸಲಿ ಮೌಲ್ಯ ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ. ಅಷ್ಟಕ್ಕೂ ಹಾಳಾದ ಕೊಬ್ಬರಿಯಿಂದ ಏನ್ ಮಾಡಬಹುದು? ಮುಂದೆ ಓದಿ...

ಸಾಮಾನ್ಯವಾಗಿ ತೆಂಗಿನಕಾಯಿ ಒಡೆದಾಗ ಅದು ಸ್ವಲ್ಪ ಹಾಳಾಗಿದ್ದರೆ ಅಥವಾ ಬೂಸ್ಟ್ ಹಿಡಿದಿದ್ದರೆ ನಾವದನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ಇನ್ನು ಮುಂದೆ ಆ ತಪ್ಪು ಮಾಡಬೇಡಿ. ಕೇವಲ ಒಂದು ಕುಕ್ಕರ್, ಸ್ವಲ್ಪ ಲವಂಗ ಮತ್ತು ಮೆಂತ್ಯ ಬಳಸಿ, ಹಾಳಾದ ಕೊಬ್ಬರಿಯಿಂದ ಒಂದು ಚೂರು ದುರ್ವಾಸನೆ ಇಲ್ಲದ ಅಪ್ಪಟ ಶುದ್ಧ ಕೊಬ್ಬರಿ ಎಣ್ಣೆಯನ್ನು ಮನೆಯಲ್ಲೇ ತಯಾರಿಸಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್.

ಬೇಕಾಗುವ ಸಾಮಗ್ರಿಗಳು

ಹಾಳಾದ ಒಣಕೊಬ್ಬರಿ / ತೆಂಗಿನಕಾಯಿ
ನೀರು – ಅಗತ್ಯಕ್ಕೆ ತಕ್ಕಷ್ಟು
ಲವಂಗ – 4 ರಿಂದ 5 (ಕೆಟ್ಟ ವಾಸನೆ ಹೋಗಲಾಡಿಸಲು)
ಮೆಂತ್ಯ ಕಾಳು – ಅರ್ಧ ಚಮಚ
ಸೋಸಲು ಒಂದು ಸ್ವಚ್ಛವಾದ ಹತ್ತಿ ಬಟ್ಟೆ / ಸ್ಟ್ರೈನರ್

ತಯಾರಿಸುವ ಸರಳ ಹಂತಗಳು (Step-by-Step Procedure)

ಒಣಗಿಸಿ ಸ್ವಚ್ಛಗೊಳಿಸಿ: ಹಾಳಾದ ಕೊಬ್ಬರಿಯನ್ನು ಮೊದಲು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ನಂತರ ಅದನ್ನು ನೀರಿನಲ್ಲಿ ನೀಟಾಗಿ ತೊಳೆದುಕೊಳ್ಳಿ.

ಕುಕ್ಕರ್‌ನಲ್ಲಿ ಬಿಸಿ ಮಾಡಿ: ತೊಳೆದ ಕೊಬ್ಬರಿಯನ್ನು ಕುಕ್ಕರ್‌ಗೆ ಹಾಕಿ, ಸ್ವಲ್ಪ ನೀರು ಸೇರಿಸಿ. ವಿಸಿಲ್ ಹಾಕದೆ 2-3 ನಿಮಿಷ ಬಿಸಿ ಮಾಡಿ (ಹೀಗೆ ಮಾಡುವುದರಿಂದ ಗಟ್ಟಿಯಾದ ಕೊಬ್ಬರಿ ಮೆತ್ತಗಾಗುತ್ತದೆ).

ಹೆಚ್ಚಿಕೊಳ್ಳಿ: ಕೊಬ್ಬರಿಯ ಮೇಲಿರುವ ತೀರಾ ಹಾಳಾದ ಕಪ್ಪು ಭಾಗವನ್ನು ಚಾಕುವಿನಿಂದ ಸ್ವಲ್ಪ ಕೆರೆದು ತೆಗೆದು, ಉಳಿದದ್ದನ್ನು ಸಣ್ಣ ಸಣ್ಣ ತುಂಡುಗಳಾಗಿ ಹೆಚ್ಚಿಕೊಳ್ಳಿ.

ರುಬ್ಬಿ ಹಾಲು ತೆಗೆಯಿರಿ: ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪವೇ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿ ಹಿಂಡಿ ತೆಂಗಿನ ಹಾಲನ್ನು ಬೇರ್ಪಡಿಸಿ.

ಕುದಿಸಿ ಎಣ್ಣೆ ಬೇರ್ಪಡಿಸಿ: ಈ ಹಾಲನ್ನು ಮತ್ತೆ ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಗೆ ಹಾಕಿ ಒಲೆಯ ಮೇಲಿಡಿ. ಇದಕ್ಕೆ ಸ್ವಲ್ಪ ಲವಂಗ ಮತ್ತು ಮೆಂತ್ಯ ಕಾಳುಗಳನ್ನು ಸೇರಿಸಿ ಕುದಿಯಲು ಬಿಡಿ.

ಎಣ್ಣೆ ರೆಡಿ: ಹಾಲು ಕುದ್ದು ಬಣ್ಣ ಬದಲಾಗಿ (ಬ್ರೌನಿಷ್), ಎಣ್ಣೆ ಸಪರೇಟ್ ಆಗುವುದು ಕಾಣಿಸುತ್ತದೆ. ಆಗ ಗ್ಯಾಸ್ ಆಫ್ ಮಾಡಿ.

ಸೋಸಿಕೊಳ್ಳಿ: ಎಣ್ಣೆ ಸ್ವಲ್ಪ ಉಗುರುಬೆಚ್ಚಗಿರುವಾಗಲೇ ಹತ್ತಿ ಬಟ್ಟೆ ಅಥವಾ ಸ್ಟ್ರೈನರ್ ಬಳಸಿ ಚೆನ್ನಾಗಿ ಹಿಂಡಿ ಸೋಸಿಕೊಂಡರೆ ಶುದ್ಧವಾದ ಮನೆಯಲ್ಲೇ ತಯಾರಿಸಿದ ಕೊಬ್ಬರಿ ಎಣ್ಣೆ ಸಿದ್ಧ!

ವಿಶೇಷ ಟಿಪ್ಸ್

ದುರ್ವಾಸನೆ ಬರಲ್ಲ: ಲವಂಗ ಮತ್ತು ಮೆಂತ್ಯ ಸೇರಿಸಿ ಕುದಿಸುವುದರಿಂದ ಹಾಳಾದ ಕೊಬ್ಬರಿಯ ವಾಸನೆ ಸಂಪೂರ್ಣ ಮಾಯವಾಗಿ, ಎಣ್ಣೆ ಒಳ್ಳೆಯ ಪರಿಮಳ ಕೊಡುತ್ತದೆ. ಇದು ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಎಣ್ಣೆಯಾಗಿದ್ದು, ಕೂದಲು ಅಥವಾ ಬಾಡಿ ಆಯಿಲ್ ಆಗಿ ಆರಾಮವಾಗಿ ಬಳಸಬಹುದು.

ಇದು ಗಮನದಲ್ಲಿರಲಿ

ಹೆಚ್ಚು ಎಣ್ಣೆ ಸಿಗಲು ಟಿಪ್ಸ್ (Maximum Oil Yield)

ಎರಡನೇ ಬಾರಿ ರುಬ್ಬಿ: ಮೊದಲ ಬಾರಿ ಬಟ್ಟೆಯಲ್ಲಿ ಹಾಲು ಹಿಂಡಿದ ನಂತರ, ಉಳಿದ ತೆಂಗಿನಕಾಯಿ ಪುಡಿಗೆ (ಹಿಪ್ಪೆಗೆ) ಮತ್ತೆ ಸ್ವಲ್ಪ ಉಗುರುಬೆಚ್ಚಗಿನ ನೀರು ಹಾಕಿ ಮಿಕ್ಸಿಯಲ್ಲಿ ಮತ್ತೊಮ್ಮೆ ರುಬ್ಬಿ. ಇದರಿಂದ ಎರಡನೇ ಬಾರಿಯೂ ಗಟ್ಟಿ ಹಾಲು ಸಿಗುತ್ತದೆ, ಎಣ್ಣೆಯ ಪ್ರಮಾಣ ಹೆಚ್ಚಾಗುತ್ತದೆ.

ಕಡಿಮೆ ನೀರು ಬಳಸಿ: ರುಬ್ಬುವಾಗ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ನೀರು ಬಳಸಿ. ನೀರು ಜಾಸ್ತಿ ಆದರೆ, ಎಣ್ಣೆ ಬೇರ್ಪಡಲು ಒಲೆಯ ಮೇಲೆ ಹೆಚ್ಚು ಹೊತ್ತು ಕುದಿಸಬೇಕಾಗುತ್ತದೆ.

ಎಣ್ಣೆ ಬೇಗ ಹಾಳಾಗದಂತೆ ಇರಲು (Long Shelf-Life)

ತೇವಾಂಶ ಇರಬಾರದು: ಎಣ್ಣೆ ಕುದಿಸುವಾಗ ಚಟಪಟ ಶಬ್ದ ಸಂಪೂರ್ಣವಾಗಿ ನಿಲ್ಲಬೇಕು. ಒಂದು ವೇಳೆ ಎಣ್ಣೆಯಲ್ಲಿ ನೀರಿನ ಅಂಶ (ತೇವಾಂಶ) ಉಳಿದರೆ, ಕೆಲವೇ ದಿನಗಳಲ್ಲಿ ಬೂಸ್ಟ್ ಹಿಡಿಯುತ್ತದೆ ಅಥವಾ ಕೆಟ್ಟ ವಾಸನೆ ಬರುತ್ತದೆ.

ಒಂದು ಚಿಟಿಕೆ ಕರ್ಪೂರ: ಎಣ್ಣೆ ತಯಾರಾದ ನಂತರ, ಅದು ಸಂಪೂರ್ಣ ತಣ್ಣಗಾದ ಮೇಲೆ ಅದಕ್ಕೆ ಒಂದು ಚಿಕ್ಕ ತುಂಡು ಪಚ್ಚ ಕರ್ಪೂರ ಅಥವಾ ಮಾಮೂಲಿ ಕರ್ಪೂರ ಪುಡಿ ಮಾಡಿ ಹಾಕಿದರೆ, ಎಣ್ಣೆ ವರ್ಷವಾದರೂ ಕೆಡುವುದಿಲ್ಲ ಮತ್ತು ಸುವಾಸನೆಯೂ ಚೆನ್ನಾಗಿರುತ್ತದೆ.

ಗಾಜಿನ ಬಾಟಲಿ ಬಳಸಿ: ಎಣ್ಣೆಯನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿ ಇಡುವ ಬದಲು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆ ಬಳಿಕ ಮನೆಗೆ ಬಂದ ಪೆಟ್ಟಿಗೆಯಲ್ಲಿ ಏನಿದೆ? ಈ ಹಾರರ್ ಸಿನಿಮಾ ನೋಡಿದ್ರೆ ನೀವು ಕಿಟಕಿ ಪಕ್ಕ ಮಲಗೋದು ಡೌಟ್!
'ಭಾರತಕ್ಕೆ ಬಾ, ನನ್ನನ್ನು ಮದುವೆಯಾಗು' ಎಂದಿದ್ದ ಯುವಕನ ಮಾತು ನಂಬಿ 4,300 ಕಿ.ಮೀ ಬಂದ ರಷ್ಯನ್ ಯುವತಿ; ಕೊನೆಗೆ ಕಾದಿತ್ತು ಶಾಕ್!