ಜೀವನದಲ್ಲಿ ಒಂದು ಗಂಡು ಮತ್ತೊಂದು ಹೆಣ್ಣು ಮದುವೆ ಎಂಬ ಬಾಂಧವ್ಯದ ಬಂಧನಕ್ಕೊಳಗಾಗಿ, ಮೊದಲ ರಾತ್ರಿ ಎಂಬ ಮಹೂರ್ತದ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾರೆ. ಆದರೆ, ಆ ರಾತ್ರಿ ಅಂದು ಕೊಂಡಿದ್ದು ಎಲ್ಲವೂ ಆಗದಿರಬಹುದು. ನೆನಪು ಮಾತ್ರ ಸುಮಧುರವಾಗರಲು ಹೀಗೆ ಮಾಡಿ..
ಮೊದಲ ರಾತ್ರಿ ಬಗ್ಗೆ ನೆನೆಯುತ್ತ ನವ ವಿವಾಹಿತ ಜೋಡಿ ರೋಮಾಂಚಿತವಾಗುತ್ತೆ. ಇನ್ನೂ ಕೆಲವರಿಗೊ ಈ ರಾತ್ರಿ ಬಗ್ಗೆ ಎಲ್ಲಿಲ್ಲದ ಭಯ. ನಿಮ್ಮದು ಅರೇಂಜ್ಡ್ ಅಥವಾ ಲವ್ ಮ್ಯಾರೇಜೇ ಆಗಲಿ, ಎಲ್ಲರಿಗೂ ಫಸ್ಟ್ ನೈಟ್ ಎಂದರೆ ಏನೋ ವಿಶೇಷ. ಇಬ್ಬರ ಮನಸ್ಸಿನಲ್ಲಿಯೂ ಈ ಸಮಯದಲ್ಲಿ ಸಂಶಯ ಮೂಡುತ್ತದೆ. ಈ ಮೊದಲ ರಾತ್ರಿಯನ್ನು ಹೇಗೆ ನೆನಪಿನಲ್ಲಿ ಉಳಿಯುವಂತೆ ಮಾಡಬಹುದು. ಇಲ್ಲಿದೆ ಫಸ್ಟ್ ನೈಟನ್ನು ಸದಾ ಕಾಲ ನೆನಪಿನಲ್ಲಿರುವಂತೆ ಮಾಡಲು ಟಿಪ್ಸ್...
ಫಸ್ಟ್ ನೈಟ್ ಮಾಡಲು ವಾತಾವರಣ ಸರಿಯಾಗಿರುವಂತೆ ನೋಡಿಕೊಳ್ಳಿ. ತುಂಬಾ ಜನರು ಇರುವ ಕಡೆ ರೂಮ್ ಇರದಂತೆ ನೋಡಿಕೊಳ್ಳಿ. ಯಾಕೆಂದರೆ ಏಕಾಂತ ಅಗತ್ಯವಾಗಿ ಬೇಕು.
ನಿಮ್ಮ ರೂಮ್ ಅನ್ನು ವಿಶೇಷ ರೀತಿಯಲ್ಲಿ ಡೆಕೋರೇಟ್ ಮಾಡಿ. ಫ್ರೆಷ್ ಕಲರ್, ಹೂವು, ಅರೋಮಾ ಕ್ಯಾಂಡಲ್, ಲೈಟ್ ಮ್ಯೂಸಿಕ್ ವಿಶೇಷವಾದ ಪರಿಮಳ ರೂಮಿನಲ್ಲಿ ಹರಡಿದ್ದರೆ ಆ ರಾತ್ರಿ ಮಧುರವೆನಿಸುತ್ತದೆ.
ಸೆಕ್ಸ್ ಮಾಡಲು ತುಂಬಾ ಅರ್ಜೆಂಟ್ ಮಾಡಬೇಡಿ. ಮೊದಲಿಗೆ ಮಾತನಾಡಲು ಆರಂಭಿಸಿ. ದೇಹ ಒಂದಾಗೋ ಮೊದಲು ಮನಸ್ಸು ಮಿಡಿಯುವಂತಾಗಲಿ.
ಮೊದಲ ರಾತ್ರಿ ದಿನ ಅವರಿಗೆ ಸರ್‌ಪ್ರೈಸ್ ನೀಡಲು ಯತ್ನಿಸಿ, ಅದಕ್ಕಾಗಿ ಏನಾದರೂ ಗಿಫ್ಟ್ ನೀಡಿ. ಇದರಿಂದ ಆ ರಾತ್ರಿಯ ಸಂತೋಷ ಸದಾ ಕಾಲ ನೆನಪಲ್ಲಿ ಉಳಿಯುತ್ತದೆ.
ಬೇಡದ ವಿಷಯಗಳನ್ನು ಮಾತನಾಡಬೇಡಿ. ಜೀವನದಲ್ಲಿ ಸದಾ ನೆನಪಿನಲ್ಲಿರುವಂತ ವಿಷಯಗಳನ್ನು ಒಬ್ಬರಿಗೊಬ್ಬರು ಶೇರ್ ಮಾಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.