ನಾಚಿಕೆ ಸ್ವಭಾವದ ಮಗುವನ್ನು ಸಂಭಾಳಿಸೋದು ಹೇಗೆ?

By Kannadaprabha NewsFirst Published Sep 3, 2018, 12:41 PM IST
Highlights

ಬಹಳ ಆ್ಯಕ್ಟಿವ್ ಆಗಿರುವ ಚಲಾಕಿನಿಂದ ಮಾತನಾಡುವ ಮಕ್ಕಳ ಬಗ್ಗೆ ಪ್ರಶಂಸೆ ಹೆಚ್ಚು. ಅದೇ ನಾಚಿಕೆ ಸ್ವಭಾವದ ಸಂಕೋಚ ಮನಸ್ಥಿತಿಯ ಮಕ್ಕಳು ಮೂಲೆಗುಂಪಾಗೋದು ಜಾಸ್ತಿ

ಎಷ್ಟೋ ಸಲ ಬೇರೆಯವರು ಮಾತನಾಡಿಸಿದಾಗ ಮಗು ಮಾತನಾಡದಿದ್ದರೆ ‘ಅವ್ನ ಸ್ವಲ್ಪ ಮೂಡಿ’ ಅಂತಲೋ,‘ಅವ್ನಿಗೆ ನಾಚಿಗೆ ಜಾಸ್ತಿ’ ಅಂತಲೋ ಜಡ್ಜ್‌ಮೆಂಟ್ ಕೊಟ್ಟು ಬಿಡ್ತೀವಿ.ಇದು ಮಗುವಿನ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ ಅಂತಾರೆ ಮಕ್ಕಳ ತಜ್ಞರು. ಮಗುವಿನ ಎದುರೇ ಆತನಿಗೆ ಒಂದು ಮನಸ್ಥಿತಿಯನ್ನು ಆರೋಪಿಸಿದಾಗ ಮಗು ಮತ್ತೆ ಚಿಪ್ಪಿನೊಳಗೇ ಹುದುಗಿಬಿಡುತ್ತದೆ. ಹೊರಬರುವ ಪ್ರಯತ್ನವನ್ನೇ ಮಾಡಲ್ಲ. ಹಾಗಾಗಿ ಮಗುವಿನ ಸ್ವಭಾವ ಹೇಗೇ ಇರಲಿ, ಆ ಮನಸ್ಥಿತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು, ಆತನನ್ನು ಬಲವಂತದಿಂದ ಆ ಮನಸ್ಥಿತಿಯಿಂದ ಹೊರತರಲು ಪ್ರಯತ್ನಿಸುವ ಕೆಲಸ ಮಾಡಬೇಡಿ. ಮಗು ಸಹಜವಾಗಿ ಬೆಳೆಯಲು ಬಿಡಿ.

 

ಮಕ್ಕಳ ಬಗ್ಗೆ ಹೆಚ್ಚಿನ ಮಾಹಿತಿ :

ಮಕ್ಕಳಿಗೆ ಬ್ರೇಕ್‌ ಫಾಸ್ಟ್ ಬೇಕೇ ಬೇಕು

ಮಕ್ಕಳ ಮಾನಸಿಕ ಬೆಳವಣಿಗೆಗೆ ಬೇಕು ಮಧುರ ಸಂಗೀತ

ಮಕ್ಕಳ ಲಂಚ್ ಬಾಕ್ಸ್‌ಗೇನಿಡೋದು?

click me!