ಉಲ್ಲಾಸದಿಂದಿರಲು ಎಷ್ಟು ನಿದ್ದೆ ಬೇಕು?

By Kannadaprabha NewsFirst Published Sep 3, 2018, 12:30 PM IST
Highlights

 ಕಡಿಮೆ ನಿದ್ರಿಸುವವರು ಹಾಗೂ ಹೆಚ್ಚು ನಿದ್ರಿಸುವವರಿಗೆ ಹೃದ್ರೋಗ ಬರುವ ಸಾಧ್ಯತೆ ಹೆಚ್ಚು. ಇವರಿಗೆ ಹೃದಯಾಘಾತವಾಗುವ ಸಾಧ್ಯತೆಯೂ ಹೆಚ್ಚು ಎನ್ನುತ್ತೆ ವೈದ್ಯಕೀಯ. 

ವ್ಯಕ್ತಿಯಿಂದ ವ್ಯಕ್ತಿಗೆ ನಿದ್ದೆಯ ಅವಧಿ ಬದಲಾಗುತ್ತಿರುತ್ತೆ. ದಿನದಲ್ಲಿ ಅತಿ ಹೆಚ್ಚು ಅಂದರೆ 11 ಗಂಟೆ ನಿದ್ದೆ ಮಾಡುವವರದ್ದು ಒಂದು ವರ್ಗ. ಬರೀ 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ದೆಹೋಗುವವರೂ ಇದ್ದಾರೆ. ಉಳಿದವರು 6 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದನ್ನು ರೂಢಿಸಿಕೊಂಡಿರುತ್ತಾರೆ. ಆರೋಗ್ಯವಂತರಾಗಿರಬೇಕು ಅಂದರೆ 6 ರಿಂದ 8 ಗಂಟೆ ನಿದ್ದೆ ಮಾಡಬೇಕು. ಇಡೀ ದಿನಕ್ಕೆ ಬೇಕಾದ ಉಲ್ಲಾಸ ಇದರಿಂದ ಸಿಗುತ್ತದೆ.

click me!