
ಮನೆಯಲ್ಲಿ ಇಲಿ, ಜಿರಳೆ, ಹಲ್ಲಿ ಮತ್ತು ಸೊಳ್ಳೆಗಳ ಕಾಟ ಶುರುವಾದರೆ ಸಾಕು, ಮನೆಯ ನೆಮ್ಮದಿಯೇ ಹಾಳಾಗುತ್ತದೆ. ಇವುಗಳನ್ನು ಓಡಿಸಲು ಮಾರುಕಟ್ಟೆಯಿಂದ ತರುವ ವಿಷಕಾರಿ ಕೀಟನಾಶಕಗಳು ಆರೋಗ್ಯಕ್ಕೆ ಮತ್ತು ಮಕ್ಕಳಿಗೆ ಅತ್ಯಂತ ಅಪಾಯಕಾರಿ. ಆದರೆ, ನಮಗೆ ಕಹಿಯೆನಿಸುವ ಹಾಗಲಕಾಯಿ ಈ ಕೀಟಗಳಿಗೂ ಕಿಂಚಿತ್ತೂ ಇಷ್ಟವಾಗುವುದಿಲ್ಲ! ಹಾಗಲಕಾಯಿಯ ಕಹಿ ಗುಣವನ್ನು ಬಳಸಿಕೊಂಡು ಯಾವುದೇ ವಿಷವಿಲ್ಲದೆ ಇಡೀ ಮನೆಯನ್ನು ಕೀಟಮುಕ್ತ ಮಾಡುವ 2 ಸರಳ ವಿಧಾನಗಳು ಇಲ್ಲಿವೆ ನೋಡಿ..
*ಒಂದು ತಾಜಾ ಹಾಗಲಕಾಯಿಯನ್ನು ತೆಗೆದುಕೊಂಡು, ಅದರ ಒಳಗಿನ ಬೀಜಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ.
*ನೀರು ಹಾಕದೆ ಮಿಕ್ಸಿ ಜಾರ್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
*ನಂತರ ಒಂದು ಜರಡಿಯಿಂದ ಸೋಸಿ, ಹಾಗಲಕಾಯಿಯ ತಿರುಳು (Pulp) ಮತ್ತು ಹಾಗಲಕಾಯಿಯ ರಸವನ್ನು (Juice) ಪ್ರತ್ಯೇಕವಾಗಿ ಬೇರ್ಪಡಿಸಿಟ್ಟುಕೊಳ್ಳಿ.
ಇದಕ್ಕೆ ಬೇಕಾಗಿರುವುದು
ಬೇರ್ಪಡಿಸಿದ ಹಾಗಲಕಾಯಿ ತಿರುಳು
ತುರಿದ ಸೋಪು (ಬಟ್ಟೆ ಅಥವಾ ಪಾತ್ರೆ ತೊಳೆಯುವ ಸೋಪು) - 2 ಚಮಚ
ಅಚ್ಚ ಖಾರದ ಪುಡಿ - 1.5 ಚಮಚ
ಗೋಧಿ ಹಿಟ್ಟು - 3 ಚಮಚ
*ಹಾಗಲಕಾಯಿ ತಿರುಳಿಗೆ ತುರಿದ ಸೋಪು ಮತ್ತು ಖಾರದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇಡಿ.
*ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟಿಗೆ ಸ್ವಲ್ಪ ನೀರು ಮತ್ತು ಎಣ್ಣೆ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ.
*ಈ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಮಧ್ಯದಲ್ಲಿ ಗುಳಿ ಮಾಡಿ ನಾವು ತಯಾರಿಸಿದ ಹಾಗಲಕಾಯಿ-ಸೋಪು-ಖಾರದ ಮಿಶ್ರಣವನ್ನು ಒಳಗೆ ಇಟ್ಟು ಮುಚ್ಚಿ (ಕಡುಬಿನಂತೆ ಅಥವಾ ಉಂಡೆಯಂತೆ ಕಟ್ಟಿ).
ಬಳಸುವ ವಿಧಾನ: ಇಲಿ ಮತ್ತು ಜಿರಳೆಗಳು ಹೆಚ್ಚಾಗಿ ಓಡಾಡುವ ಕಿಚನ್ ಸಿಂಕ್ ಕೆಳಗೆ, ಗ್ಯಾಸ್ ಸ್ಟೌವ್ ಹತ್ತಿರ ಮತ್ತು ಮನೆಯ ಮೂಲೆ ಮೂಲೆಗಳಲ್ಲಿ ಈ ಉಂಡೆಗಳನ್ನು ಇಡಿ.
ಗೋಧಿ ಹಿಟ್ಟಿನ ವಾಸನೆಗೆ ಆಕರ್ಷಿತವಾಗಿ ಬರುವ ಇಲಿ-ಜಿರಳೆಗಳು ಇದನ್ನು ತಿಂದ ತಕ್ಷಣ, ಒಳಗಿರುವ ಹಾಗಲಕಾಯಿಯ ಕಹಿ, ಖಾರ ಮತ್ತು ಸೋಪಿನ ಅಂಶವು ಅವುಗಳ ಜೀರ್ಣಾಂಗಕ್ಕೆ ಹಾನಿ ಮಾಡುತ್ತದೆ. ಇದರಿಂದ ತೀವ್ರ ಉರಿಯುಂಟಾಗಿ ಮನೆಯಿಂದ ಹೊರಗೆ ಓಡಿಹೋಗುತ್ತವೆ!
(ಎಚ್ಚರಿಕೆ: ಮಕ್ಕಳ ಕೈಗೆ ಸಿಗದಂತೆ ಇಡಿ)
ಇದಕ್ಕೆ ಬೇಕಾಗಿರುವುದು
ಹಾಗಲಕಾಯಿ ರಸ (ಹಿಂದೆ ತೆಗೆದಿಟ್ಟಿದ್ದು)
ಶುಂಠಿ ರಸ - 2 ಚಮಚ
ನೀರು - 1 ಲೋಟ
ಸ್ಪ್ರೇ ಬಾಟಲ್
*ಹಾಗಲಕಾಯಿ ರಸಕ್ಕೆ ತುರಿದ ಶುಂಠಿಯ ರಸವನ್ನು ಹಿಂಡಿ ಹಾಕಿ.
*ಇದಕ್ಕೆ ಒಂದು ಲೋಟ ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿಗೆ ತುಂಬಿಸಿ.
ಹಲ್ಲಿಗಳ ಕಾಟಕ್ಕೆ: ಹಲ್ಲಿಗಳು ಓಡಾಡುವ ಗೋಡೆ, ಕಿಟಕಿ, ಬಲ್ಬ್‌ಗಳ ಬಳಿ ಈ ಲಿಕ್ವಿಡ್ ಅನ್ನು ಸ್ಪ್ರೇ ಮಾಡಿ. ಇದರ ಘಾಟು ಮತ್ತು ಕಹಿ ವಾಸನೆಗೆ ಹಲ್ಲಿಗಳು ಆ ಜಾಗಕ್ಕೆ ಮತ್ತೆ ಸುಳಿಯುವುದಿಲ್ಲ.
ಸೊಳ್ಳೆ ಮತ್ತು ನೊಣಗಳಿಗೆ: ಸಂಜೆಯ ಸಮಯದಲ್ಲಿ ಬಾಗಿಲು, ಕಿಟಕಿಗಳ ಪರದೆಗಳ ಮೇಲೆ ಸ್ಪ್ರೇ ಮಾಡಿದರೆ ಸೊಳ್ಳೆ ಮತ್ತು ನೊಣಗಳ ಕಾಟ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.