ಪಾರ್ಟಿ ಪ್ರಿಯರಾಗಿದ್ದರೆ ಪಾರ್ಟಿಯಲ್ಲಿ ಸಕತ್ತಾಗಿ ಮಿಂಚಬೇಕೆನ್ನೋ ಅಸೆ ಇದ್ದೇ ಇರುತ್ತೆ, ಅದಕ್ಕಾಗಿ ನಿಮ್ಮ ಡ್ರೆಸ್ ಮತ್ತು ಲುಕ್ ಕಡೆಗೆ ಒಂದಿಷ್ಟು ಗಮನ ಕೊಟ್ಟರೆ ಎಲ್ಲರ ಆಕರ್ಷಣೀಯ ಕೇಂದ್ರವಾಗುವುದರಲ್ಲಿ ಅನುಮಾನವೇ ಇಲ್ಲ.
ಇತ್ತೀಚಿಗೆ ಯುವ ಜನತೆಯ ಕ್ರೇಜ್ ಎಂದರೆ ಪಾರ್ಟಿ, ಕ್ಲಬ್.. ಇತ್ಯಾದಿ. ವೀಕೆಂಡ್‌ಗಳಲ್ಲಿ ಪಾರ್ಟಿ ಮಾಡದಿದ್ದರೆ ಹದಿ ಹರೆಯದವರಿಗೆ ನಿದ್ದೇನೆ ಬರೋಲ್ಲ. ನೀವೂ ಅವರಲ್ಲಿ ಒಬ್ಬರಾಗಿದ್ದು ನೆಕ್ಸ್ಟ್ ಪಾರ್ಟಿಗೆ ಯಾವ ಡ್ರೆಸ್ ಹಾಕೋದು, ಹೇಗೆ ಸ್ಟೈಲಿಶ್ ಆಗಿ ಕಾಣೋದು ಎಂದು ನೀವು ಯೋಚನೆ ಮಾಡ್ತಾ ಇದ್ರೆ ಇಲ್ಲಿದೆ ಬೆಸ್ಟ್ ಟಿಪ್ಸ್..
-ಪಾರ್ಟಿ ಎಂದ ಮೇಲೆ ಬ್ಲಾಕ್ ಇರದೇ ಇದ್ದರೆ ಹೇಗೆ? ನಿಮ್ಮ ಬಳಿ ಕಪ್ಪು ಬಣ್ಣದ ಒಂದು ಶಾರ್ಟ್ ಡ್ರೆಸ್ ಅಥವಾ ಸ್ಕರ್ಟ್ ಇರಲಿ. ಇದು ಪಾರ್ಟಿ ಲುಕ್ ನೀಡುತ್ತದೆ.
- ಡೆನಿಮ್ ಶರ್ಟ್ ಹಾಗೂ ಪ್ರಿ೦ಟೆಡ್ ಪ್ಯಾಂಟ್ ಜೊತೆ ಸಿಲ್ವರ್ ಚೋಕರ್ ಧರಿಸಿ. ಇದು ಫ್ರೆಶ್ ಲುಕ್ ನೀಡುತ್ತೆ.
undefined
ಸೀರೆ ಉಟ್ಟರೆ ನಾರಿ, ಮಂದಿ ಹೇಳಬೇಕು ಅಬ್ಬಾ ರೀ...
- ಡ್ರಮಾಟಿಕ್ ಲುಕ್ ಬೇಕಾದರೆ ಹೆವಿ ಚೋಕರ್ ಧರಿಸಿ. ಅದರಲ್ಲೂ ಗೋಲ್ಡ್ ಅಥವಾ ಕ೦ಚಿನ ಬಣ್ಣದಲ್ಲಿದ್ದರೆ ಸಕತ್ತಾಗಿ ಕಾಣುತ್ತೀರಿ.
- ಗೌನ್ ಧರಿಸಿ. ರೆಡ್ ಅಥವಾ ಬ್ಲ್ಯಾಕ್ ಸೈಡ್ ಸ್ಲಿಟ್ ಇರುವ ಗೌನ್ ಸ್ಟಾರ್‌ನಂತೆ ಕಾಣಿಸುತ್ತೆ.
- ತ್ರಿಕೋನಾಕಾರದ ಚೋಕರನ್ನು ಬಿಳಿ ಶರ್ಟಿನ ಮೇಲೆ ಧರಿಸಿದರೂ ಚೆಂದ.
- ನೀವು ಪಾರ್ಟಿಗೆ ಹೋಗುತ್ತೀರಾದರೆ ಕಪ್ಪುಬಣ್ಣದ ಡ್ರೆಸ್ ಮೇಲೆ ಬೋಲ್ಡ್ ನಿಯಾನ್ ಚೋಕರ್ ಧರಿಸಿ. ಎವೆರಡರ ಕಾಂಬಿನೇಷನ್ ಚೆಂದ.
ಮೂಡ್ ನಿರ್ಧರಿಸೋ ಬಣ್ಣಗಳು; ಯಾವಾಗ ಯಾವ ಬಣ್ಣ ಧರಿಸಿದ್ರೆ ಬೆಸ್ಟ್ ಗೊತ್ತಾ?
- ಬಮ್ ಶಾರ್ಟ್ ಕೂಡ ನಿಮಗೆ ಅಪೀಲಿಂಗ್ ಲುಕ್ ನೀಡುತ್ತದೆ. ಇದರ ಜೊತೆಗೆ ಲೂಸ್ ಆಗಿರುವ ಟೀ ಶರ್ಟ್, ಅಥವಾ ಕ್ರಾಪ್ ಟಾಪ್ ಧರಿಸಬಹುದು.