
ಕ್ಷಣದಲ್ಲಿಯೇ ಮುಖದ ಕಾಂತಿ ಹೆಚ್ಚಿಸಲು ಮಾರುಕಟ್ಟಿಗೆ ಬಂದಿದೆ ಫೇಸ್ ಮಾಸ್ಕ್ ಶೀಟ್. ಇದು ಕೊರಿಯನ್ ದೇಶದಲ್ಲಿ ಚರ್ಮ ಆರೈಕೆಗಾಗಿ ಬಳಸುತ್ತಿದ್ದು, ಎಲ್ಲೆಡೆ ಜನರಿಗೆ ಲಭ್ಯವಾಗುತ್ತಿದ್ದು, ಜನಪ್ರಿಯವಾಗುತ್ತಿದೆ. ಯಾವ ಹಣ್ಣು, ಕ್ರೀಮ್ ಅಥವಾ ಸೌಂದರ್ಯವರ್ಧಕಗಳೂ ಇಲ್ಲದ ಮುಖದ ಕಾಂತಿಯನ್ನು ಈ ಶೀಟ್‌ನಿಂದ ಹೆಚ್ಚಿಸಿಕೊಳ್ಳಬಹುದು. ಇದು ಸಾಮಾನ್ಯ ಫೇಸ್ ಶೀಟ್ ಅಲ್ಲವೇ ಅಲ್ಲ. ತ್ವಚೆಗೆ ಅಗತ್ಯವಾದ ಅಂಶಗಳು ಈ ಶೀಟ್‌ನಲ್ಲಿದ್ದು, ಯಾವುದೇ ಅಡ್ಡ ಪರಿಣಾಮವನ್ನೂ ಬೀರದೇ ಮುಖದ ಕಾಂತಿ ಹೆಚ್ಚಿಸುತ್ತದೆ.
ಚರ್ಮದ ಸಮಸ್ಯೆ ನಿವಾರಣೆಯಾಗಿ, ಒಣ ಚರ್ಮ ಸಮಸ್ಯೆಯನ್ನು ಕೂಡಲೇ ಬಗೆಹರಿಸುತ್ತದೆ. ಡ್ರೈ ಚರ್ಮದಲ್ಲಿ ನೀರಿನಾಂಶ ಹೆಚ್ಚಿಸಿ, ತಕ್ಷಣವೇ ಕಾಂತಿ ಹೆಚ್ಚಿಸುತ್ತದೆ. ಮುಖಕ್ಕೆ ಅಂಟಿಸಿಕೊಳ್ಳಬೇಕಾದ ಈ ಶೀಟಿನಿಂದ ಚರ್ಮ ತೇವಾಂಶವನ್ನು ಹೀರಿಕೊಳ್ಳುತ್ತದೆ.
ಬಳಸೋದು ಹೇಗೆ?
ಈ ಶೀಟನ್ನು ಬಳಸುವ ಮುನ್ನ ಚರ್ಮವನ್ನು ಶುದ್ಧ ಮಾಡಿಕೊಳ್ಳಬೇಕು. ಒಣಗಿದ ಚರ್ಮದ ಮೇಲೆ 20-25 ನಿಮಿಷಗಳ ಕಾಲ ಬಿಡಬೇಕು ನಂತರ ಮಾಸ್ಕ್ ತೆಗೆದಾಗ ಮುಖದ ಮೇಲೆ ತೇವಾಂಶವಿರುತ್ತದೆ. ಅದನ್ನು ಮುಖದ ಮೇಲೆ ಅಂಟಿಸಿಕೊಂಡು, ಮಸಾಜ್ ಮಾಡಿಕೊಳ್ಳಬೇಕು. ಒಂದು ಶೀಟನ್ನು ಒಮ್ಮೆ ಮಾತ್ರ ಬಳಸಿಕೊಳ್ಳಬಹುದು. ಇದನ್ನು ವಾರಕ್ಕೆ 2-3 ಸಲ ಬಳಸಿದಾಗ ಮುಖದ ಕಾಂತಿ ಹೆಚ್ಚಿಸಿ, ಚರ್ಮವನ್ನು ಆರೋಗ್ಯವಾಗಿಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.