
ಬೆಲೆ ಗಗನಕ್ಕೇರಿದ್ರೂ ಬಂಗಾರ ಖರೀದಿ ಮಾಡ್ತೇವೆ. ಆರಂಭದಲ್ಲಿ ಹೊಳೆಯುವ ಬಂಗಾರದ ಆಭರಣ ದಿನ ಕಳೆದಂತೆ ಕಳೆಗುಂದುತ್ತೆ. ಕಪ್ಪಾಗುವ ಆಭರಣವನ್ನು ಪದೇ ಪದೇ ಕ್ಲೀನ್ ಮಾಡೋದು ಕಷ್ಟ. ಅದ್ರಲ್ಲೂ ಬಂಗಾರದ ಅಂಗಡಿಯಲ್ಲಿ ಕ್ಲೀನ್ ಮಾಡಿಸೋದು ತಲೆನೋವಿನ ಕೆಲ್ಸ. ನಿಮ್ಮ ಸ್ಕಿನ್ ಗೂ ಬಂಗಾರ ಕಪ್ಪಾಗ್ತಿದ್ದರೆ ಮನೆಯಲ್ಲೇ ಈ ಟ್ರಿಕ್ಸ್ ಬಳಸಿ ಆಭರಣಕ್ಕೆ ಹೊಳಪು ನೀಡಿ.
ವರಮಹಾಲಕ್ಷ್ಮಿ ಹಬ್ಬ ಬರ್ತಿದೆ. ವರ್ಷಕ್ಕೊಮ್ಮೆ ತೆಗೆಯುವ ದೇವಿ ಆಭರಣ ಕಪ್ಪಾಗಿದ್ರೆ ಇಲ್ಲ ನಿಮ್ಮ ಬಂಗಾರದ ಆಭರಣ ಕಪ್ಪಾಗಿದ್ರೆ ಸಿಂಪಲ್ ಟಿಪ್ಸ್ ಬಳಸಿ, ಬಂಗಾರದ ಆಭರಣ ಕ್ಲೀನ್ ಮಾಡಿ. ವರಮಹಾಲಕ್ಷ್ಮಿಯಲ್ಲಿ ಹೊಳೆಯುವ ಆಭರಣ ಧರಿಸಿ. ಇದಕ್ಕೆ ಹೆಚ್ಚು ಖರ್ಚು ಮಾಡ್ಬೇಕಾಗಿಲ್ಲ. ಹಾಗೇ ಹೆಚ್ಚಿನ ಸಮಯ ಕೂಡ ಬೇಕಾಗಿಲ್ಲ.
ಒಂದು ಬೌಲ್ ಗೆ ಉಗುರು ಬೆಚ್ಚಗಿನ ನೀರನ್ನು ಹಾಕಿ. ಅದಕ್ಕೆ ಕೆಲವು ಹನಿ ಸೌಮ್ಯವಾದ ಡಿಶ್ ಸೋಪ್ ಸೇರಿಸಿ. ನಂತ್ರ ಹತ್ತರಿಂದ ಹದಿನೈದು ನಿಮಿಷ ಈ ನೀರಿನಲ್ಲಿ ಆಭರಣವನ್ನು ನೆನೆಸಿ. ನಂತ್ರ ಸೌಮ್ಯವಾದ ಬ್ರೆಷ್ ನಿಂದ ನಿಧಾನವಾಗಿ ಆಭರಣವನ್ನು ಕ್ಲೀನ್ ಮಾಡಿ. ನಂತ್ರ ಸ್ವಚ್ಛವಾದ ನೀರಿನಿಂದ ಆಭರಣವನ್ನು ಕ್ಲೀನ್ ಮಾಡಿ. ಸೂಕ್ಷ್ಮವಾದ ಆಭರಣಗಳನ್ನು ಕ್ಲೀನ್ ಮಾಡಲು ಇದು ಸೌಮ್ಯವಾದ ಆಯ್ಕೆಯಾಗಿದೆ.
ಆಭರಣಗಳನ್ನು ಕ್ಲೀನ್ ಮಾಡಲು ಕಠಿಣವಾದ ಸೋಫ್, ಅರಿಶಿನ, ನಿಂಬೆ ಅಥವಾ ಇತರ ಆಮ್ಲೀಯ ವಸ್ತುಗಳನ್ನು ಎಂದಿಗೂ ಬಳಸಬೇಡಿ. ಆಭರಣವನ್ನು ಕ್ಲೀನ್ ಮಾಡಿದ ನಂತ್ರ ಶುದ್ಧ ನೀರಿನಲ್ಲಿ ಅದನ್ನು ತೊಳೆಯಬೇಕು. ಆ ನಂತ್ರ ಅದನ್ನು ಶುಚಿಯಾದ ಬಟ್ಟೆಯಲ್ಲಿ ನಿಧಾನವಾಗಿ ಒರೆಸಿ, ಆಭರಣ ಸಂಪೂರ್ಣ ಒಣಗಿದ ನಂತ್ರ ಅದನ್ನು ಬಳಸಿ ಅಥವಾ ಭದ್ರವಾಗಿ ಇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.