ಊಟದೊಂದಿಗೆ ನೀರು ಕುಡಿಯುವುದು, ಪಿಜ್ಜಾದೊಂದಿಗೆ ಕೋಕ್ ಕುಡಿಯುವುದು, ಬರ್ಗರ್‌ನೊಂದಿಗೆ ಬಿಯರ್ ಕುಡಿತ, ತಿಂಡಿಯೊಂದಿಗೆ ಜ್ಯೂಸ್ ಕುಡಿಯುವುದು ಇವೆಲ್ಲದರ ಸರಿ ತಪ್ಪುಗಳು ಆಗಾಗ ಚರ್ಚೆಯಾಗುತ್ತಲೇ ಇರುತ್ತವೆ. ಆದರೆ, ನಿಜವಾಗಿ ಊಟದೊಂದಿಗೆ ಏನನ್ನು ಕುಡಿಯಬಹುದು, ಏನನ್ನು ಕುಡಿಯಬಾರದು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.
ಇಡೀ ದಿನ ದೇಹಕ್ಕೆ ನೀರಿನಂಶ ಒದಗಿಸುವುದು ಆರೋಗ್ಯಕ್ಕೆ ಉತ್ತಮ. ಆದರೆ, ಊಟದೊಂದಿಗೆ ಯಾವುದೇ ಪಾನೀಯ ಕುಡಿದರೆ ಅದು ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಎಂದು ಕೆಲವರೆಂದರೆ, ಹಾಗೆ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಮತ್ತೆ ಕೆಲವರ ನಂಬಿಕೆ. ಸೋಡಾ ಅಥವಾ ನೀರನ್ನು ಊಟದೊಂದಿಗೆ ಕುಡಿಯುವುದು ಜೀರ್ಣಕ್ರಿಯೆಗೆ ಅಥವಾ ಆರೋಗ್ಯದ ಮೇಲೆ ನಿಜವಾಗಿ ಪರಿಣಾಮ ಬೀರುವುದೇ ? ಊಟದೊಂದಿಗೆ ಯಾವ ಪಾನೀಯ ಕುಡಿದರೆ ಏನಾಗುತ್ತದೆ ಎಂಬುದು ಇಲ್ಲಿದೆ ನೋಡಿ.
ಮಾಂಸಾಹಾರಿಗಳಿಗಿಂತ ಪುಳ್ಚಾರ್‌ಗಳೇ ಆರೋಗ್ಯವಂತರು
undefined
- ಮದ್ಯ ಹಾಗೂ ಅಸಿಡಿಕ್ ಡ್ರಿಂಕ್‌ಗಳು
ಆಲ್ಕೋಹಾಲ್ ಅಥವಾ ಇತರೆ ಅಸಿಡಿಕ್ ಡ್ರಿಂಕ್‌ಗಳನ್ನು ಊಟದೊಂದಿಗೆ ಸೇವಿಸಿದರೆ ಅದು ಬಾಯಿಯಲ್ಲಿ ಎಂಜಲನ್ನು ಉತ್ಪಾದಿಸುತ್ತದೆ. ಇದರಿಂದ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಪ್ರತಿ ಯುನಿಟ್ ಆಲ್ಕೋಹಾಲ್ ಸೇವನೆಗೆ ಶೇ.10ರಿಂದ 15ರಷ್ಟು ಸಲೈವಾ ಉತ್ಪಾದನೆ ತಗ್ಗುತ್ತದೆ. ಆದರೆ ಕಡಿಮೆ ಆಲ್ಕೋಹಾಲ್ ಸಾಂದ್ರತೆ ಹೊಂದಿರುವ ಬಿಯರ್ ಅಥವಾ ವೈನ್‌ನಿಂದ ಅಜೀರ್ಣ ಅಥವಾ ಪೋಷಕಾಂಶಗಳನ್ನು ದೇಹ ಸೆಳೆದುಕೊಳ್ಳಲು ಯಾವುದೇ ಅಡ್ಡಪರಿಣಾಮಗಳಿಲ್ಲ.
- ನೀರು
ಊಟದೊಂದಿಗೆ ನೀರು ಕುಡಿಯುವುದರಿಂದ ಹೊಟ್ಟೆಯೊಳಗಿನ ಜೀರ್ಣರಸಗಳು ಹಾಗೂ ಎಂಜೈಮ್‌ಗಳು ಡೈಲ್ಯೂಟ್ ಆಗುತ್ತವೆ. ಹಾಗಾಗಿ, ಆಹಾರವನ್ನು ಸರಿಯಾಗಿ ಜೀರ್ಣಿಸಲು ದೇಹಕ್ಕೆ ಆಗುವುದಿಲ್ಲ ಎಂಬ ವಾದವೊಂದು ಇದ್ದೇ ಇದೆ. ಆದರೆ ಇದನ್ನು ಬೆಂಬಲಿಸುವ ಯಾವುದೇ ವೈಜ್ಞಾನಿಕ ನಿಲುವುಗಳಿಲ್ಲ. ನಿಜವೆಂದರೆ ಆಹಾರ ಜೀರ್ಣವಾಗಲು ನೀರಿನ ಅಗತ್ಯವಿದೆ. ನಮ್ಮ ದೇಹವೂ ಆಹಾರ ಜೀರ್ಣಿಸಿಕೊಳ್ಳಲು ಇತರೆ ಜೀರ್ಣರಸಗಳು ಹಾಗೂ ಎಂಜೈಮ್‌ನೊಂದಿಗೆ ನೀರನ್ನೂ ಬಿಡುಗಡೆ ಮಾಡುತ್ತದೆ. ಊಟದ ಮಧ್ಯೆ ನೀರು ಕುಡಿಯಲು ನೀವು ಬ್ರೇಕ್ ನೀಡಿದಾಗ ನಿಮ್ಮ ಹಸಿವು ಹಾಗೂ ಹೊಟ್ಟೆ ತುಂಬಿದ ಮಟ್ಟ ಗಮನಕ್ಕೆ ಬರುತ್ತದೆ. ಇದರಿಂದ ಅತಿಯಾಗಿ ತಿನ್ನುವುದನ್ನು ತಡೆಯಬಹುದು. ತೂಕವನ್ನೂ ಕಳೆದುಕೊಳ್ಳಬಹುದು. ಅಧ್ಯಯನವೊಂದರ ಪ್ರಕಾರ, ಪ್ರತಿ ಊಟಕ್ಕೆ ಮುಂಚೆ 500 ಎಂಎಲ್ ನೀರು ಕುಡಿಯುವವರು, ಈ ಅಭ್ಯಾಸ ಹೊಂದಿರದವರಿಗಿಂತ 2 ಕೆಜಿಯಷ್ಟು ಹೆಚ್ಚು ತೂಕ ಕಳೆದುಕೊಳ್ಳುತ್ತಾರೆ. ಇಷ್ಟೇ ಅಲ್ಲದೆ, ನೀರನ್ನು ಊಟದೊಂದಿಗೆ ಕುಡಿಯುವುದು ಚಯಾಪಚಯ ಕ್ರಿಯೆಯ ವೇಗವನ್ನೂ 24 ಕ್ಯಾಲೋರಿಯಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆದರೆ, ನೆನಪಿಡಬೇಕಾದ ವಿಷಯವೆಂದರೆ ಈ ಎಲ್ಲ ಸಂಗತಿಗಳು ನೀರಿಗೆ ಮಾತ್ರ ಅನ್ವಯವಾಗುತ್ತದೆಯೇ ಹೊರತು, ಕ್ಯಾಲೋರಿ ಹೊಂದಿರುವ ಇತರೆ ಪಾನೀಯಗಳಿಗಲ್ಲ. ಗ್ಯಾಸ್ಟ್ರೋಈಸೋಫಗಲ್ ರಿಫ್ಲಕ್ಸ್ ಕಾಯಿಲೆ (ಜಿಇಆರ್‌ಡಿ) ಹೊಂದಿರುವವರು ಮಾತ್ರ ಊಟದೊಂದಿಗೆ ನೀರನ್ನು ಸೇವಿಸುವುದು ಉಚಿತವಲ್ಲ. ಏಕೆಂದರೆ, ದ್ರವಾಹಾರವು ಹೊಟ್ಟೆಗೆ ಅಗತ್ಯಕ್ಕಿಂತ ಹೆಚ್ಚಿಗೆ ತುಂಬಿಸಿ, ಒತ್ತಡ ಹೆಚ್ಚು ಮಾಡುತ್ತವೆ. ಇದು ಜಿಇಆರ್‌ಡಿಯಿಂದ ನರಳುವವರಲ್ಲಿ ಆ್ಯಸಿಡ್ ರಿಫ್ಲಕ್ಸ್‌ಗೆ ಕಾರಣವಾಗುತ್ತದೆ.
ಭಾರತದ ಸಮೋಸಾ ಮುಂದೆ ಮಂಡಿಯೂರಿದ ಬರ್ಗರ್
- ಇತರೆ ಪಾನೀಯಗಳು
ದ್ರವಾಹಾರಗಳು ಬೇರೆ ಆಹಾರಗಳನ್ನು ಹೊಟ್ಟೆಯಿಂದ ಬೇಗ ಹೊರತಳ್ಳುತ್ತವೆ. ಹಾಗಾಗಿ, ಊಟ ಹೆಚ್ಚು ಕಾಲ ಹೊಟ್ಟೆಯ ಆ್ಯಸಿಡ್ ಹಾಗೂ ಜೀರ್ಣರಸಗಳೊಂದಿಗೆ ಇರಲಾಗುವುದಿಲ್ಲ. ಇದರಿಂದ ಅಜೀರ್ಣವಾಗುತ್ತದೆ ಎಂದೂ ಹಲವರು ವಾದಿಸುತ್ತಾರೆ. ಆದರೆ, ಈ ವಾದದ ಹಿಂದೆಯೂ ಯಾವುದೇ ವೈಜ್ಞಾನಿಕ ಅಧ್ಯಯನಗಳಿಲ್ಲ. ಕೆಲವು ಬಾರಿ ದ್ರವ ಪದಾರ್ಥವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಊಟದೊಂದಿಗೆ ದ್ರವಾಹಾರ ಸೇವಿಸುವುದರಿಂದ ಘನಾಹಾರವು ಸುಲಭವಾಗಿ ಅನ್ನನಾಳದಲ್ಲಿ ಸಾಗಿ ಹೊಟ್ಟೆ ಸೇರುತ್ತದೆ. ಇದು ಮಲಬದ್ಧತೆ ಹಾಗೂ ಹೊಟ್ಟೆ ಉಬ್ಬರಿಸುವಿಕೆಯನ್ನು ತಡೆಯುತ್ತದೆ. ಆದರೆ, ಸಕ್ಕರೆ ಹೊಂದಿರುವಂಥ ಪಾನೀಯಗಳು ಸಾಮಾನ್ಯ ಊಟಕ್ಕಿಂತ ಶೇ.8ರಿಂದ 15ರಷ್ಟು ಹೆಚ್ಚಿನ ಕ್ಯಾಲೋರಿಯನ್ನು ದೇಹಕ್ಕೆ ಸೇರಿಸುತ್ತವೆ. ಡಯಟ್ ಬಗ್ಗೆ ಹೆಚ್ಚು ಗಮನ ನೀಡುವವರು ನೀವಾದರೆ ಸಕ್ಕರೆ ಇಲ್ಲದ ಹಣ್ಣಿನ ರಸಗಳನ್ನು ಸೇವಿಸಬಹುದು.