
ಕೇಕ್ ಒಂದೇ ನನ್ ವೀಕ್‌ನೆಸ್
‘ಇಡೀ ದಿನ ಓಡಾಡ್ತಿರಬೇಕು. ಡ್ಯಾನ್ಸ್ ಮಾಡ್ತಿರಬೇಕು ಮತ್ತು ಖುಷಿ ಖುಷಿಯಾಗಿರ‌್ಬೇಕು. ಇಷ್ಟಿದ್ದರೆ ಸಾಕು, ಜಿಮ್ಮೂ ಬೇಡ, ಏನೂ ಬೇಡ’ ಅಂತ ಫುಲ್ ಕಾನ್ಫಿಡೆನ್ಸ್‌ನಲ್ಲಿ ಹೇಳೋದು ೩೨ರ ಚೆಲುವೆ ತಾಪ್ಸಿ ಪನ್ನು. ಇದು ಬರೀ ಬಾಯಿಮಾತಲ್ಲ. ಡಿಟ್ಟೋ ಹೇಳಿರೋದನ್ನೇ ಪಾಲಿಸಿ ಫಿಟ್ ಆಗಿಯೂ ಇದ್ದಾರೆ. ಇಂತಿಪ್ಪ ಹುಡುಗಿಗೆ ಶೂಟಿಂಗ್ ಎಲ್ಲೇ ಇದ್ರೂ ಪ್ರಾಬ್ಲೆಮ್ ಇಲ್ಲ. ಅಲ್ಲಿನ ಲೋಕಲ್ ಹಣ್ಣು, ತರಕಾರಿಯಲ್ಲೇ ಹೊಟ್ಟೆ ತುಂಬಿಸೋದು ಜಾಸ್ತಿ. ಉಳಿದಂತೆ ನಾರ್ಮಲ್ ಮನೆ ಊಟ. ಒಂದೇ ಒಂದು ವೀಕ್‌ನೆಸ್ ಅಂದರೆ ಕೇಕ್ ಎದುರಿಗಿದ್ರೆ ಸಕಲ ಇಂದ್ರಿಯಗಳೂ ಹಳೆಯ ಪ್ರತಿಜ್ಞೆ ಮರೆತು ಕೇಕ್‌ಗೆ ಶರಣಾಗಿ ಬಿಡುತ್ತವೆ.
ಎತ್ತರ: 5'5
ತೂಕ: 55 ಕೆಜಿ
ಸುತ್ತಳತೆ: 34-27-26
ಆಟ ಆಡೋ ಮಜಾ
ನಿನ್ನ ಬಾಡಿ ಪಾರ್ಟ್ಸ್ ನಂಗಿಷ್ಟ ಎಂದವನಿಗೆ ತಾಪ್ಸಿ ಉತ್ತರವಿದು...!
ಫಿಟ್‌ನೆಸ್‌ಗೆ ಅಂತನೇ ಎಕ್ಸರ್‌ಸೈಸ್, ಜಿಮ್ ಈಕೆಗೆ ಇಷ್ಟ ಇಲ್ಲ. ಬದಲಾಗಿ ಬ್ಯಾಡ್ಮಿಂಟನ್ ಅಥವಾ ಸ್ಕ್ವಾಶ್ ಆಡೋದು. ಡ್ಯಾನ್ಸ್ ಮಾಡೋದು, ಇಡೀ ದಿನ ಆ್ಯಕ್ಟಿವ್ ಆಗಿ ಇರೋದು. ಉಳಿದಂತೆ ಯೋಗ ಮಾಡೋದು ಈಕೆಗಿಷ್ಟ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.