
- ಡಾ.ಪಿಯೂಷ್ ಗೌಡ
ಸ್ಟ್ರೆಸ್‌ನಿಂದಲೂ ಕ್ಯಾನ್ಸರ್ ಬರಬಹುದು!
ಕೆಲವು ಹಣ್ಣು, ತರಕಾರಿ ತಿಂದರೆ ಕ್ಯಾನ್ಸರ್ ಬರಲ್ಲ ಅಂತಾರಲ್ಲ, ಅದು ನಿಜವಾ?
ಹಣ್ಣು, ತರಕಾರಿ ಚೆನ್ನಾಗಿ ತಿನ್ನಬೇಕು. ಇದರಿಂದ ಕ್ಯಾನ್ಸರ್ ಬರೋಲ್ಲ ಅಂತಲ್ಲ, ಎಲ್ಲ ರೋಗಗಳಿಂದಲೂ ದೂರವಿರಬಹುದು. ಆದರೆ ಕೆಲವೊಂದು ಹಣ್ಣು, ತರಕಾರಿ ತಿಂದರೆ ಕ್ಯಾನ್ಸರ್ ಬರಲ್ಲ ಅನ್ನೋದು ಸತ್ಯಕ್ಕೆ ದೂರವಾದ ಮಾತು.
ತಾಯಂದಿರು ಮಗುವಿಗೆ ದೀರ್ಘಕಾಲ ಎದೆಹಾಲು ನೀಡಿದರೆ ಸ್ತನ ಕ್ಯಾನ್ಸರ್ ಬರಲ್ಲ ಅನ್ನೋದು?
ಹೌದು. ಎದೆ ಹಾಲು ದೀರ್ಘಕಾಲ ಕುಡಿಸಿದಷ್ಟು ಮಗುವಿಗೆ ಒಳ್ಳೆಯದು. ತಾಯಿ ಆರೋಗ್ಯಕ್ಕೂ ಉತ್ತಮ. ಹಾಗೇ ಕ್ಯಾನ್ಸರ್‌ನಂಥ ಅನೇಕ ರೋಗಗಳಿಂದ ದೂರ ಇರಬಹುದು.
ಅಸಹಜ ಸೆಲ್ ಡಿವಿಜನ್ ಅಗದಂತೆ ಮುಂಜಾಗ್ರತೆ?
ಆರೋಗ್ಯಕರ ಆಹಾರ ಸೇವಿಸಿ. ಎಂದೂ ವ್ಯಾಯಾಮ ತಪ್ಪಿಸಬೇಡಿ. ಶೇ.30ರಷ್ಟು ಪ್ರಮಾಣದ ಕ್ಯಾನ್ಸರ್‌ಗಳು ಧೂಮಪಾನದಿಂದ ಬರುತ್ತೆ. ಅವಕ್ಕೆ ಬ್ರೇಕ್ ಹಾಕಿ. ಈ ಕಾಲದ ಸಮಸ್ಯೆ ಸ್ಟ್ರೆಸ್‌ನಿಂದಲೂ ಕ್ಯಾನ್ಸರ್ ಬರಬಹುದು. ಆದಷ್ಟು ಒತ್ತಡ ನಿಯಂತ್ರಿಸುವ ಬಗೆ ಕಂಡುಕೊಳ್ಳಿ. ಇಷ್ಟೆಲ್ಲ ಆಗಿಯೂ ಕ್ಯಾನ್ಸರ್ ಬರುವ ಸಾಧ್ಯತೆಯೇ ಇಲ್ಲ ಅನ್ನು ವಂತಿಲ್ಲ. ಸ್ಕ್ರೀನ್ ಮಾಡಿಸಿಕೊಳ್ಳುವ ಮೂಲಕ ಮುಂಜಾಗ್ರತೆ ತೆಗೆದುಕೊಳ್ಳಬಹುದು. ಹೆಲ್ಮೆಟ್ ಹಾಕ್ಕೊಂಡಿದ್ರೆ ಆಕ್ಸಿಡೆಂಟ್‌ನಿಂದ ಆಗುವ ಅನಾಹುತ ತಪ್ಪಿಸಬಹುದು ಅಂತೀವಲ್ಲ ಹಾಗಿದು. ಕೆಲವೊಮ್ಮೆ ಹೆಲ್ಮೆಟ್ ಹಾಕ್ಕೊಂಡಿದ್ರೂ ಆ್ಯಕ್ಸಿಡೆಂಟ್ ಆಗಿ ಸಾಯ್ತಾರೆ. ಹಾಗೇ ಕ್ಯಾನ್ಸರ್ ಕೂಡ. ಮುಂಜಾಗ್ರತೆ ತಗೊಂಡರೂ ಬರುವ ಸಾಧ್ಯತೆ ಇರುತ್ತೆ.
ಮೊಬೈಲ್ ಬಳಸಿದ್ರೆ ಕ್ಯಾನ್ಸರ್ ಬರುತ್ತಾ?
ಈ ಬಗ್ಗೆ ಇನ್ನೂ ಅಧ್ಯಯನ ನಡೆಯುತ್ತಿದೆ. ಆದರೆ ಮೊಬೈಲ್‌ನ ಅತಿಯಾದ ಬಳಕೆಯಿಂದ ಮೆದುಳಿಗೆ ಹಾನಿಯಾಗುತ್ತಿರುವುದು ನಿಜ. ಮೊಬೈಲ್‌ನ ತರಂಗಗಳಿಂದ ಮಿದುಳು ಬಿಸಿಯಾಗುತ್ತೆ. ಇದು ಮಕ್ಕಳಿಗೆ ಬಹಳ ಡೇಂಜರ್, ಕ್ಯಾನ್ಸರ್‌ಗೆ ಕಾರಣವಾದರೂ ಆಗಬಹುದು.
ಕಂಪ್ಯೂಟರ್ ಬಳಸೋದು?
ಹಾಗೇನಾದ್ರೂ ಆದ್ರೆ ಯಾರೂ ಆಫೀಸ್‌ನಲ್ಲಿ ಕೆಲಸ ಮಾಡೋ ಹಾಗೇ ಇರಲ್ಲ. ಅದೆಲ್ಲ ಮಿಥ್. ಕಂಪ್ಯೂಟರ್ ಬಳಸಿದರೆ ಕ್ಯಾನ್ಸರ್ ಬರಲ್ಲ. ಆದ್ರೆ ಇದು ಸ್ಟ್ರೆಸ್‌ನಂಥ
ಸಮಸ್ಯೆಗೆ ಕಾರಣವಾಗಿ ಅದರಿಂದ ಬರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.