
ಬೇಸಿಗೆಯಲ್ಲಿ ಬೆವರು ವಾಸನೆ ತಡೆಯೋಕಾಗಲ್ಲ. ಚಳಿಯಲ್ಲಿ ಮತ್ತೊಂಥರಾ ದುರ್ವಾಸನೆ. ಇದರಿಂದ ಮೈ ವಾಸನೆ ಮಾತ್ರವಲ್ಲ, ಚರ್ಮವೂ ಹಾಳಾಗುತ್ತದೆ. ನಮಗೆ, ನಮ್ಮ ಪಕ್ಕದಲ್ಲಿರುವವರಿಗೆ ಕಿರಿ ಕಿರಿ ಉಂಟು ಮಾಡುವ ಈ ವಾಸನೆಗೆ ಇಲ್ಲಿವೆ ಟಿಪ್ಸ್.....
* ನಿಂಬೆ ಹಣ್ಣಿನಲ್ಲಿ ನ್ಯಾಚುರಲ್ ಡಿಯೊಡರೆಂಟ್ ಅಂಶವಿದ್ದು, ಅದನ್ನು ಸ್ನಾನ ಮಾಡುವ ನೀರೊಂದಿಗೆ 2 ಹನಿ ಬೆರೆಸಬೇಕು. ಹೀಗೆ ಮಾಡುವದರಿಂದ ಬೆವರುವುದು ಕಡಿಮೆಯಾಗುತ್ತದೆ. ಇದ್ದ ದುರ್ವಾಸನೆಯೂ ದೂರವಾಗುತ್ತದೆ.
* ಕಾಫಿ ಹಾಗೂ ಮಸಾಲೆಯುಕ್ತ ಆಹಾರ ಪದಾರ್ಥಗಳ ಹೆಚ್ಚು ಸೇವನೆಯೂ ಬಾಡಿ ಆಡರ್‌ಗೆ ಕಾರಣವಾಗಬಲ್ಲದು. ಇವನ್ನು ಕಡಿಮೆ ಸೇವಿಸಿದರೆ ಒಳಿತು.
* ಕುಕಿಂಗ್ ಸೋಡಾಗೂ ಇದೆ ಮ್ಯಾಜಿಕಲ್ ಪವರ್. ಸ್ವಲ್ಪ ಗೋಧಿ ಹಿಟ್ಟು ಹಾಗೂ ಕುಕಿಂಗ್ ಸೋಡಾ ಮಿಕ್ಸ್ ಮಾಡಿ ಸ್ನಾನ ಮಾಡು ಮುನ್ನ ಕಂಕಳ ಕೆಳಗೆ ಹಚ್ಚಿ. 3 ನಿಮಿಷದ ನಂತರ ತೊಳೆಯಬೇಕು. ಇದು ಹೆಚ್ಚು ಪರಿಮಾಣಕಾರಿಯಾಗಬಲ್ಲದು.
* ಹ್ಯಾಂಡ್ ಸ್ಯಾನಿಟೈಸರ್ ಕೈಗೆ ಮಾತ್ರವಲ್ಲ, ಕಂಕುಳಿಗೂ ಬಳಸಬಹುದು. ಸ್ನಾನ ಮಾಡುವ ಮುನ್ನ ಕಂಕುಳ ಕೆಳಗೆ ಇದನ್ನು ಹಚ್ಚುವುದರಿಂದ ವಾಸನೆ ಬರುವುದಿಲ್ಲ.
* ಒಗೆದ ಬಟ್ಟೆಯನ್ನೇ ಬಳಸಿ. ಅತಿಯಾಗಿ ಬೆವರುವವರು ದಿನಕ್ಕೆರಡು ಸಲ ಬಟ್ಟೆ ಬದಲಾಯಿಸಿದರೆ ಒಳಿತು. ಬೇಸಿಗೆಯಲ್ಲಿ ಕಾಟನ್ ಅಥವಾ ಲೆನಿನ್, ಚಳಿಯಲ್ಲಿ ಬೆಚ್ಚಗಿರುವ ಬಟ್ಟೆಗಳನ್ನೇ ಧರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.