ಗೋಡಂಬಿ ಕೇಕ್, ಹೆಸರು ಕೇಳಿದರೆ ರಿಚ್ ಸ್ವೀಟ್ ಎನಿಸುತ್ತದೆ. ಇದನ್ನು ಮಾಡುವುದು ಹೇಗೆ?
ಗೋಡಂಬಿ ಕೇಕ್, ಹೆಸರು ಕೇಳಿದರೆ ರಿಚ್ ಸ್ವೀಟ್ ಎನಿಸುತ್ತದೆ. ಇದನ್ನು ಮಾಡುವುದು ಹೇಗೆ?
ಗೋಡಂಬಿ ಕೇಕ್ ಮಾಡಲು ಬೇಕಾಗುವ ಸಾಮಗ್ರಿಗಳು:
1 ಕಪ್ ತಾಜಾ ಗೋಡಂಬಿ, 1/2 ಕಪ್ ತುಪ್ಪ, 2 ಕಪ್ ಸಕ್ಕರೆ, 1 ಚಿಟಕೆ ಕೇಸರಿ, 1 ಟೀ ಚಮಚ ಹಾಲು,
ಗೋಡಂಬಿ ಕೇಕ್ ಮಾಡುವ ವಿಧಾನ:
ಮೊದಲಿಗೆ ಬಿಸಿ ನೀರಿನಲ್ಲಿ ಗೋಡಂಬಿಯನ್ನು ನೆನೆಸಿ, ನಂತರ ಅದಕ್ಕೆ 1 ಟೀ ಚಮಚ ಹಾಲು ಸೇರಿಸಿ. ಅದನ್ನು ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಿ, ಮತ್ತೊಂದು ಪಾತ್ರೆಗೆ ಸಕ್ಕರೆ ಮತ್ತು ತುಪ್ಪ ಸೇರಿಸಿ ಚನ್ನಾಗಿ ಮಿಶ್ರ ಮಾಡಿ. ನಂತರ ಅದನ್ನು ಸಣ್ಣ ಉರಿಯಲ್ಲಿ ಚನ್ನಾಗಿ ಬೇಯಿಸಿ. ಆಗಲೇ ಕೇಸರಿಯನ್ನು ಇದಕ್ಕೆ ಸೇರಿಸಿ ಮಿಶ್ರ ಮಾಡಿ. ಈ ಮಿಶ್ರಣವು ತಳ ಬಿಡುವವರೆಗೆ ಬೇಯಿಸಿ ನಂತರ ಅದನ್ನು ತುಪ್ಪ ಸವರಿದ ಪ್ಲೇಟಿಗೆ ಹಾಕಿ. ತಣ್ಣಗಾದ ನಂತರ ಚೌಕಾಕಾರವಾಗಿ ಕತ್ತರಿಸಿ ಗೋಡಂಬಿ ಚೂರುಗಳಿಂದ ಅಲಂಕರಿಸಿದರೆ ರುಚಿಯಾದ ಗೋಡಂಬಿ ಬರ್ಫಿ ಸವಿಯಲು ಸಿದ್ಧ.