ದಾಂಪತ್ಯ ಚೆನ್ನಾಗಿದ್ದರೆ ಮನಸ್ಸು ಸದಾ ಖುಷಿಯಾಗಿರುತ್ತದೆ. ಆದರೆ, ಸಂತೋಷ ಫ್ರೀಯಾಗಿ ಸಿಗುವುದಿಲ್ಲ. ಅದನ್ನು ಗಳಿಸಲು ಹಾರ್ಡ್ ವರ್ಕ್ ಅಗತ್ಯ. ಸುಖೀ ದಾಂಪತ್ಯಕ್ಕಾಗಿ ಕೆಲವೊಂದು ಹೊಂದಾಣಿಕೆ, ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಮಾತಿಗೊಂದು ಪ್ರತಿ ಮಾತು, ತರ್ಕಕ್ಕೆ ವಿತರ್ಕ, ವಾದ-ಪ್ರತಿವಾದ-ವಿತಂಡವಾದ, ಸೋಲೊಪ್ಪಿಕೊಳ್ಳದ ಮನಸ್ಥಿತಿ, ನಾನೇನು ಕಡಿಮೆಯೆಂಬ ಅಹಂ, ಹಣಿಯಲು, ಚುಚ್ಚಲು ಕಾಯುವ ಮನಸ್ಸು, ಅಡಿಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲವೆಂಬ ಕುತರ್ಕ, ಹೀಗೆ ಹಲವು ಸಮರ್ಥನೆಗಳೆಂಬ ಭಾವ ಜಗತ್ತಿನೊಳಗೆ ಜೀವನ ನಡೆಯುತ್ತಿರುತ್ತದೆ.
ದಾಂಪತ್ಯವನ್ನೇ ಕುಲಗೆಡಿಸೋ ಐದು ವರ್ತನೆಗಳಿವು..
undefined
ದಾಂಪತ್ಯದಲ್ಲಿ ಪ್ರೇಮವು ಹಾಸು ಹೊಕ್ಕಂತಿರಬೇಕೆಂದು ಎಲ್ಲ ಹೃದಯಗಳು ಬಯಸುವುದು ಸಹಜ. ಋತುಗಳು ಮಗ್ಗುಲು ಬದಲಾಯಿಸುವ ಹಾಗೆ ಪ್ರೇಮದ ಹೊನಲೂ ಕೂಡ ಮನಸ್ಸು ಭಾವನೆಗಳ ಜೊತೆಗೂಡಿ ಹೊರಳುತ್ತಿರಬೇಕು. ಹಾಗೆ ಹೊರಳಿಕೊಳ್ಳುತ್ತಲಿರುವಾಗಲೆಲ್ಲಾ ಜೊತೆಯಾದ ಪ್ರೇಮವು ಎತ್ತಲೆಲ್ಲಾ ಚಾಚಿಕೊಂಡಿದೆ ಎನ್ನುವ ಸೋಜಿಗ ಎಲ್ಲರದ್ದು.
ಪ್ರೀತಿ ನವೀಕರಿಸಲು ಹೀಗೆ ಮಾಡಿ:
-ನಿತ್ಯ ಬೆಳಗ್ಗೆ ಎದ್ದೊಡನೆ ಪರಸ್ಪರ ಚೆಂದದ ಮುಗುಳ್ನಗೆ ಬೀರಿ ದಿನವನ್ನು ಆರಂಭಿಸಿ. ದಿನವಿಡೀ ಆಹ್ಲಾದಕರ ಅನುಭವವವಿರುತ್ತದæ.
-ಇಬ್ಬರೂ ಉದ್ಯೋಗಿಗಳಾಗಿದ್ದಲ್ಲಿ ಮನೆ ಕೆಲಸಗಳನ್ನು ಹಂಚಿಕೊಂಡು ಮಾಡಿ.
-ಪರಸ್ಪರರ ಸಂಬಂಧಿಕರನ್ನು ಗೌರವಿಸಿ. ಇಲ್ಲವಾದಲ್ಲಿ ಕೀಳರಿಮೆ ಅವಿರ್ಭವಿಸಿ ಶಾಂತಿ ಮರೀಚಿಕೆಯಾಗುತ್ತೆ.
-ಭೂತ, ವರ್ತಮಾನ, ಭವಿಷ್ಯದ ಬಗ್ಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಮಾತಿನಲ್ಲಿ ಹಿಟ್ಲರ್ ಧೋರಣೆ ಬೇಡ.
-ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಮುನಿಸು ಬೇಡ. ಯಾರಾದರೊಬ್ಬರು ಸೋತು ಮುಂದೆ ಸಾಗಿ.
-ಪರಸ್ಪರ ಇಷ್ಟವಾದ ಹೆಸರಿನಿಂದ ಪೆಟ್‌ನೇಮ್ ಕರೆದುಕೊಳ್ಳಿ. ಹಾಗೆ ಕರೆದಾಗ ಪರಸ್ಪರರಲ್ಲಿ ಪ್ರೀತಿ ಹೆಚ್ಚುತ್ತೆ.
-ಮಹತ್ವದ ದಿನಗಳು ನೆನಪಿಟ್ಟುಕೊಳ್ಳಿ. ಪುಟ್ಟಮರೆವು ದಟ್ಟವೈಮನಸ್ಸನ್ನು ಉಂಟು ಮಾಡಬಹುದು.
-ಪರಸ್ಪರ ಸಂಶಯ, ಸಿಟ್ಟು ಸೆಡವುಗಳಿದ್ದರೆ ಚರ್ಚಿಸಿ ಪರಿಹರಿಸಿಕೊಳ್ಳಿ.
-ಹೊರಗಡೆ ಸುತ್ತುವುದು ರೂಢಿಸಿಕೊಳ್ಳಿ. ಟ್ರಕ್ಕಿಂಗ್, ಸುಂದರ ತಾಣಗಳಿಗೆ ಹೋಗಿ ಬನ್ನಿ.
-ಹೊರಗಿನವರೆದುರು ಅತಿಥಿಗಳೆದುರು ಸಂಗಾತಿಯನ್ನು ಅವಹೇಳನ ಮಾಡಬೇಡಿ.
-ನಮ್ಮದೆಲ್ಲ ಮುಗಿಯಿತು, ಮಕ್ಕಳಾಯಿತು, ಮೊಮ್ಮಕ್ಕಳಾಯಿತು, ಇನ್ನೇನಿದೆ ಎನ್ನಬೇಡಿ. ಹೃದಯರಾಗಕ್ಕೆ ವಯಸ್ಸಿನ ಹಂಗಿಲ್ಲ.
-ಕೆ.ಶ್ರೀನಿವಾಸರಾವ್