ಕೊನೆ ಆಸೆಯಂತೆ ಸಾವಿಗೂ ಮುನ್ನ ಕ್ಲಾಸ್‌ಮೇಟ್ಸ್ ಜೊತೆ ತರಗತಿಗೆ ಹಾಜರ್, ವಿದ್ಯಾರ್ಥಿನಿ ಮನಕಲುಕುವ ಘಟನೆ

Published : Nov 21, 2026, 11:40 AM IST
Class Room

ಸಾರಾಂಶ

ತನ್ನ ಕೊನೆಯ ಆಸೆಯಂತೆ ಸಾವಿಗೂ ಮುನ್ನ ನೆಚ್ಚಿನ ಸಹಪಾಠಿಗಳ ಜೊತೆ ಕೊನೆದಾಗಿ ತರಗತಿಗೆ ಹಾಜರಾಗಿದ್ದಾಳೆ. ಉಪನ್ಯಾಸಕರ ಪಾಠ ಕೇಳಿದ್ದಾಳೆ. ತರಗತಿ ಮುಗಿಯುತ್ತಿದ್ದಂತೆ ಕಣ್ಣೀರಿನೊಂದಿಗೆ ಕ್ಲಾಸ್‌ಗೆ ಮಾತ್ರವಲ್ಲ, ಈ ಲೋಕಕ್ಕೆ ಗುಡ್ ಬೈ ಹೇಳಿದ ಘಟನೆ ನಡೆದಿದೆ.

ಗೈಝೌ (ನ.21) ವಿದ್ಯಾರ್ಥಿಗಳ ಜೊತೆ ತರಗತಿಗೆ ಹಾಜರಾಗುವುದು, ಪಾಠ, ಅಧ್ಯಯನ, ಹರಟೆ ಹೊಡೆಯುವುದು, ಕಾಲೇಜು ಕ್ಯಾಂಟೀನ್‌ನಲ್ಲಿ ಒಂದಷ್ಟು ಹೊತ್ತು, ಕ್ಯಾಂಪಸ್‌ನಲ್ಲಿ ಸುತ್ತಾಟ ಹೀಗೆ ಶಾಲಾ ಕಾಲೇಜು ದಿನಗಳು ಯಾರಿಗೆ ಇಷ್ಟವಿಲ್ಲ ಹೇಳಿ? ಹೀಗೆ ಖುಷಿ ಖುಷಿಯಾಗಿ ಕಾಲೇಜು ದಿನಗಳಲ್ಲಿ ಹೆಜ್ಜೆ ಹಾಕುತ್ತಿದ್ದ 18ರ ಹರೆಯದ ವಿದ್ಯಾರ್ಥಿನಿಯ ಹೃದಯವಿದ್ರಾವಕ ಘಟನೆ ಎಲ್ಲರ ಕಣ್ಣಾಲಿ ತೇವಗೊಳಿಸಿದೆ. ಇದೇ ವಿದ್ಯಾರ್ಥಿನಿ ತನ್ನ ಮಹದಾಸೆಯಂತೆ ಕೊನೆಯ ಬಾರಿಗೆ ತರಗತಿಗೆ ಹಾಜರಾಗಿದ್ದಾಳೆ. ಸಹಪಾಠಿಗಳ ಜೊತೆ ಕ್ಲಾಸ್‌ನಲ್ಲಿ ಕುಳಿತಿದ್ದಾಳೆ, ಪಾಠ ಕೇಳಿದ್ದಾಳೆ. ಇದೇ ಕೊನೆ. ಬಳಿಕ ಈ 18ರ ಹರೆಯದ ವಿದ್ಯಾರ್ಥಿನಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾಳೆ.

9ನೇ ತರಗತಿ ವಿದ್ಯಾರ್ಥಿನಿ

ಯಾವೋ ಯಿಂಗ್‌ಬೈ ವಯಸ್ಸು 18. ಚೀನಾದ ಗೈಝೌ ಪ್ರಾಂತ್ಯದ ನಿವಾಸಿ. ಪೋಷಕರ ಜೊತೆ ಅಕ್ಕರೆಯಲ್ಲಿ ಬೆಳೆದ ಹುಡುಗಿ. ಕಳೆದ ಐದು ವರ್ಷದಿಂದ ಯಾವೋ ಲ್ಯುಕೇಮಿಯಾ ಕ್ಯಾನ್ಸರ್‌ಗೆ ತುತ್ತಾಗಿದ್ದಳು. ಕಳೆದ ಐದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ದಿನದಿಂದ ದಿನಕ್ಕೆ ಕ್ಯಾನ್ಸರ್ ದೇಹ ಆವರಿಸಿಕೊಂಡಿತ್ತು. ಕ್ಯಾನ್ಸರ್ ಚಿಕಿತ್ಸೆ ಕಾರಣ ಆರಂಭಿಕ ದಿನಗಳಲ್ಲಿ ಸರಿಯಾಗಿ ತರಗತಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಒಂದೆರೆಡು ಬಾರಿ ಫೇಲ್ ಆಗಿ, ಅದೇ ಕ್ಲಾಸ್‌ನಲ್ಲಿ ಮುಂದುವರಿಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಹೀಗೆ 9ನೇ ತರಗತಿಗೆ ತಲುಪಿದ್ದ ಯಾವೋ ಕ್ಯಾನ್ಸರ್ ತೀವ್ರಗೊಂಡಿತು. ಆರಂಭಿಕ ಕೆಲ ತಿಂಗಳು ತರಗತಿಗೆ ಹಾಜರಾಗಿದ್ದಳು. ಈಕೆಯ ಕ್ಯಾನ್ಸರ್ ಅನಾರೋಗ್ಯ ಅರಿತಿದ್ದ ಸಹಪಾಠಿಗಳು ಅತ್ಯಂತ ಪ್ರಿತಿಯಿಂದ ನಡೆಸಿಕೊಂಡಿದ್ದರು.

ಮಗಳನ್ನು ಉಳಿಸಲು ಪೋಷಕರ ಶಕ್ತಿ ಮೀರಿ ಹೋರಾಟ

ಮಗಳನ್ನು ಉಳಿಸಲು ಪೋಷಕರು ಶಕ್ತಿ ಮೀರಿ ಹೋರಾಡಿದ್ದಾರೆ. ಒಂದೇ ಮಗು ಸಾಕು ಎಂದಿದ್ದ ಪೋಷಕರು ಮತ್ತೊಂದು ಮಗುವಿಗೆ ಜನ್ಮ ನೀಡಿ ಎರಡನೇ ಮಗುವಿನ ಹೊಕ್ಕಳ ಬಳ್ಳಿಯ ರಕ್ತದ ಮೂಲಕ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್ ಮಾಡಿಸಿದ್ದರು. ಹೀಗಾಗಿ ಕೊಂಚ ಸುಧಾರಣೆ ಕಂಡಿತ್ತು. ಹೀಗಾಗಿ 9ನೇ ತರಗತಿಗೆ ಕೆಲ ತಿಂಗಳು ಹಾಜರಾಗಿದ್ದಳು. ಕಳೆದ ಮೂರು ತಿಂಗಳ ಹಿಂದೆ ಕ್ಯಾನ್ಸರ್ ಮತ್ತೆ ಉಲ್ಬಣಗೊಂಡಿತು. ತರಗತಿಗೆ ಹಾಜರಾಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು.

ನನ್ನ ಆಸೆ ಈಡೇರುವ ಸಾಧ್ಯತೆ ಇಲ್ಲ ಎಂದ ವಿದ್ಯಾರ್ಥಿನಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಪೋಷರು ತಮ್ಮ ಊರಿನ ಆಸ್ಪತ್ರೆಗೆ ಮಗಳನ್ನು ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದರು. ಯಾವೋ ಆರೋಗ್ಯ ಕ್ಷೀಣಿಸಿತ್ತು. ಹೀಗಾಗಿ ಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ಆಸ್ಪತ್ರೆಗೆ ಆಗಮಿಸಿ ಧೈರ್ಯ ತುಂಬಿದ್ದರು. ಹೀಗೆ ನೆಚ್ಚಿನ ಅಧ್ಯಾಪಕರು ಹಾಗೂ ತನ್ನ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಿದ್ದ ಸಹಪಾಠಿ ಆಗಮಿಸಿದಾಗ ತನ್ನ ಕೊನೆಯ ಆಸೆ ಹೇಳಿಕೊಂಡಿದ್ದಳು. ನಾನು ಬದುಕುವ ಸಾಧ್ಯತೆ ಇಲ್ಲ. ತೀವ್ರ ನೋವು, ಮೂಗಿನಿಂದ ರಕ್ತ ಸ್ರಾವವಾಗುತ್ತಿದೆ. ಪೋಷಕರ ಬಿಟ್ಟು ಹೋಗಲು ನೋವಾಗುತ್ತಿದೆ. ಜೊತೆಗೆ ನನ್ನ ಸಹಪಾಠಿಗಳು, ಅಧ್ಯಾಪಕರಿಲ್ಲದ ಜಗತ್ತಿಗೆ ನಾನು ಹೋಗಬೇಕಿದೆ. ಹೀಗಾಗಿ ನನ್ನಗೆ ನನ್ನ ಕ್ಲಾಸ್‌ಮೇಟ್ಸ್ ಜೊತೆ ಪಾಠ ಕೇಳಬೇಕು ಅನ್ನೋದು ಆಸೆಯಾಗಿತ್ತು. ಈ ಹಿಂದಿನಂತೆ ಸ್ವಲ್ಪ ಚೇತರಿಕೆ ಕಂಡ ಬಳಿಕ ತರಗತಿಗೆ ಹಾಜರಾಗಬೇಕು, ಎಲ್ಲರನ್ನು ಮಾತನಾಡಿಸಬೇಕು, ಪಾಠ ಕೇಳಬೇಕು ಎಂದುಕೊಂಡಿದ್ದೆ. ಆದರೆ ನನ್ನ ಆಸೆ ನೇರವೇರುವ ಸಾಧ್ಯತೆ ಇಲ್ಲ. ನಾನು ಈ ಬೆಡ್‌ನಿಂದ ಏಳುವ ಸಾಧ್ಯತೆಗಳಿಲ್ಲ ಎಂದು ಕಣ್ಣೀರಿಡಲುತ್ತಲೇ ಹೇಳಿಕೊಂಡಿದ್ದಾಳೆ.

ಆಸ್ಪತ್ರೆಯಲ್ಲೇ ತರಗತಿ ಸೃಷ್ಟಿಸಿದ ಆಪ್ತರು

ವಿದ್ಯಾರ್ಥಿನಿ ಮಾತು ಕೇಳಿಸಿಕೊಂಡ ಪೋಷಕರು, ಸಹಪಾಠಿಗಳು ಹಾಗೂ ಅಧ್ಯಾಪಕರು ಕಣ್ಣೀರಾಗಿದ್ದಾರೆ. ಆಸ್ಪತ್ರೆಯಿಂದ ಹೊರಬಂದ ಅಧ್ಯಾಪಕರು ವಿದ್ಯಾರ್ಥಿನಿಯ ಕೊನೆ ಆಸೆ ನೆರವೇರಿಸಲು ನಿರ್ಧರಿಸಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ಜೊತೆ ಮಾತನಾಡಿದ್ದಾರೆ. ಆಸ್ಪತ್ರೆಯ ಒಂದು ವಾರ್ಡ್‌ನಲ್ಲಿ ವಿಶೇಷ ಕೊಠಡಿ ಮಾಡಲಾಗಿತ್ತು. ತರಗತಿ ಬೆಂಚ್, ಬೋರ್ಡ್ ಎಲ್ಲವೂ ತಾತ್ಕಾಲಿಕವಾಗಿ ಹಾಕಲಾಯಿತು. ಇತ್ತ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆಯನ್ನು ಅಧ್ಯಾಪಕರು ನೀಡಿದ್ದರು. ಇದು ಸಾಮಾನ್ಯ ಕ್ಲಾಸ್. ಇಲ್ಲಿ ಯಾರೂ ಕೂಡ ಅತಿಯಾಗಿ ವರ್ತನೆ ಇರಬಾರದು. ಯಾರು ಕೂಡ ಭಾವುಕರಾಗಬಾರದು. ನಾವು ಆಕೆಯನ್ನು ಅಳಿಸಬಾರದು. ಸಾಮಾನ್ಯವಾಗಿ ನಡೆಯುವ ತರಗತಿಯಂತೆ ಇರಬೇಕು, ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದರು.

ಸಹಪಾಠಿಗಳನ್ನು ಯಾವೋ ತವರಿನ ಆಸ್ಪತ್ರೆಗೆ ಆಹ್ವಾನಿಸಲಾಯಿತು. ಎಲ್ಲಾ ಸಹಪಾಠಿಗಳು ಆಗಮಿಸಿದ್ದರು. ಹೆಡ್ ಮಾಸ್ಟರ್, ಅಧ್ಯಾಪಕರು, ಇತರ ಸಿಬ್ಬಂದಿಗಳು ಆಸ್ಪತ್ರೆಯ ತರಗತಿಗೆ ಆಗಮಿಸಿದ್ದರು. ಇತ್ತ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಯಾವೋಳನ್ನು ಬೆಡ್‌ ಜೊತೆಗೆ ತರಗತಿಗೆ ಕರೆದುಕೊಂಡು ಬಂದಿದ್ದಾರೆ. ಪುರಾತತ್ವ ಶಾಸ್ತ್ರ ಹಾಗೂ ಸ್ಯಾನ್‌ಕ್ಸಿಂಗ್‌ಡುಯಿ ಮ್ಯೂಸಿಯಂ ಕುರಿತು ಪಾಠ ಬೋಧಿಸಲಾಯಿತು. ಇತರ ವಿದ್ಯಾರ್ಥಿಗಳಂತೆ ಯಾವೋ ಕೂಡ ತರಗತಿ ನಡುವೆ ಪಾಠ ಪುನರಾವರ್ತಿಸಿದ್ದಾಳೆ. ಅತೀವ ನೋವು, ಜ್ವರ, ಉಸಿರಾಟ ಸಮಸ್ಯೆ ನಡುವೆಯೂ ಯಾವೋ ಪಾಠ ಕೇಳಿದ್ದಾಳೆ.

ತರಗತಿ ಹಾಜರಾದ ಎರಡನೇ ದಿನಕ್ಕೆ ಸಾವು

ತರಗತಿಗಳು ಮುಗಿಯುತ್ತದ್ದಂತೆ ಯಾವೋ ಕಣ್ಣೀರಾಗಿದ್ದಾಳೆ. ಆಕೆಯ ನೋಡಿ ಅಧ್ಯಾಪಕರು, ಸಹಪಾಠಿಗಳು ದುಖ ತಡೆಯಲು ಸಾಧ್ಯವಾಗದೇ ಕಣ್ಣೀರಿಟ್ಟಿದ್ದಾರೆ. ತನ್ನ ಕೊನೆಯ ಆಸೆಯಂತೆ ಸಹಪಾಠಿಗಳ ಜೊತೆ ತರಗತಿಗೆ ಹಾಜರಾಗಿದ್ದಾಳೆ. ದುರಂತ ಎಂದರೆ ತರಗತಿಗೆ ಹಾಜರಾದ ಎರಡೇ ದಿನಕ್ಕೆ ಯಾವೋ ಕೊನೆಯುಸಿರೆಳೆದಿದ್ದಾಳೆ. ಈ ಮಾಹಿತಿ ಸಹಪಾಠಿಗಳು, ಶಿಕ್ಷಕರಿಗೆ ತೀವ್ರ ಆಘಾತ ನೀಡಿತ್ತು. ಆಕೆ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಎಲ್ಲರೂ ಶಾಕ್‌ನಿಂದ ಹೊರಬಂದಿಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಶ್ವರ್ಯ-ಶಿಶಿರ್​ ಪ್ರೇಮ ಪಯಣಕ್ಕೆ ಅಡಿಪಾಯ ಇಟ್ಟೋರೇ ಸುದೀಪ್​​: ಕುತೂಹಲದ ಪೋಸ್ಟ್​ ಮಾಡಿ ಇನ್ವಿಟೇಷನ್​ ಕೊಟ್ಟ ಜೋಡಿ
ಚಪಾತಿ ಹಂಚಿಗೆ ಅಂಟಿಕೊಂಡು ಸೀದು ಹೋಗ್ತಿದ್ಯಾ? ಸುಲಭವಾಗಿ ಮೇಲೆಳಲು ಇಲ್ಲಿದೆ ಸೂಪರ್ ಟಿಪ್ಸ್