ನಾಲಿಗೆಗೆ ರುಚಿ ಎನಿಸುವ ಕಾಳು ಪಲ್ಯವನ್ನು ಮನೆಯಲ್ಲಿಯೂ ರೆಡಿ ಮಾಡುಬಹುದು. ಮೊಳಕೆ ಕಟ್ಟಿದ ಹೆಸರು ಕಾಳಿನಲ್ಲಿ ಹೆಚ್ಚು ಪ್ರೊಟೀನ್ ಮತ್ತು ನಾರಿನಂಶವಿದ್ದು, ಆರೋಗ್ಯಕರ ಆಹಾರವಾಗಿದೆ. ಕೈಗೆಟಕುವ ದರದಲ್ಲಿ ಇದು ಲಭ್ಯ.
ನಮ್ಮ ದೈನಂದಿನ ಜೀವನದಲ್ಲಿ ಕಾಳುಗಳನ್ನು ಎಷ್ಟು ಬಳಸಿದರೂ ಸಾಲದು. ಪೌಷ್ಟಿಕಾಂಶಯುಳ್ಳ ಈ ಕಾಳುಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು. ಅಡುಗೆಯೂ ಮಾಡಬಹುದಾಗಿದ್ದು, ಪಲ್ಯ ಮಾಡೋ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿ :
undefined
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಕೆರಿಬೇವು, ಇಂಗು, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಮತ್ತು ಮೆಣಸಿನಕಾಯಿ ಸೇರಿಸಿ ಹುರಿದುಕೊಳ್ಳಿ.ಈರುಳ್ಳಿ ಕೆಂಪಾಗುವ ತನಕ ಹುರಿಯಬೇಕು. ಅದಕ್ಕೆ ಟೊಮ್ಯಾಟೋ, ಅರಿಷಿಣ, ಖಾರದ ಪುಡಿ, ಬೆಲ್ಲ ಮತ್ತು ಉಪ್ಪು ಹಾಕಿ ಕೈ ಆಡಿಸುತ್ತಿರಿ. ನಂತರ ಅದಕ್ಕೆ ಮೊಳಕೆ ಕಟ್ಟಿದ ಹೆಸರು ಕಾಳು ಸೇರಿಸಿ. ನೀರು ಹಾಕಿ 15 ನಿಮಿಷ ಬೇಯಿಸಿದರೆ ರುಚಿ ರುಚಿಯಾದ ಕಾಳಿನ ಪಲ್ಯನ ರೆಡಿ.