
ಕೆಲವರು ಸಂಭೋಗದ ಸಮಯದಲ್ಲಿ ಜನನಾಂಗ ಮತ್ತಿತ್ತರ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ವೈದ್ಯಕೀಯವಾಗಿ ಕೆಲವು ಸೂಕ್ತ ಪರಿಹಾರಗಳಿವೆ.
1) ಮಿಲನ ಸಂದರ್ಭದಲ್ಲಿ ನಿಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಿ. ಯೋನಿ ಪ್ರವೇಶ ಸುಲಭ ಆಗಬೇಕೆಂದರೆ, ಹೆಚ್ಚು ಹೊತ್ತು ಸಂಭೋಗಪೂರ್ವ ರತಿಯಾಟಗಳಲ್ಲಿ ತೊಡಗಬೇಕು. ಅನೇಕ ಪುರುಷರು ಹೆಚ್ಚು ಹೊತ್ತು ರಸಿಕತೆಯಿಂದ ಆಲಿಂಗನ, ಚುಂಬನಾದಿಗಳನ್ನು ನಡೆಸದೆ ಬೇಗನೆ ಸಂಭೋಗಕ್ಕೆ ಪ್ರಯತ್ನಿಸುವುದರಿಂದ ಸ್ತ್ರೀಯರು ಇನ್ನೂ ಸಿದ್ಧವಾಗಿರದೆ ಹೀಗಾಗುತ್ತದೆ.
2) ರತಿಯಾಟಗಳಿಂದ ಮೈಮರೆತು ಯೋನಿ ಒದ್ದೆಯಾದಾಗ ಪ್ರವೇಶ ಸುಲಭ. ಕನ್ಯಾಪೊರೆ ಅಥವಾ ಹೈಮೆನ್ ಇನ್ನೂ ಹರಿದಿಲ್ಲದಿದ್ದರೆ, ಕೆಲವೊಮ್ಮೆ ಅದು ಹರಿಯಲು ಕಷ್ಟವಾಗಿ ಹೀಗಾಗಬಹುದು.
3) ಸಮಸ್ಯೆ ಬಗೆಹರಿಯದಿದ್ದರೆ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ. ಅವರು ಯೋನಿಯನ್ನು ಪರೀಕ್ಷಿಸಿ, ಕನ್ಯಾಪೊರೆ ಇನ್ನೂ ಹರಿದಿಲ್ಲವಾದರೆ, ಶಸ್ತ್ರಕ್ರಿಯೆಯಿಂದ ಹರಿಯುತ್ತಾರೆ. ಆಗ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.