
ಪುದೀನಾ ಎಲ್ಲೆಡೆ ಸುಲಭವಾಗಿ ಸಿಗೋ ಸೊಪ್ಪು. ಇದನ್ನು ಆಗಾಗ ಬಳಸುತ್ತಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಮನೆ ಮದ್ದಾಗಿಯೂ ಇದನ್ನು ಬಳಸಬಹುದು. ಯಾವ ಆರೋಗ್ಯ ಸಮಸ್ಯೆಗೆ, ಇದನ್ನು ಬಳಸುವುದು ಹೇಗೆ?
- ಪುದೀನಾ ಸೊಪ್ಪಿನಲ್ಲಿ ಅಕ್ರ್ಯಾಲಿಕ್ ಆ್ಯಸಿಡ್, ಕಬ್ಬಿಣ, ವಿಟಮಿನ್ ಎ, ಬಿ, ಸಿ ಮತ್ತು ರಂಜಕ ಅಧಿಕವಾಗಿರುವುದರಿಂದ ಇದು ಮನೆ ಮದ್ದಾಗಿ ಬಹಳ ರೀತಿಯಲ್ಲಿ ಬಳಕೆಗೆ ಬರುತ್ತದೆ.
-ಪುದೀನಾ ಜ್ಯೂಸ್ ಕೆಮ್ಮು, ನೆಗಡಿ, ಹೊಟ್ಟೆ ಉರಿ, ಅಜೀರ್ಣ, ಜಂತುಹುಳು ಮತ್ತು ಗ್ಯಾಸ್ಟ್ರಿಕ್‌ಗೆ ರಾಮಬಾಣ. ಅಸ್ತಮಾಕ್ಕೆ ಇದರ ಹಸಿ ಸೊಪ್ಪು ಒಳ್ಳೆಯದು.
-ನಿತ್ಯವೂ 4 ರಿಂದ 5 ಪುದೀನಾ ಎಲೆ ಅಗಿದು ತಿಂದರೆ, ಜೀರ್ಣಶಕ್ತಿ ಹೆಚ್ಚುತ್ತದೆ. ಹಲ್ಲುಗಳ ಆರೋಗ್ಯಕ್ಕೂ ಒಳ್ಳೆಯದು.
-ಇದರ ಕಷಾಯದಿಂದ ಕೆಲವರಿಗೆ ಗಂಟಲು ಒಡೆಯುತ್ತದೆ. ಹಾಗಾಗದಿದ್ದಲ್ಲಿ, ಆಗಾಗ ಕುಡಿದರೆ, ಆರೋಗ್ಯಕ್ಕೆ ಒಳ್ಳೆಯದು.
-ಚರ್ಮದ ಕಾಯಿಲೆಗಳಾದ ತುರಿಕೆ, ಕಜ್ಜಿ ಸಮಸ್ಯೆಯಿದ್ದರೆ ಪುದೀನಾ ರಸಕ್ಕೆ ತುಳಸಿ ರಸ, ಅರಿಶಿಣ ಸೇರಿಸಿ ಹಚ್ಚಿ, ಸ್ವಲ್ಪ ಸಮಯದ ನಂತರ ತೊಳೆದರೆ ನಿವಾರಣೆಯಾಗುವುದು.
-ಮೊಡವೆ ಸಮಸ್ಯೆಯಿದ್ದರೆ ಪುದೀನಾ ರಸಕ್ಕೆ ನಿಂಬೆ ರಸ, ಅರಿಶಿಣ ಮಿಶ್ರಣ ಮಾಡಿ ಪ್ರತಿದಿನ ರಾತ್ರಿ ಮಲಗುವ ಮುಂಚೆ ಹಚ್ಚಬೇಕು.
-ಮುಖದಲ್ಲಿರುವ ಕಪ್ಪು ಕಲೆ, ಬ್ಲಾಕ್‌ಹೆಡ್ಸ್ ಹೋಗಲು ಪುದೀನಾ ರಸಕ್ಕೆ ಕಡ್ಲೆ ಪುಡಿ ಬೆರಸಿದ ಪೇಸ್ಟನ್ನು ವಾರಕ್ಕೊಮ್ಮೆ ಚರ್ಮಕ್ಕೆ ಲೇಪಿಸುತ್ತಿದ್ದರೆ, ಮೊಡವ ನಿವಾರಣೆಯಾಗಿ, ಕಾಂತಿ ಹೆಚ್ಚಾಗುತ್ತದೆ.
- ಪುದೀನಾದಲ್ಲಿ ಆ್ಯಂಟಿ ಬ್ಯಾಕ್ಟಿರಿಯಾ ಅಂಶಗಳು ಹೆಚ್ಚಿದ್ದು, ಶ್ವಾಸಕೋಶದ ಆರೋಗ್ಯಕ್ಕೂ ಒಳ್ಳೆಯದು. ಶ್ವಾಸಕೋಶಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಿಗಿಸಿ, ಪ್ರತಿಕೂಲ ಪರಿಣಾಮಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
- ಒಂದು ಲೋಟ ನೀರಿಗೆ ಚಹಾ ಪುಡಿಯೊಂದಿಗೆ, ಪುದೀನಾ ಸೊಪ್ಪು ಹಾಕಿ ಕುದಿಸಿ, ಕುಡಿದರೆ ಆಗಾಗ ಕಾಡುವ ತಲೆ ನೋವಿಗೆ ಉತ್ತಮ ಮದ್ದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.