ಮಗುವಾದ ಮೇಲೆ ತೂಕ ಇಳಿಸೋದು ಹೇಗೆ?

By Kannadaprabha NewsFirst Published Sep 24, 2018, 2:03 PM IST
Highlights

ಹೆರಿಗೆಯ ಬಳಿಕ ಮೊದಲಿನಂತೆ ದೇಹ ಶೇಪ್ ಪಡೆದುಕೊಳ್ಳಲು, ತೂಕ ಇಳಿಸಿಕೊಳ್ಳಲು ಇಲ್ಲಿ ಕೆಲವು ಟಿಪ್ಸ್ ಗಳಿವೆ. ಸಾಮಾನ್ಯವಾಗಿ ಗರ್ಭಾವಧಿಯಲ್ಲಿ 5 ರಿಂದ 18 ಕೆಜಿಯವರೆಗೂ ತೂಕ ಹೆಚ್ಚಾಗುತ್ತದೆ. ಹೆರಿಗೆಯಾದ ಬಳಿಕ ಸ್ವಲ್ಪಮಟ್ಟಿನ ತೂಕವಷ್ಟೇ ಕಡಿಮೆಯಾಗುತ್ತದೆ. ಆದರೆ ಪ್ರೆಗ್ನೆನ್ನಿಗೂ ಮೊದಲಿನಂತಾಗಲು ಕೆಲವು ಟಿಪ್ಸ್ ಗಳು ಇಲ್ಲಿವೆ.

ಮಗುವಿಗೆ ಎದೆ ಹಾಲು ಕುಡಿಸಿ

ನಿಯಮಿತವಾಗಿ ಮಗುವಿಗೆ ಎದೆಹಾಲು ಕುಡಿಸುತ್ತಿದ್ದರೆ ದಿನಕ್ಕೆ 500 ಕ್ಯಾಲೊರಿ ಬರ್ನ್ ಆಗುತ್ತೆ. ಮಗುವಿಗೆ ಸಾಕಷ್ಟು ಹಾಲುಣಿಸಲು ಸಮೃದ್ಧ ಆಹಾರ ಬೇಕು. ಹಾಲು, ನೀರು, ಹಸಿರು ತರಕಾರಿ, ಸೊಪ್ಪು ಇತ್ಯಾದಿಗಳನ್ನುಹೆಚ್ಚೆಚ್ಚು ತಿನ್ನುವುದೂ ಅವಶ್ಯಕ. 

ಆಗಾಗ ತಿನ್ನುತ್ತಿರಿ

ಈ ಹಂತದಲ್ಲಿ ದಿನವೊಂದಕ್ಕೆ 1800 ರಿಂದ 2200 ಕ್ಯಾಲೊರಿಯಷ್ಟು ಆಹಾರ ಅತ್ಯಗತ್ಯ. ಇಲ್ಲವಾದರೆ ಮಗುವಿಗೆ ಎದೆಹಾಲುಣಿಸುವಾಗ ಪೌಷ್ಠಿಕಾಂಶದ ಕೊರತೆ ಉಂಟಾಗುತ್ತದೆ. ಇದರರ್ಥ ಪ್ರತೀಸಲವೂ ಸಿಕ್ಕಾಪಟ್ಟೆ ತಿನ್ನೋದಲ್ಲ, ಸ್ವಲ್ಪ ಸ್ವಲ್ಪವೇ ತಿನ್ನಿ. ಪ್ರೊಟೀನ್ ಮತ್ತು ಕಾರ್ಬೊಹೈಡ್ರೇಟ್ ಅಂಶ ಇರುವ ಆಹಾರ ಸೇವನೆಯಿಂದ ಎನರ್ಜಿ ಪಡೆಯುವುದು ಸಾಧ್ಯವಾಗುತ್ತ

ಮಗುವಿನ ಜೊತೆಗೆ ಚಟುವಟಿಕೆಯಿಂದಿರಿ

ಸಾಮಾನ್ಯ ಬಾಣಂತಿಯರಿಗೆ ಹೆಚ್ಚು ವ್ಯಾಯಾಮ ಮಾಡುವಂತಿರುವುದಿಲ್ಲ. ಹಾಗಾಗಿ ಮಗುವಿನ ಜೊತೆಗೆ ಚಟುವಟಿಕೆಯಿಂದ ಇರುವುದೇ ಅವರಿಗೆ ವ್ಯಾಯಾಮ. ಮಗುವಿನೊಂದಿಗೆ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ ದೇಹ ಚುರುಕಾಗಿರುತ್ತದೆ. ಮನಸ್ಸೂ ಹ್ಯಾಪಿಯಾಗಿರುತ್ತದೆ. ತೀವ್ರ ವ್ಯಾಯಾಮ ಮಾಡಬೇಡಿ. ನೀವು ಈ ಅವಧಿಯಲ್ಲಿ ಮಾಡಬಹುದಾದ ಬೆಸ್ಟ್ ವ್ಯಾಯಾಮ ಅಂದರೆ ಬ್ರಿಸ್ಕ್ ವಾಕ್ ಅರ್ಥಾತ್ ವೇಗದ ನಡಿಗೆ. 

ಮಗುವಿನೊಂದಿಗೆ ಎಕ್ಸರ್ ಸೈಸ್

ಮಗುವನ್ನು ಮೇಲಕ್ಕೆತ್ತಿ ಸ್ವಲ್ಪ ಹೊತ್ತು ಹಿಡಿಯಿರಿ. ಕೈ ಮತ್ತು ಕಾಲುಗಳು ನೇರವಾಗಿರುವಂತೆ ನೋಡಿಕೊಳ್ಳಿ. ಈ ಸಮಯದಲ್ಲಿ ಹೊಟ್ಟೆ ಭಾಗ ಹೆಚ್ಚು ಬೊಜ್ಜಿನಿಂದ  ಕೂಡಿರುತ್ತದೆ. ಮಗುವನ್ನು ಎತ್ತಿ ಇಳಿಸುತ್ತ ದೀರ್ಘ ಉಸಿರಾಟ ಮಾಡುವುದು ಒಳ್ಳೆಯದು. ನೆಲದ ಮೇಲೆ ಅಂಗಾತ ಮಲಗಿ ಕಾಲನ್ನು ಹಿಂದಕ್ಕೆ ವಿ ಆಕಾರದಲ್ಲಿ ಮಡಚಿ ಮೇಲಕ್ಕೆದ್ದು ಮಲಗಿ ಮಾಡುವ ಕ್ರಂಚಸ್ ಹೊಟ್ಟೆ ಭಾಗದ ಬೊಜ್ಜು ಕರಗಿಸುತ್ತದೆ.

ಹೆಚ್ಚು ನೀರು ಕುಡಿಯಿರಿ

ನಿಮ್ಮ ದೇಹ ಶುಷ್ಕವಾಗಿರದೇ ತೇವಾಂಶ ಉಳಿಸಿಕೊಳ್ಳಲು ದಿನ ಪೂರ್ತಿ ಹೆಚ್ಚೆಚ್ಚು ನೀರು ಕುಡಿಯೋದು ಒಳ್ಳೆಯದು. ಎದೆ ಹಾಲುಣಿಸುವ ಸಂದರ್ಭ ಕೆಫಿನ್ ಅಂಶ ಇರುವ ಕಾಫಿ ಸೇವನೆ ಕಡಿಮೆ ಮಾಡಿ. ಫಾಸ್ಟ್‌ಫುಡ್ ತಿನ್ನುವುದನ್ನು ತಪ್ಪಿಸಿ. ಮನೆ ಊಟ ಮಾತ್ರ ಮಾಡಿ. 

click me!
Last Updated Sep 24, 2018, 2:03 PM IST
click me!