
ಮೆಂತ್ಯ ಒಂದು ವರ್ಷಾಯು ಸಸ್ಯವಾಗಿದೆ. ಭಾರತದಾದ್ಯಂತ ಮೆಂತ್ಯವನ್ನು ಬೆಳೆಯಲಾಗುತ್ತದೆ. ನಿತ್ಯ ಭಾರತೀಯರ ಅಡುಗೆ ಮನೆಯಲ್ಲಿ ಉಪಯೋಗಿಸುವ ಮೆಂತ್ಯದಲ್ಲಿ ಎಷ್ಟೋಂದು ಆರೋಗ್ಯಕಾರಿ ಗುಣಗಳಿವೆ ಗೊತ್ತಾ..? ಅದರ ಅದ್ಭುತ ಉಪಯೋಗಗಳ ಬಗ್ಗೆ ತಿಳಿದುಕೊಳ್ಳಿ...
ಮೆಂತ್ಯದ ಉಪಯೋಗ – ಆರೋಗ್ಯಕಾರಿ ಗುಣಗಳು
*ಬೀಜದ ಚೂರ್ಣವನ್ನು ದಿನಕ್ಕೆ ಎರಡು ಬಾರಿ ಸಕ್ಕರೆ ಕಾಯಿಲೆಯಲ್ಲಿ, ರಕ್ತದೊತ್ತಡದಲ್ಲಿ, ನರ ದೌರ್ಬಲ್ಯಗಳಲ್ಲಿ ನೀಡಬೇಕು
*ಸೊಪ್ಪಿನ ಕಲ್ಕವನ್ನು ಊತದಲ್ಲಿ ಲೇಪಿಸುವುದರಿಂದ ಊತವು ಕಡಿಮೆಯಾಗುತ್ತದೆ
*ಮೆಂತ್ಯ ಸೊಪ್ಪಿನಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತಹೀನತೆ ಇರುವವರಿಗೆ ನೀಡಬೇಕು.
*ರಕ್ತಭೇದಿಯಲ್ಲಿ ಮತ್ತು ರಕ್ತಹೀನತೆ ಇರುವಾಗ – ಬೀಜವನ್ನು ನೆನಸಿ ನೀರನ್ನು ಕುಡಿಯಬೇಕು
*ಮೆಂತ್ಯ ಸೊಪ್ಪನ್ನು ಜೀರ್ಣಶಕ್ತಿ ವೃದ್ಧಿಸಲು ಆಹಾರದಲ್ಲಿ ಬಳಸುತ್ತಾರೆ
*ಮೆಂತ್ಯ ಸೊಪ್ಪನ್ನು ಜೀರ್ಣಶಕ್ತಿ ವೃದ್ಧಿಸಲು ಆಹಾರದಲ್ಲಿ ಬಳಸುತ್ತಾರೆ.
*ಮೆಂತ್ಯ ಬೀಜವನ್ನು ರುಬ್ಬಿ ತಲೆಗೆ ಹಚ್ಚಿ ಒಂದು ಗಂಟೆಯ ಅನಂತರ ತಲೆಸ್ನಾನ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.
*ಸಂಧಿವಾತದಲ್ಲಿ ಮೆಂತ್ಯ ಕಷಾಯ ಸೇವನೆ ಪರಿಣಾಮಕಾರಿ
*ಮೆಂತ್ಯದ ಮೋದಕ ಸೊಂಟನೋವು ನಿವಾರಕ ಮತ್ತು ಶಕ್ತಿವರ್ಧಕ
*ಹೆರಿಗೆ ಅನಂತರ ಮೆಂತ್ಯದ ಮೋದಕ ಕೊಡುತ್ತಾರೆ
*ಮೆಂತ್ಯ ಕಲ್ಕ ತಲೆಗೆ ಹಚ್ಚುವುದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.